ಸಿದ್ಧಗಂಗಾ ಮಠಕ್ಕೆ ಬಂದು ರಾಜಕಾರಣ ಮಾಡಬಾರದಿತ್ತು - ಮೋದಿ ವಿರುದ್ದ ಹರಿಹಾಯ್ದ ಎಸ್.ಆರ್.ಪಾಟೀಲ್

ಪ್ರವಾಹಕ್ಕೆ ದೊಡ್ಡ ಪ್ರಮಾಣದಲ್ಲಿ ಉತ್ತರ ಕರ್ನಾಟಕ ಹಾನಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಚಂದ್ರಯಯಾನ ವೀಕ್ಷಣೆಗೆ ಬಂದಾಗಲೂ ಏನಾಗಿದೆ ಅಂತಾ ಕೇಳಲಿಲ್ಲ, ಈ ಸಲ ಬಂದಿದ್ರು ಏನೂ ಕೇಳಿಲ್ಲ.

G Hareeshkumar | news18-kannada
Updated:January 3, 2020, 7:15 PM IST
ಸಿದ್ಧಗಂಗಾ ಮಠಕ್ಕೆ ಬಂದು ರಾಜಕಾರಣ ಮಾಡಬಾರದಿತ್ತು - ಮೋದಿ ವಿರುದ್ದ ಹರಿಹಾಯ್ದ ಎಸ್.ಆರ್.ಪಾಟೀಲ್
ಎಸ್.ಆರ್. ಪಾಟೀಲ್
  • Share this:
ಧಾರವಾಡ(ಜ.03): ಸಿದ್ದಗಂಗಾಮಠ ತ್ರಿವಿಧ ದಾಸೋಹದ ಮಠ. ಅಲ್ಲಿ ಯಾವ ಜಾತಿ ಧರ್ಮ ಕೇಳುವುದಿಲ್ಲ. ಬಸವಾದಿ ಶರಣರ ಅನುಗುಣವಾಗಿ ನಡೆಯುವ ಮಠ ಅದಾಗಿದೆ. ಅಂಥಹ ಮಠಕ್ಕೆ ಬಂದು ರಾಜಕೀಯ ಮಾತನಾಡಬಾರದಿತ್ತು ಎಂದು ಸಿದ್ದಗಂಗಾ ಶ್ರೀಗಳ ಮಠದಲ್ಲಿ ಭಾಷಣ ಮಾಡಿದ ಪ್ರಧಾನಿ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಹರಿಹಾಯ್ದಿದ್ದಾರೆ.

ಅವರು ಧಾರವಾಡ ಜಿಪಂ ಸದಸ್ಯರ ಧರಣಿಗೆ ಬೆಂಬಲ ನೀಡಿದ ನಂತರ ಮಾತನಾಡಿದ ಅವರು, ಮಕ್ಕಳು ದೇವರು ಸಮಾನ, ಅವರಲ್ಲಿ‌ ಕಲ್ಮಶ ಇರುವುದಿಲ್ಲ. ಅಂತಹ ಮಕ್ಕಳ ಬಗ್ಗೆ ಭಾವೈಕ್ಯತೆ ವಿಷಯ ಹೇಳಬೇಕಿತ್ತು ಅದನ್ನು ಬಿಟ್ಟು ರಾಜಕೀಯ ಮಾತನಾಡಬಾರದಿತ್ತು  ಎಂದರು

ಇನ್ನೂ ಇದೇ ಸಂರ್ಭದಲ್ಲಿ ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಘೋಷಿಸಬಹುದು ಅಂತಾ ಜನ ಭಾವಿಸಿದ್ದರು, ಆದರೆ ಅವರು ದ್ವೇಷ, ಅಸೂಯೆ ಮಾತು ಆಡಿದ್ದು ಸರಿಯಲ್ಲ ಎಂದು ಪ್ರಧಾನಿ ವಿರುದ್ಧ ಗುಡುಗಿದರು.

ಪ್ರವಾಹಕ್ಕೆ ದೊಡ್ಡ ಪ್ರಮಾಣದಲ್ಲಿ ಉತ್ತರ ಕರ್ನಾಟಕ ಹಾನಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಚಂದ್ರಯಯಾನ ವೀಕ್ಷಣೆಗೆ ಬಂದಾಗಲೂ ಏನಾಗಿದೆ ಅಂತಾ ಕೇಳಲಿಲ್ಲ, ಈ ಸಲ ಬಂದಿದ್ರು ಏನೂ ಕೇಳಿಲ್ಲ. ರಾಜ್ಯದ ಸಿಎಂ ಅವರೇ ನಮ್ಮ ಮನವಿಗೆ ಸ್ಪಂದಿಸಿಲ್ಲ ಅಂತಾ ಹೇಳಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಇದೆಯಾ ಅನ್ನೋ ಕಲ್ಪನೆ ದೇಶದ ಪ್ರಧಾನಿಯವರಿಗಿಲ್ವಾ ಎಂದು ಅನಿಸುತ್ತಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರೀಯೆ ನೀಡಿದ ಅವರು, ಎಲ್ಲ ಖಾತೆ ಮುಖ್ಯಮಂತ್ರಿ ಒಬ್ಬರೇ ನಿಭಾಯಿಸಲು ಸಾಧ್ಯವಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಆದರೆ, ಸಂಪುಟ ವಿಸ್ತರಣೆ ಮಾಡಿದ ಬಳಿಕ ಈ ಸರ್ಕಾರದ ನಿಜ ಬಣ್ಣ ಬಯಲಾಗಲಿದೆ ಎಂದು ಕಾದು ನೋಡಿ ಎಂದು ತಿಳಿಸಿದರು.

ಇದನ್ನೂ ಓದಿ : ಶಿಕ್ಷಕರನ್ನು ರೊಚ್ಚಿಗೆಬ್ಬಿಸಿದ ರಾಜ್ಯ ಸರ್ಕಾರ ಸುತ್ತೋಲೆ - ವಿದ್ಯಾರ್ಥಿಗಳ ಸಾಮರ್ಥ್ಯವೃದ್ಧಿಗೆ ಸರ್ಕಾರದಿಂದಲೇ ಅಡ್ಡಿ ಆರೋಪ

ಇನ್ನೂ ಗೋವಾ ಮಹದಾಯಿ ನೀರು ಕಳುವು ಮಾಡಿಕೊಂಡು ಹೋಗಿದೆ. ಇದನ್ನು ಗೋವಾ ಸಿಎಂ ಒಪ್ಪಿಕೊಂಡಿದ್ದಾರೆ. ಈ ಭಾಗದಲ್ಲಿ ಇಬ್ಬರೂ ಕೇಂದ್ರ ಮಂತ್ರಿಗಳಿದ್ದಾರೆ. ಸುಮಲತಾ ಸೇರಿ 26 ಜನ ಸಂಸದರು, 117 ಜನ ಬಿಜೆಪಿ ಶಾಸಕರು ಇದ್ದಾರೆ. ರಾಜ್ಯಕ್ಕೆ ಅನ್ಯಾಯವಾದಾಗ ಇವರು ಧ್ವನಿ ಎತ್ತುವುದಿಲ್ಲ ಎಂದು ಬಿಜೆಪಿ ನಾಯಕರು ವಿರುದ್ಧ ವಾಗ್ದಾಳಿ ನಡೆಸಿದರು. (ವರದಿ : ಮಂಜು ಯಡಳ್ಳಿ)

 
First published: January 3, 2020, 7:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading