Congress Protest: ‘ದೇಶ ಉಳಿಸಲು ಕಾಂಗ್ರೆಸ್​ನನ್ನು ಕಿತ್ತು ಒಗೆಯಬೇಕು’; ಸಿದ್ದರಾಮಯ್ಯ ಎಡವಟ್ಟಿನ ಮಾತಿಗೆ ಕಾರ್ಯಕರ್ತರೇ ಫುಲ್ ಶಾಕ್

ಸಿದ್ದರಾಮಯ್ಯ ಮಾತು ಕೇಳಿ ಶಾಕ್​ ಆದ ಕಾರ್ಯಕರ್ತರು ಕೂಗುತ್ತಿದ್ದಂತೆ, ಸಿದ್ದರಾಮಯ್ಯ ತಕ್ಷಣ ತಪ್ಪು ತಿದ್ದಿಕೊಂಡ್ರು. ಇದು ಉದ್ದೇಶ ಪೂರ್ವಕವಾಗಿ ಆಡಿದ ಮಾತಲ್ಲ ಕಣ್ರಪ್ಪಾ ಬಾಯಿ ತಪ್ಪಿ ಆಡಿದ ಮಾತು ಎಂದು ಹೇಳಿ ಮಾತು ಮುಂದುವರಿಸಿದ್ರು.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬೆಂಗಳೂರು (ಏ.11): ಬಿಜೆಪಿಯ (BJP) ವಿರುದ್ಧ ವಾಗ್ದಾಳಿ ನಡೆಸೋ ಬರದಲ್ಲಿ ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಎಂಥಾ ಎಡವಟ್ಟಿನ ಹೇಳಿಕೆಯನ್ನು (Awkward Statement) ನೀಡಿದ್ದಾರೆ ಗೊತ್ತಾ? ಕಾಂಗ್ರೆಸ್​ನನ್ನೇ ಕಿತ್ತು ಒಗೆಯಿರಿ ಎಂದಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ (Congress) ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ (Protest) ನಡೆಸುತ್ತಿದ್ದು, ಈ ವೇಳೆ ಮಾತಾಡಿದ ಸಿದ್ದರಾಮಯ್ಯ ಎಡವಟ್ಟಿನ ಹೇಳಿಕೆ ನೀಡಿದ್ದಾರೆ. ರಾಜ್ಯ ಉಳಿಸುವುದಕ್ಕೆ, ದೇಶದ ಉಳಿಸುವುದಕ್ಕೆ, ಸಂವಿಧಾನ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷವನ್ನು ಕಿತ್ತು ಒಗೆಯಬೇಕು ಎಂದು ಸಿದ್ದರಾಮಯ್ಯ ಹೇಳ್ತಿದ್ದಂತೆ ನೆರೆದಿದ್ದ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರು ಗಾಬರಿಯಾಗಿ ಸರ್​ ಏನ್​ ಹೇಳಿದ್ದೀರಾ ಎಂದು ಕೂಗಿದ್ರು.

ಸರ್​ ಕಾಂಗ್ರೆಸ್​ ಅಲ್ಲ ಬಿಜೆಪಿ ಅಂತ ಹೇಳಿ..

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಈ ಸರ್ಕಾರವನ್ನು ಕಿತ್ತು ಒಗೆಯಬೇಕು. ನಾವು ಅಧಿಕಾರ ಅನುಭವಿಸಬೇಕು ಎಂದಲ್ಲ. ರಾಜ್ಯ ಉಳಿಸುವುದಕ್ಕೆ, ದೇಶದ ಉಳಿಸುವುದಕ್ಕೆ, ಸಂವಿಧಾನ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷವನ್ನು ಕಿತ್ತು ಒಗೆಯಬೇಕು ಎಂದ ಸಿದ್ದರಾಮಯ್ಯ ಮಾತಿಗೆ ಕಾಂಗ್ರೆಸ್​ ನಾಯಕರೇ ಬೆಚ್ಚಿಬಿದ್ರು. ಸರ್ ಕಾಂಗ್ರೆಸ್ ಅಲ್ಲ, ಬಿಜೆಪಿ ಸರ್  ಎಂದಿ ಕೂಗಿ ಹೇಳಿದ್ರು.

ಬಾಯಿ ತಪ್ಪಿ ಬಂದ ಮಾತು-ಸಿದ್ದರಾಮಯ್ಯ

ಸಿದ್ದರಾಮಯ್ಯ ಮಾತು ಕೇಳಿ ಶಾಕ್​ ಆದ ಕಾರ್ಯಕರ್ತರು ಕೂಗುತ್ತಿದ್ದಂತೆ, ಸಿದ್ದರಾಮಯ್ಯ ತಕ್ಷಣ ತಪ್ಪು ತಿದ್ದಿಕೊಂಡ್ರು. ಇದು ಉದ್ದೇಶ ಪೂರ್ವಕವಾಗಿ ಆಡಿದ ಮಾತಲ್ಲ ಕಣ್ರಪ್ಪಾ ಬಾಯಿ ತಪ್ಪಿ ಆಡಿದ ಮಾತು ಎಂದು ಹೇಳಿ ಮಾತು ಮುಂದುವರಿಸಿದ್ರು, ದೇಶವನ್ನು ಉಳಿಸಿಕೊಳ್ಳಲು ಬಿಜೆಪಿಯನ್ನು ಕಿತ್ತು ಒಗೆಯಬೇಕು ಎಂದು ಹೇಳಿದ್ರು.

ಮೋದಿ ಸರ್ಕಾರ ನಮಗೆ ಬೇಕಾ?

ಮೋದಿ ಅಧಿಕಾರಕ್ಕೆ ಬರುವ ಮುನ್ನ 53.11 ಲಕ್ಷ ಕೋಟಿ ರೂ. ಸಾಲ ಇತ್ತು, ಈಗ ಅದು 152 ಲಕ್ಷ ಕೋಟಿ ರೂ. ಗೆ ಹೆಚ್ಚಾಗಿದೆ. ಹೀಗೆ ಆದರೆ ದೇಶ ಉಳಿಯುತ್ತದೆಯಾ? ಎಂದು ಸಿದ್ದರಾಮಯ್ಯ ಕಿಡಿಕಾರಿದ್ರು. ಒಟ್ಟು ಬಜೆಟ್ ನಲ್ಲಿ ಶೇ. ರಷ್ಟು ಹಣ ಬಡ್ಡಿಗೆ ಹೋಗುತ್ತಿದೆ  ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾದರೆ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತವೆ. ವಿದ್ಯುತ್, ನೀರು, ಕಬ್ಬಿಣ ಬೆಲೆ ಹೆಚ್ಚಾಗಿದೆ. ಹೀಗೆ ಆದ್ರೆ ಸಾಮಾನ್ಯ ಜನರು ಬದುಕುವುದು ಹೇಗೆ ಎಂದು ಕಿಡಿಕಾರಿದ್ರು.

ಇದನ್ನೂ ಓದಿ: National Herald Scam: 2 ಗಂಟೆಗಳ ಕಾಲ ED ಅಧಿಕಾರಿಗಳಿಂದ ‘ಕೈ‘​ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರಣೆ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್  ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಪ್ರಚಾರ ಸಮಿತಿ‌ ಅಧ್ಯಕ್ಷ ಎಂಬಿ ಪಾಟೀಲ್ ಸೇರಿದಂತೆ ಕಾಂಗ್ರೆಸ್ ಶಾಸಕರು, ಮುಖಂಡರು ಭಾಗಿಯಾದರು.

ಇದನ್ನೂ ಓದಿ: Karnataka Politics: ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ? 2023ರಲ್ಲಿ ಚುನಾವಣಾ ಅಖಾಡಕ್ಕಿಳೀತಾರಾ ಅಂಬಿ ಪುತ್ರ ಅಭಿಷೇಕ್!?

ಪೆಟ್ರೋಲ್ ಹಾಗೂ ಡೀಸೆಲ್‌ ದರ ಗಗನಕ್ಕೆ ಏರಿಕೆಯಾಗಿದ್ದು ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಕೂಡಲೇ ತೈಲ ದರವನ್ನು ಇಳಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪದೇ ಪದೇ ಪಟ್ರೋಲ್, ಡಿಸೇಲ್,ಗ್ಯಾಸ್ ಸಿಲಿಂಡರ್, ಪಿಎನ್ ಜಿ, ಸಿಎನ್ ಜಿ ಬೆಲೆಗಳನ್ನು ಏರಿಸುತ್ತಿದೆ. ಮೋದಿ ಸರ್ಕಾರ ಜನವಿರೋಧಿ ಎಂಬುದಕ್ಕೆ ಇದು ಸಾಕ್ಷಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಭಿತ್ತಿಪತ್ರ ಪ್ರದರ್ಶನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
Published by:Pavana HS
First published: