ಸಚಿವ ಎಂಬಿಟಿ ನಾಗರಾಜ್ ಮನವೊಲಿಕೆಗೆ ಯತ್ನ; ಜಿ. ಪರಮೇಶ್ವರ್ ನೇತೃತ್ವದ ಟೀಮ್​ನಿಂದ ಮತ್ತೊಂದು ಸುತ್ತಿನ ಮಾತುಕತೆ

ಡಿ.ಕೆ. ಶಿವಕುಮಾರ್ ಎಷ್ಟೇ ಪ್ರಯತ್ನಪಟ್ಟರೂ ಎಂಟಿಬಿ ನಾಗರಾಜ್ ಅವರ ಮನವೊಲಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ಇಂದು ಬೆಳಗ್ಗೆ 11.30 ಗಂಟೆಗೆ ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ಎಂಎಲ್ಸಿ ಭೋಜೇಗೌಡ ಹಾಗೂ ಎಂಟಿಬಿ ಹತ್ತಿರದ ಸಂಬಂಧಿ ಸಿ.ಎಂ. ಧನಂಜಯ ಅವರನ್ನೊಳಗೊಂಡ ತಂಡವನ್ನು ಮನವೊಲಿಕೆ ಕಳುಹಿಸಲು ಪಕ್ಷ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

MAshok Kumar | news18
Updated:July 13, 2019, 9:21 AM IST
ಸಚಿವ ಎಂಬಿಟಿ ನಾಗರಾಜ್ ಮನವೊಲಿಕೆಗೆ ಯತ್ನ; ಜಿ. ಪರಮೇಶ್ವರ್ ನೇತೃತ್ವದ ಟೀಮ್​ನಿಂದ ಮತ್ತೊಂದು ಸುತ್ತಿನ ಮಾತುಕತೆ
ಎಚ್​.ಡಿ ಕುಮಾರಸ್ವಾಮಿ-ಜಿ ಪರಮೇಶ್ವರ್​
  • News18
  • Last Updated: July 13, 2019, 9:21 AM IST
  • Share this:
ಬೆಂಗಳೂರು (ಜುಲೈ.13); ಶುಕ್ರವಾರ ವಿಧಾನಮಂಡಲದ ಮೊದಲ ಅಧಿವೇಶನದಲ್ಲಿ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ ತಮಗೆ ವಿಶ್ವಾಸ ಮತ ಸಾಬೀತುಪಡಿಸಲು ಸಮಯಾವಕಾಶ ನೀಡಿ ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಅತೃಪ್ತರ ಮನವೊಲಿಕೆಗೆ ಮೈತ್ರಿ ನಾಯಕರು ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.

ಅತೃಪ್ತರ ಮನವೊಲಿಕೆಯಲ್ಲಿ ನಿನ್ನೆಯಿಂದಲೂ ಸಕ್ರೀಯರಾಗಿರುವ ಡಿ.ಕೆ. ಶಿವಕುಮಾರ್ ಸಚಿವ ಎಂಟಿಬಿ ನಾಗರಾಜ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಆದರೆ, ಎಂಟಿಬಿ ನಾಗರಾಜ್ ಡಿಕೆಶಿ ಮಾತಿನಿಂದ ತೃಪ್ತರಾಗಿಲ್ಲ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಡಿಕೆಶಿಯನ್ನೂ ತರಾಟೆಗೆ ತೆಗೆದುಕೊಂಡಿರುವ ಎಂಟಿಬಿ,

“ಈ ಸರ್ಕಾರ ನಿಮಗೆ, ದೇವೇಗೌಡರ ಕುಟುಂಬಕ್ಕೆ, ಪರಮೇಶ್ವರ್ ಅವರಿಗೆ ಬೇಕಾಗಿರೋದು ನನಗಲ್ಲ. ನನ್ನ ಇಲಾಖೆಯಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಹೆಚ್.ಡಿ. ರೇವಣ್ಣ ಹಸ್ತಕ್ಷೇಪ ಮಾಡಿದ್ರು. ನನಗೆ ಗೊತ್ತಿಲ್ಲದೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರು. ರಾಜೀವ್ ವಸತಿ ಯೋಜನೆ ಮನೆಗಳ ಕೆಲಸಗಳು ಅರ್ಧಕ್ಕೆ ನಿಂತಿವೆ. 1,200 ಕೋಟಿ ಹಣ ಬಿಡುಗಡೆ ಮಾಡಬೇಕಿತ್ತು ಸಿಎಂ ಬಳಿ ಹೋಗಿ ಕೇಳಿಕೊಂಡೆ ಆದರೆ ಅವರು ಕ್ಯಾರೆ ಎನ್ನಲಿಲ್ಲ. ಇದೇ ಕಾರಣಕ್ಕೆ ನಾನು ರಾಜಕೀಯ ನಿವೃತ್ತಿ ತಗೋತ್ತೀನಿ” ಎಂದು ಹೇಳಿ ಕಳಿಸಿದ್ದಾರೆ" ಎಂದು ತಿಳಿದುಬಂದಿದೆ. ಪರಿಣಾಮ ಎಂಟಿಬಿ ಮನವೊಲಿಕೆಗೆ ಕಾಂಗ್ರೆಸ್ ಇದೀಗ ಹೊಸ ಟೀಮ್ ಒಂದನ್ನು ರಚನೆ ಮಾಡಿದೆ.

ಇದನ್ನೂ ಓದಿ : ರೆಬೆಲ್​ ಶಾಸಕರ ಮನವೊಲಿಕೆಗೆ ಡಿಕೆಶಿ ಮಾಸ್ಟರ್ ಪ್ಲ್ಯಾನ್​; ಮೈತ್ರಿ ಬೆಂಬಲಿಸಲು ಅತೃಪ್ತರ ಒಪ್ಪಿಗೆ?

ಪರಮೇಶ್ವರ್ ನೇತೃತ್ವದ ಟೀಮ್ ಇಂದ ಮತ್ತೊಂದು ಪ್ರಯತ್ನ;

ಡಿ.ಕೆ. ಶಿವಕುಮಾರ್ ಎಷ್ಟೇ ಪ್ರಯತ್ನಪಟ್ಟರೂ ಎಂಟಿಬಿ ನಾಗರಾಜ್ ಅವರ ಮನವೊಲಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ಇಂದು ಬೆಳಗ್ಗೆ 11.30 ಗಂಟೆಗೆ ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ಎಂಎಲ್ಸಿ ಭೋಜೇಗೌಡ ಹಾಗೂ ಎಂಟಿಬಿ ಹತ್ತಿರದ ಸಂಬಂಧಿ ಸಿ.ಎಂ. ಧನಂಜಯ ಅವರನ್ನೊಳಗೊಂಡ ತಂಡವನ್ನು ಮನವೊಲಿಕೆ ಕಳುಹಿಸಲು ಪಕ್ಷ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಆದರೆ, ಇವರ ಮಾತಿಗೆ ಎಂಟಿಬಿ ಮಣೆ ಹಾಕ್ತಾರ? ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಮೈತ್ರಿ ಸರ್ಕಾರದ ಪರ ಮತ ಚಲಾಯಿಸ್ತಾರ? ಅನ್ನೋದನ್ನು ಕಾದು ನೋಡಬೇಕಿದೆ.(ವರದಿ ಚಿದಾನಂದ ಪಟೇಲ್)

ಇದನ್ನೂ ಓದಿ : ಈಶ್ವರಪ್ಪ ಸಿಎಂ ಆಗೋಕೆ ಸ್ಕೆಚ್ ಹಾಕಿದ್ರಾ? ಸಾ.ರಾ. ಮಹೇಶ್ ವಿವರಣೆ ಕೇಳಿ ಸಿದ್ದರಾಮಯ್ಯ ಗರಂ

First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading