ಶ್ರೀರಾಮ ಬಿಜೆಪಿಯವರ ಸ್ವತ್ತಲ್ಲ, ಭಾರತದ 130 ಕೋಟಿ ಜನರ ಆಸ್ತಿ; ಸಂಸದ ಡಿ.ಕೆ.ಸುರೇಶ್ 

ರಾಮಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದವರಿಗೆ ಆಹ್ವಾನ ನೀಡದ ವಿಚಾರಕ್ಕೆ ಡಿ.ಕೆ.ಸುರೇಶ್​ ಆಕ್ರೋಶ ವ್ಯಕ್ತಪಡಿಸಿದರು.  ಅದು ಬಿಜೆಪಿಯವರ ಮನಸ್ಥಿತಿಯನ್ನ ತೋರಿಸುತ್ತದೆ. ಕಾರ್ಯಕ್ರಮವನ್ನ ಅವರ ಸೀಮಿತಕ್ಕೆ ಮಾತ್ರ ಮಾಡಿಕೊಂಡಿದ್ದಾರೆ. ಸರ್ವಾಧಿಕಾರ, ಸಾರ್ವಭೌಮತ್ವ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸಂಸದ ಡಿ.ಕೆ.ಸುರೇಶ್

ಸಂಸದ ಡಿ.ಕೆ.ಸುರೇಶ್

  • Share this:
ರಾಮನಗರ(ಆ.06): ಶ್ರೀರಾಮ ಬಿಜೆಪಿಯವರ ಸ್ವತ್ತಲ್ಲ, ದೇಶದ 130 ಕೋಟಿ ಜನರ ಆಸ್ತಿ.  ರಾಮ ಭಾವೈಕ್ಯತೆಯ ಸಂಕೇತ ಎಂದು ಹೇಳುವ ಮೂಲಕ ಸಂಸದ ಡಿ.ಕೆ.ಸುರೇಶ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಮನಗರದ ಬಸವನಪುರ, ಚನ್ನಪಟ್ಟಣದ ನೀಲಸಂದ್ರ, ಕನಕಪುರದ ಸಾತನೂರಿನಲ್ಲಿ ಖಾತಾ ಮತ್ತು ಇ ಸ್ವತ್ತಿನ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸುರೇಶ್ ಮೊದಲಿಗೆ ಬಸವನಪುರದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು.

ರಾಮಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದವರಿಗೆ ಆಹ್ವಾನ ನೀಡದ ವಿಚಾರಕ್ಕೆ ಡಿ.ಕೆ.ಸುರೇಶ್​ ಆಕ್ರೋಶ ವ್ಯಕ್ತಪಡಿಸಿದರು.  ಅದು ಬಿಜೆಪಿಯವರ ಮನಸ್ಥಿತಿಯನ್ನ ತೋರಿಸುತ್ತದೆ. ಕಾರ್ಯಕ್ರಮವನ್ನ ಅವರ ಸೀಮಿತಕ್ಕೆ ಮಾತ್ರ ಮಾಡಿಕೊಂಡಿದ್ದಾರೆ. ಸರ್ವಾಧಿಕಾರ, ಸಾರ್ವಭೌಮತ್ವ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಪ್ರೇಮಿಗಳಿಗೆ ಬೆಂಕಿ ಹಚ್ಚಿ ಕೊಂದ ಯುವತಿಯ ಕುಟುಂಬಸ್ಥರು; ಮರ್ಯಾದಾ ಹತ್ಯೆ ಶಂಕೆ

ಬಿಜೆಪಿಯವರು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋದರೆ ಅಖಿಲ ಭಾರತವಾಗುತ್ತೆ. ಇಲ್ಲದಿದ್ದರೆ ಬೇರೆ ರೀತಿ ಹೋಗುತ್ತೆ ಎಂದುಬಿಜೆಪಿ ವಿರುದ್ಧ ಡಿ.ಕೆ.ಸುರೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಇನ್ನು ಇದೇ ವೇಳೆ ರಾಜ್ಯದಲ್ಲಿ ಪ್ರವಾಹ ಪ್ರಾರಂಭವಾಗಿರುವ ವಿಚಾರದ ಬಗ್ಗೆ ಮಾತನಾಡಿದರು. ಈ ಬಗ್ಗೆ ಹವಾಮಾನ ಇಲಾಖೆ 1 ತಿಂಗಳ ಹಿಂದೆಯೇ ಎಚ್ಚರಿಕೆ ಕೊಟ್ಟಿತ್ತು. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಿದೆ ಎನ್ನುವುದು ಚರ್ಚೆಯಾಗಬೇಕು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
Published by:Latha CG
First published: