ಕಲ್ಲಡ್ಕ ಪ್ರಭಾಕರ್​ ಹೋರಾಟದಿಂದ ಕನಕಪುರ ನಡುಗಿಬಿಡ್ತಾ?; ಸಂಸದ ಡಿಕೆ ಸುರೇಶ್​ ವ್ಯಂಗ್ಯ

ಕಲ್ಲಡ್ಕ ಪ್ರಭಾಕರ್​ ಅವರಿಗೆ ವಯಸ್ಸಾಗಿದೆ, ಗೌರವಯುತವಾಗಿ ಮಾತನಾಡಬೇಕು. ವಯಸ್ಸಾದ ಮೇಲೆ ಅರಳೋ ಮರಳೋ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಕಲ್ಲಡ್ಕ ತಲೆಕಟ್ಟವರಂತೆ ಮಾತನಾಡಿದ್ದಾರೆ- ಡಿಕೆ ಸುರೇಶ್​

news18-kannada
Updated:January 16, 2020, 11:18 AM IST
ಕಲ್ಲಡ್ಕ ಪ್ರಭಾಕರ್​ ಹೋರಾಟದಿಂದ ಕನಕಪುರ ನಡುಗಿಬಿಡ್ತಾ?; ಸಂಸದ ಡಿಕೆ ಸುರೇಶ್​ ವ್ಯಂಗ್ಯ
ಕಲ್ಲಡ್ಕ ಪ್ರಭಾಕರ್​ ಅವರಿಗೆ ವಯಸ್ಸಾಗಿದೆ, ಗೌರವಯುತವಾಗಿ ಮಾತನಾಡಬೇಕು. ವಯಸ್ಸಾದ ಮೇಲೆ ಅರಳೋ ಮರಳೋ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಕಲ್ಲಡ್ಕ ತಲೆಕಟ್ಟವರಂತೆ ಮಾತನಾಡಿದ್ದಾರೆ- ಡಿಕೆ ಸುರೇಶ್​
  • Share this:
ರಾಮನಗರ(ಜ.16): ಕನಕಪುರದ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿರೋಧಿಸಿ ಆರ್​ಎಸ್​ಎಸ್​ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ್​ ಭಟ್ ನೇತೃತ್ವದಲ್ಲಿ​ ಮೊನ್ನೆ 'ಕನಕಪುರ ಚಲೋ' ನಡೆದಿತ್ತು. ಡಿಕೆ ಸಹೋದರರ ವಿರುದ್ಧ ಕಲ್ಲಡ್ಕ ಪ್ರಭಾಕರ್ ತೀವ್ರ ವಾಗ್ದಾಳಿ ನಡೆಸಿದ್ದರು. 'ಕನಕಪುರ ಚಲೋ' ವಿರೋಧಿಸಿ ಮಾಜಿ ಸಚಿವ ಡಿಕೆ ಶಿವಕುಮಾರ್ ಕಲ್ಲಡ್ಕ ಪ್ರಭಾಕರ್​ ಮೇಲೆ ಕಿಡಿಕಾರಿದ್ದರು. ಈಗ ಸಂಸದ ಡಿ.ಕೆ.ಸುರೇಶ್​​ ಕೂಡ ಕಲ್ಲಡ್ಕ ಪ್ರಭಾಕರ್​ ವಿರುದ್ಧ ಗರಂ ಆಗಿದ್ದಾರೆ.

ನಿನ್ನೆ ಡಿಕೆ ಸುರೇಶ್​ ಕನಕಪುರದ ತುಂಗಣಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತ್ ಕಟ್ಟದ ಉದ್ಘಾಟನೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಲ್ಲಡ್ಕ ಪ್ರಭಾಕರ್​ ಅವರಿಗೆ ವಯಸ್ಸಾಗಿದೆ, ಗೌರವಯುತವಾಗಿ ಮಾತನಾಡಬೇಕು. ವಯಸ್ಸಾದ ಮೇಲೆ ಅರಳೋ ಮರಳೋ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಕಲ್ಲಡ್ಕ ತಲೆಕಟ್ಟವರಂತೆ ಮಾತನಾಡಿದ್ದಾರೆ," ಎಂದು  ವಾಗ್ದಾಳಿ ನಡೆಸಿದರು.

ಹಳಿ ತಪ್ಪಿದ ಮುಂಬೈ-ಭುವನೇಶ್ವರ ಎಕ್ಸ್​ಪ್ರೆಸ್​ ರೈಲು; 20 ಪ್ರಯಾಣಿಕರಿಗೆ ಗಾಯ

ಕಲ್ಲಡ್ಕ ಪ್ರಭಾಕರ್ ಹೋರಾಟ ನಡೆಸಿದ ಬಳಿಕ ಕನಕಪುರವೇನು ನಡುಗಿಬಿಡ್ತಾ? ಕಲ್ಲಡ್ಕ ಪ್ರಭಾಕರ್​ಗೆ ಹೆದರಿ ಕನಕಪುರ ಗಡಗಡ ಅಂತಾ ನಡುಗಿಬಿಡ್ತಾ ಎಂದು ಡಿಕೆ ಸುರೇಶ್​ ವ್ಯಂಗ್ಯ ಮಾಡಿದ್ದಾರೆ. ಇದೇ ವೇಳೆ, ಮಾಧ್ಯಮಗಳ ವಿರುದ್ಧ ಡಿಕೆ ಸುರೇಶ್​ ಗರಂ ಆದರು. ಮಾಧ್ಯಮಗಳು ವ್ಯಾಪಾರ ಸಂಸ್ಥೆಗಳಾಗಿವೆ. ಜನರಿಗೆ ತಪ್ಪು ಸಂದೇಶಗಳನ್ನ ಮಾತ್ರ ಬಿತ್ತರ ಮಾಡುತ್ತಿವೆ ಎಂದು ಕಿಡಿಕಾರಿದರು.

ಮೌಲ್ವಿ ವಿಚಾರಣೆ ಬಳಿಕ ವಿಧ್ವಂಸಕ ಕೃತ್ಯದ ಭೀತಿ; ಚಾಮರಾಜನಗರ ಗಡಿಯಲ್ಲಿ ಪೊಲೀಸರ ಹದ್ದಿನ ಕಣ್ಣು

ಬಿಜೆಪಿ ನಾಯಕರು ಕೂಡ ಯೇಸು ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಿಂದೂ ಜಾಗರಣ ವೇದಿಕೆ ಸೇರಿದಂತೆ ಅನೇಕ ಸಂಘಟನೆಗಳು ಕನಕಪುರ ಚಲೋ ಚಳುವಳಿಯಲ್ಲಿ ಭಾಗಿಯಾಗಿದ್ದರು. "ಯಾವುದೇ ಕಾರಣಕ್ಕೂ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆಯನ್ನು ನಿರ್ಮಿಸಲು ಅವಕಾಶ ನೀಡುವುದಿಲ್ಲ. ನಾವು ಬಲಿದಾನಕ್ಕೆ ಸಿದ್ಧರಿದ್ದೇವೆ. ಆದರೆ, ಅದಕ್ಕೂ ಮೊದಲು ನಿಮ್ಮ ಬಲಿದಾನವಾಗಲಿದೆ ಎಂದು 'ಕನಕಪುರ ಚಲೋ' ವೇಳೆ ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಎಚ್ಚರಿಕೆ ನೀಡಿದ್ದರು.
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading