ಕಾಂಗ್ರೆಸ್​ನ ನೂತನ ನಾಲ್ವರು ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ

ಸಂಪುಟ ವಿಸ್ತರಣೆ ಬಳಿಕ ಹೊಸದಾಗಿ ಸೇರ್ಪಡೆಯಾದ ಸತೀಶ್​ ಜಾರಕಿಹೊಳಿ, ಇ. ತುಕಾರಂ, ಪಿಟಿ ಪರಮೇಶ್ವರ್​ ನಾಯಕ ಹಾಗೂ ಎಂಟಿಬಿ ನಾಗರಾಜ್​ಗೆ ಖಾತೆಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. 

Seema.R | news18
Updated:March 6, 2019, 11:19 AM IST
ಕಾಂಗ್ರೆಸ್​ನ ನೂತನ ನಾಲ್ವರು ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ
ಕಾಂಗ್ರೆಸ್​ ಸಚಿವರು
  • News18
  • Last Updated: March 6, 2019, 11:19 AM IST
  • Share this:
ಬೆಂಗಳೂರು (ಮಾ.06):   ವಿಸ್ತರಣೆ ಬಳಿಕ ಮತ್ತೊಮ್ಮೆ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದೆ. ಸಚಿವ ಸ್ಥಾನಕ್ಕೆ ಹೊಸದಾಗಿ ಸೇರ್ಪಡೆಯಾದ ನಾಲ್ಕು ಸಚಿವರಿಗೆ ಜಿಲ್ಲೆಯ ಉಸ್ತುವಾರಿ ಜವಬ್ದಾರಿಯನ್ನು ನೀಡಲಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಬಲಗೊಳಿಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಸಂಪುಟ ವಿಸ್ತರಣೆ ಬಳಿಕ ಹೊಸದಾಗಿ ಸೇರ್ಪಡೆಯಾದ ಸತೀಶ್​ ಜಾರಕಿಹೊಳಿ, ಇ. ತುಕಾರಂ, ಪಿಟಿ ಪರಮೇಶ್ವರ್​ ನಾಯಕ ಹಾಗೂ ಎಂಟಿಬಿ ನಾಗರಾಜ್​ಗೆ ಖಾತೆಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. 

ರಮೇಶ್​ ಜಾರಕಿಹೊಳಿ ಉಸ್ತುವಾರಿ ಹೊಂದಿದ್ದ ಬೆಳಗಾವಿ ಕ್ಷೇತ್ರವನ್ನು ಅರಣ್ಯ ಸಚಿವ ಸತೀಶ್​ ಜಾರಕಿಹೊಳಿಗೆ. ಆರ್​ ಶಂಕರ್​ ಹೊಣೆ ಹೊತ್ತಿದ್ದ ಕೊಪ್ಪಳ ಜಿಲ್ಲೆಯನ್ನು ಇ ತುಕಾರಾಂಗೆ ಹಾಗೂ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದ ಎನ್​ ಮಹೇಶ್​ಗೆ ನೀಡಲಾಗಿದ್ದ ಗದಗವನ್ನು ಮುಜರಾಯಿ ಸಚಿವ ಪಿಟಿ ಪರಮೇಶ್ವರ ನಾಯಕ್​ಗೆ ನೀಡಲಾಗಿದೆ. ಇನ್ನು ಮಕೋಲಾರ, ಬೆಂಗಳೂರು ಗ್ರಾಮಾಂತರ  ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಿದ್ದ ಕೃಷ್ಣ ಬೈರೇಗೌಡ ಅವರ ಬಳಿಯಿದ್ದ ಬೆಂಗಳೂರು ಗ್ರಾಮಾಂತರವನ್ನು ವಸತಿ ಸಚಿವರ ಎಂಟಿಬಿ ನಾಗರಾಜ್​ಗೆ ವಹಿಸಲಾಗಿದೆ.

First published:March 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ