ಬಿಎಸ್​ವೈ ಆಡಿಯೋದಲ್ಲಿ ಮೋದಿ, ಷಾ ಹೆಸರು; ತನಿಖೆ ನಡೆಸುವಂತೆ ರಾಜ್ಯ ಸಂಸದರಿಂದ ಪ್ರತಿಭಟನೆ

ರಾಜ್ಯದಲ್ಲಿ ಶತಯಾಗತಯ ಮಾಡಿ ಮೈತ್ರಿ ಸರ್ಕಾರ ಬೀಳಿಸಲು ದೆಹಲಿ ನಾಯಕರು ತಿಳಿಸಿದ್ದಾರೆ. ಅವರ ಕುಮ್ಮಕ್ಕಿನಿಂದಲೇ ಈ ರೀತಿಯಾಗಿ ವ್ಯವಸ್ಥೆಯನ್ನು ಕೊಂಡುಕೊಂಡಂತೆ ಯಡಿಯೂರಪ್ಪ ಮಾತನಾಡಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು

Seema.R | news18
Updated:February 11, 2019, 12:12 PM IST
ಬಿಎಸ್​ವೈ ಆಡಿಯೋದಲ್ಲಿ ಮೋದಿ, ಷಾ ಹೆಸರು; ತನಿಖೆ ನಡೆಸುವಂತೆ ರಾಜ್ಯ ಸಂಸದರಿಂದ ಪ್ರತಿಭಟನೆ
ಸಂಸದರ ಪ್ರತಿಭಟನೆ
Seema.R | news18
Updated: February 11, 2019, 12:12 PM IST
ಧರಣೀಶ್​ ಬೂಕನಕೆರೆ

ನವದೆಹಲಿ(ಫೆ.11): ರಾಜ್ಯದಲ್ಲಿ ಯಡಿಯೂರಪ್ಪ ಅವರು ನಡೆಸುತ್ತಿರುವ ಆಪರೇಷನ್​ ಕಮಲಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಹಾಗೂ ಪ್ರಧಾನಿ ಮೋದಿ ಬೆಂಬಲವಿದೆ. ಈ ಕುರಿತು ತನಿಖೆ ಆಗಬೇಕೆಂದು ಆಗ್ರಹಿಸಿ ರಾಜ್ಯದ ಸಂಸದರು ಹಾಗೂ ಕಾಂಗ್ರೆಸ್​ ನಾಯಕರು ಸಂಸತ್ತಿನ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಗುರುಮಠ್ಠಕಲ್​  ಶಾಸಕನ ಮಗ ಶರಣಗೌಡ ಪಾಟೀಲ್​ ಜೊತೆ ಯಡಿಯೂರಪ್ಪ ಸಂಭಾಷಣೆ ನಡೆಸಿರುವ ಆಡಿಯೋದಲ್ಲಿ ಸ್ಪೀಕರ್​, ಅಮಿತ್​ ಷಾ, ಪ್ರಧಾನಿ ಹಾಗೂ ನ್ಯಾಯಾಧೀಶರ ಹೆಸರು ಕೂಡ ಉಲ್ಲೇಖವಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಕೆಡವಲು ನಿರ್ಧರಿಸಿರುವ ಬಿಜೆಪಿಗೆ ದೆಹಲಿ ನಾಯಕರು ಬೆಂಬಲವಾಗಿ ನಿಂತಿದ್ದಾರೆ. ಇದರಿಂದಲೇ ತಮ್ಮ ಪ್ರಯತ್ನ ವಿಫಲವಾದರೂ ಮತ್ತೆ ಮತ್ತೆ ಈ ಕಾರ್ಯಕ್ಕೆ ಅವರು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ. ಕಪ್ಪು ಹಣ ತಡೆಗಟ್ಟುತ್ತೇವೆ ಎಂದ ನಾಯಕರು ಈಗ ಅದೇ ಕಪ್ಪು ಹಣದ ಮೂಲಕ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ. ಇದೊಂದು ಭಷ್ಟ್ರ ಸರ್ಕಾರ. ರಾಜ್ಯದಲ್ಲಿ ಶತಯಾಗತಯ ಮಾಡಿ ಮೈತ್ರಿ ಸರ್ಕಾರ ಬೀಳಿಸಲು ದೆಹಲಿ ನಾಯಕರು ತಿಳಿಸಿದ್ದಾರೆ. ಅವರ ಕುಮ್ಮಕ್ಕಿನಿಂದಲೇ ಈ ರೀತಿಯಾಗಿ ವ್ಯವಸ್ಥೆಯನ್ನು ಕೊಂಡುಕೊಂಡಂತೆ ಯಡಿಯೂರಪ್ಪ ಮಾತನಾಡಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಸದನದಲ್ಲಿಂದು ಆಡಿಯೋ-ವಿಡಿಯೋಗಳ ಕಲಹ; ಧ್ವನಿ ಒಪ್ಪಿಕೊಂಡ ಬಿಎಸ್​ವೈ ರಾಜೀನಾಮೆ ನೀಡಲಿದ್ದಾರಾ?

ಮೈತ್ರಿ ಸರ್ಕಾರ ವಿರುದ್ಧ ಈಗಾಗಲೇ ಮೂರು ನಾಲ್ಕು ಬಾರಿ ಈ ರೀತಿ ಆಪರೇಷನ್​ ಕಮಲಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಆದರೆ, ಪ್ರತಿಬಾರಿಯೂ ಅವರ ಈ ಕಾರ್ಯ ಯಶಸ್ಸುಕಂಡಿಲ್ಲ. ಈಗ ಬಜೆಟ್​ಗೂ ಮುನ್ನ ಕೂಡ ಡೆಡ್​ಲೈನ್​ ನೀಡಿದ್ದರು. ಆದರೆ, ಅದು ಕೂಡ ಅವರಿಗೆ ರಿವರ್ಸ್​ ಆಗಿದ್ದಾರೆ. ಮೋದಿ ಹಾಗೂ ಷಾ ಇದರ ಹಿಂದಿರುವ ಕೈಗಳು ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಆಡಿಯೋ ಸಾಕ್ಷಿ ಈ ಕುರಿತು ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಕೆಸಿವೇಣುಗೋಪಾಲ್​, ಡಿಕೆ ಸುರೇಶ್​ ಸೇರಿದಂತೆ ರಾಜ್ಯ ಸಂಸದರು ಹಾಗೂ ಕಾಂಗ್ರೆಸ್​ ನಾಯಕರು ಬಿಜೆಪಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
Loading...

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...