• Home
 • »
 • News
 • »
 • state
 • »
 • ಸಚಿವ ನಾರಾಯಣಗೌಡರು ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು: ಕಾಂಗ್ರೆಸ್ MLC ಎಸ್. ರವಿ ಆಗ್ರಹ

ಸಚಿವ ನಾರಾಯಣಗೌಡರು ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು: ಕಾಂಗ್ರೆಸ್ MLC ಎಸ್. ರವಿ ಆಗ್ರಹ

ಕಾಂಗ್ರೆಸ್​ನ ಎಂಎಲ್​ಸಿ ಎಸ್.ರವಿ

ಕಾಂಗ್ರೆಸ್​ನ ಎಂಎಲ್​ಸಿ ಎಸ್.ರವಿ

ಕೊರೋನಾ ಇರುವ ಕಾರಣ ರೀಲರ್ಸ್ ಖರೀದಿ ಮಾಡುವ ಗೂಡು ಬೇರೆ ರಾಜ್ಯಗಳಿಗೆ ರಫ್ತಾಗುತ್ತಿಲ್ಲ. ಇದರಿಂದಾಗಿ ಅವರು ಸಂಕಷ್ಟದಲ್ಲಿದ್ದಾರೆ ಎಂದು ಎಸ್. ರವಿ ಕಳವಳ ವ್ಯಕ್ತಪಡಿಸಿದ್ದಾರೆ.

 • Share this:

  ರಾಮನಗರ(ಮೇ 18): ರಾಮನಗರದಲ್ಲಿರುವ ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಮೊನ್ನೆ ಬಂದ್ ಆಗಿತ್ತು. ರೀಲರ್ಸ್​ಗಳು ರೈತರ ರೇಷ್ಮೆಗೂಡನ್ನ ಖರೀದಿ ಮಾಡದ ಹಿನ್ನೆಲೆಯಲ್ಲಿ ಸಿಲ್ಕ್ ಮಾರ್ಕೆಟ್ ಅನ್ನ ಬಂದ್ ಮಾಡಲಾಗಿತ್ತು. ನಂತರ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಸಭೆ ನಡೆಸಿ ರೀಲರ್ಸ್​ಗಳ ಮನವೊಲಿಸಿದ ಪರಿಣಾಮ ನಿನ್ನೆಯಿಂದ ಮತ್ತೆ ಮಾರ್ಕೆಟ್ ಕಾರ್ಯಾರಂಭವಾಗಿದೆ.


  ಇದೇ ವಿಚಾರವಾಗಿ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎಸ್. ರವಿ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರೇಷ್ಮೆ ಸಚಿವರಾದ ನಾರಾಯಣಗೌಡರು ಈ ವಿಚಾರದಲ್ಲಿ ಸರಿಯಾದ ನಿರ್ಧಾರಗಳನ್ನ ಕೈಗೊಳ್ಳಬೇಕು. ಈ ಹಿಂದೆ ಅವರು ಮಾರ್ಕೆಟ್​ಗೆ ಭೇಟಿ ಕೊಟ್ಟಾಗ ರೈತರು, ರೀಲರ್ಸ್ ಯಾರು ಇರಲಿಲ್ಲ. ಕೇವಲ ಅಧಿಕಾರಿಗಳಿಂದ ಮಾಹಿತಿ ಪಡೆದು ಹೊರಟ್ಟಿದ್ದರು. ಆದರೆ ಕೊರೋನಾ ಎಫೆಕ್ಟ್​ನಿಂದಾಗಿ ರೇಷ್ಮೆ ಬೆಳೆಗಾರರು ತೀರಾ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ನಾರಾಯಣಗೌಡರು ರೇಷ್ಮೆ ಉದ್ಯಮದ ಜೊತೆಗೆ ರೈತರ ಬಗ್ಗೆಯೂ ಹೆಚ್ಚಿನ ಗಮನಹರಿಸಿ ಸೂಕ್ತ ನಿರ್ಧಾರಗಳನ್ನ ಕೈಗೊಳ್ಳಬೇಕಿದೆ. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಸ್. ರವಿ ಎಚ್ಚರಿಕೆ ಕೊಟ್ಟರು.


  ಇನ್ನು, ಕೊರೋನಾ ಸಂಕಷ್ಟ ಇರುವ ಕಾರಣ ರೀಲರ್ಸ್ ಖರೀದಿ ಮಾಡುವ ಗೂಡು ಬೇರೆ ರಾಜ್ಯಗಳಿಗೆ ರಫ್ತಾಗುತ್ತಿಲ್ಲ. ಇದರಿಂದಾಗಿ ಅವರು ಸಂಕಷ್ಟದಲ್ಲಿದ್ದಾರೆ. ಜೊತೆಗೆ ರೈತರ ಗೂಡನ್ನ ಕಡಿಮೆ ಬೆಲೆಗೆ ರೀಲರ್ಸ್ ಖರೀದಿ ಮಾಡ್ತಿರುವ ಹಿನ್ನೆಲೆ ರೈತರು, ರೀಲರ್ಸ್​ಗಳ ನಡುವೆ ವೈಮನಸ್ಸು ಉಂಟಾಗುತ್ತಿದೆ. ಹಾಗಾಗಿ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ನಿರ್ಧಾರಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.


  ಇದನ್ನೂ ಓದಿ: ಕಾರ್ಮಿಕರ ವಾಪಸಾತಿ: ಇಂದು ಉತ್ತರ ಭಾರತದ ವಿವಿಧೆಡೆಗೆ ಬೆಂಗಳೂರಿನಿಂದ ಹೊರಡುತ್ತಿರುವ 9 ಶ್ರಮಿಕ್ ರೈಲುಗಳು


  ನಿನ್ನೆ, ರಾಮನಗರ ಸಿಲ್ಕ್ ಮಾರ್ಕೆಟ್ ಪ್ರಾರಂಭವಾಗಿ ಹರಾಜು, ಖರೀದಿ ಪ್ರಕ್ರಿಯೆ ನಡೆದಿದೆ. CB ಹಳದಿ ಹಾಗೂ CSR ಬಿಳಿ ಗೂಡು ಸೇರಿ ಒಟ್ಟು 28 ಟನ್​ಗೂ ಹೆಚ್ಚು ರೇಷ್ಮೆಗೂಡು ಬಂದಿದೆ ಎಂದು ಮಾಹಿತಿ ಲಭ್ಯವಾಗಿದೆ.


  ವರದಿ: ಎ.ಟಿ. ವೆಂಕಟೇಶ್


  Published by:Vijayasarthy SN
  First published: