ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ನಾಲಾಯಕ್ ಮಂತ್ರಿ ಸುಧಾಕರ್; ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ

ಬಿಜೆಪಿ ಸರ್ಕಾರಕ್ಕೆ ವಿಪಕ್ಷಗಳ ಜೊತೆ ಯಾವ ರೀತಿ ಸಹಕಾರ ಕೇಳಬೇಕು ಎನ್ನುವುದೇ ಗೊತ್ತಿಲ್ಲ. ಇವರು ಏಕ ಚಕ್ರಾಧಿಪತ್ಯ ನಡೆಸುತ್ತಿದ್ದಾರೆ. ಎಲ್ಲ ರೀತಿಯ ಸಹಕಾರ ನಾವು ನೀಡಿದ್ದೇವೆ.  ಇವರ ಹಗರಣಗಳನ್ನು ಎತ್ತಿ ತೋರಿಸಲಿಲ್ಲ ಅಂದ್ರೆ, ಇವರಿಗೆ ನಾವು ಒಳ್ಳೆಯವರು. ಹಗರಣದ ವಿಚಾರ ತೆಗೆದರೆ ಇವರಿಗೆ ನಾವು ಒಳ್ಳೆಯವರಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡಿದರು.

ಸಂಸದ ಡಿ ಕೆ ಸುರೇಶ್

ಸಂಸದ ಡಿ ಕೆ ಸುರೇಶ್

 • Share this:
  ಬೆಂಗಳೂರು(ಡಿ.24): ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಕೆಂಡಾ ಮಂಡಲರಾಗಿದ್ದಾರೆ. ಸುಧಾಕರ್ ಯಾರು ಇವರು? ಅವರು ರಾಜರು, ನಾವು ಪ್ರಜೆಗಳು ಎನ್ನುವ ತರ ಆಗಿದೆ. ಸುಧಾಕರ್ ಗೆ ಮೊದಲು ಶ್ರೀರಾಮುಲು ಜೊತೆ ಹೊಂದಾಣಿಕೆ ಇರಲಿಲ್ಲ, ಸಿಎಂ ಜೊತೆ ಹೊಂದಾಣಿಕೆ ಇರಲಿಲ್ಲ, ಉಸ್ತುವಾರಿ ಸಚಿವರ ಜೊತೆಗೂ ಹೊಂದಾಣಿಕೆ ಇರಲಿಲ್ಲ. ಆಮೇಲೆ ಎರಡೂ ಖಾತೆ ಮರ್ಜ್​ ಮಾಡಿಸಿಕೊಂಡು ಸುಮ್ಮನೆ ಕೂತಿದ್ದಾರೆ. ಮೋಜಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಏನ್ ನಿರ್ಧಾರ ತೆಗೆದುಕೊಳ್ತಾರೆ ಅವರಿಗೇ ಗೊತ್ತಿಲ್ಲ ಎಂದು ಡಿ.ಕೆ.ಸುರೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

  ವಿಪಕ್ಷ ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ, ಜನರ ಬಗ್ಗೆಯೂ ಕಾಳಜಿ ಇಲ್ಲ ಸರ್ಕಾರ ಮತ್ತು ಶಾಸಕರು ವ್ಯಾಪಾರಕ್ಕೆ ಕೂತಿದ್ದಾರೆ, ನಾವು ನೋಡ್ತಿದ್ದೇವೆ. ಇವರಿಗೆ ಮಾತ್ರ ರಾತ್ರಿ ಓಡಾಡಿ ರೂಢಿ ಎಂದು ಕಿಡಿಕಾರಿದರು. ಶ್ರೀರಾಮುಲುರವರನ್ನು ಮುಗಿಸಿದವರು ಸುಧಾಕರ್.  ಅವರು ಏನು ಮಾಡಿದರೂ ನಡೆಯುತ್ತೆ ಎನ್ನುವಂತಾಗಿದೆ. ಲಸಿಕೆ ಬಂದಿದೆ ಅಂದ್ಮೇಲೆ ಎರಡನೇ ವೈರಸ್ ಹೇಗೆ ಬರುತ್ತೆ? ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದಂತ ನಾಲಾಯಕ್ ಮಂತ್ರಿ ಇವರು ಎಂದು ಸಚಿವ ಸುಧಾಕರ್ ವಿರುದ್ಧ ಹರಿಹಾಯ್ದರು.

  ನಷ್ಟದ ಸುಳಿಯಲ್ಲಿ ಬಿಎಂಟಿಸಿ; ಸಾಲ ಪಡೆಯಲು ಬಸ್​ಗಳನ್ನೇ ಅಡಮಾನ ಇಡಲು ಮುಂದಾದ ಅಧಿಕಾರಿಗಳು

  ಬಿಜೆಪಿ ಸರ್ಕಾರಕ್ಕೆ ವಿಪಕ್ಷಗಳ ಜೊತೆ ಯಾವ ರೀತಿ ಸಹಕಾರ ಕೇಳಬೇಕು ಎನ್ನುವುದೇ ಗೊತ್ತಿಲ್ಲ. ಇವರು ಏಕ ಚಕ್ರಾಧಿಪತ್ಯ ನಡೆಸುತ್ತಿದ್ದಾರೆ. ಎಲ್ಲ ರೀತಿಯ ಸಹಕಾರ ನಾವು ನೀಡಿದ್ದೇವೆ.  ಇವರ ಹಗರಣಗಳನ್ನು ಎತ್ತಿ ತೋರಿಸಲಿಲ್ಲ ಅಂದ್ರೆ, ಇವರಿಗೆ ನಾವು ಒಳ್ಳೆಯವರು. ಹಗರಣದ ವಿಚಾರ ತೆಗೆದರೆ ಇವರಿಗೆ ನಾವು ಒಳ್ಳೆಯವರಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡಿದರು.

  ಮುಂದುವರೆದ ಅವರು, ಚರ್ಚೆಗೆ ಬರಲಿ ಬೇಕಿದ್ರೆ, ಸಹಕಾರ ಕೊಟ್ಟಿದ್ದೀವಾ ಇಲ್ವಾ ಅಂತ. ಸರ್ವ ಪಕ್ಷ ಸಭೆ ಕರಿತಾರೆ, ಸಲಹೆ ಕೊಟ್ಟರೆ ಅದನ್ನು ಪಾಲನೆ ಮಾಡಲ್ಲ. ಬರೀ ಫೋಟೋಗೆ ಪೋಸ್ ಕೊಡೋಕೆ ಸಭೆ ಕರಿತಾರೆ.  ವಿಪಕ್ಷಗಳು ಇವರ ಒಳ ರಾಜಕೀಯ ನೋಡ್ಕೊಂಡು ಕೂರಬೇಕಾ? ಬಿಜೆಪಿಯವರಿಗೆ ನೈತಿಕತೆಯೇ ಇಲ್ಲ. ಮಾನಸಿಕ ಅಸ್ತಿತ್ವ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

  ವಾಗ್ದಾಳಿ ಮುಂದುವರೆಸಿದ ಡಿ.ಕೆ.ಸುರೇಶ್,  ಶಿಕ್ಷಣ ಸಚಿವರು ಶಾಲೆ ಕಾಲೇಜು ಚಿಂತನೆ ಅಂತಾರೆ. ನ್ಯಾಷನಲ್ ನವರು ಇನ್ನೂ ನಿರ್ಧಾರವಾಗಿಲ್ಲ ಅಂತಾರೆ . ಆರೋಗ್ಯ ಸಚಿವರು ನಾವು ಶಾಲೆ ಶುರು ಮಾಡ್ತೀವಿ ಅಂತಾರೆ. ಇನ್ನೂ ಸಂಪೂರ್ಣ ತೀರ್ಮಾನ ತೆಗೆದುಕೊಳ್ಳದೆ ಗೊಂದಲದಲ್ಲಿದ್ದಾರೆ ಶಿಕ್ಷಣ ಸಚಿವರ ಪೋರ್ಟ್ ಫೋಲಿಯೋ ಇವರಿಗೇ ಕೊಟ್ಟಿದ್ದಾರಾ?  ಎಲ್ಲರನ್ನೂ ಓವರ್ ಟೇಕ್ ಮಾಡ್ತಿದ್ದಾರಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
  Published by:Latha CG
  First published: