Privilege Motion: ಸದನದ ನಿರ್ಧಾರ ಜಾರಿಗೆ ತರದೆ ಅಗೌರವ ತೋರಲಾಗಿದೆ ಎಂದು ಸಭಾಪತಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಪ್ರತಾಪ ಚಂದ್ರ ಶೆಟ್ಟಿ!

ಯಾರದೋ ಕಾಲು ಕಟ್ಟಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ರು. ಬಂದು ಮಾಡಿದ್ದೇಲ್ಲ ಅನಾಚಾರದ ಕೆಲಸ. ಮುವತ್ತು ಲಕ್ಷಕ್ಕೆ ಸ್ವಿಮಿಂಗ್ ಫೂಲ್ ‌ಮಾಡಿಸಿಕೊಂಡ್ರು.  ಹದಿನೈದು ಲಕ್ಷಕ್ಕೆ ಕಚೇರಿ ನವೀಕರಣ ಮಾಡಿಸಿಕೊಂಡರು ಎಂದು ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಹೇಶ್ ಆರೋಪ ಮಾಡಿದರು.

ರೋಹಿಣಿ ಸಿಂಧೂರಿ - ಶಾಸಕ ಸಾ.ರಾ.ಮಹೇಶ್

ರೋಹಿಣಿ ಸಿಂಧೂರಿ - ಶಾಸಕ ಸಾ.ರಾ.ಮಹೇಶ್

 • Share this:
  ಬೆಂಗಳೂರು: ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ (Congress MLC Prathap Chandra Shetty) ಅವರು ಇಂದು ಸದನದಲ್ಲಿ ವಿಧಾನ ಪರಿಷತ್ ಸಚಿವಾಲಯದ ಕಾರ್ಯದರ್ಶಿ ಹಾಗೂ ಸಭಾನಾಯಕ ವಿರುದ್ದ ಹಕ್ಕುಚ್ಯುತಿ ಮಂಡನೆ (Privilege motion) ಮಾಡಿದರು. ವಿಧಾನ ಪರಿಷತ್ ಸದನದ ಪಕ್ಕದಲ್ಲಿರುವ ಕ್ಯಾಂಟೀನ್ ಸ್ಥಳವನ್ನು ಶೌಚಾಲಯವನ್ನಾಗಿ ಪುನರ್ ನಿರ್ಮಾಣ ಮಾಡುವ ಕುರಿತ ಸದನದ ನಿರ್ಧಾರವನ್ನು ಜಾರಿಗೆ ತರದೆ ಸದನಕ್ಕೆ ಅಗೌರವ ತೋರಲಾಗಿದೆ ಎಂದು ಕಾಂಗ್ರೆಸ್ ಮಂಡಿಸಿದ ಹಕ್ಕುಚ್ಯುತಿಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿದರು.

  ಶೂನ್ಯವೇಳೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರಶೆಟ್ಟಿ ಹಕ್ಕುಚ್ಯುತಿ ಮಂಡಿಸಿದರು. ಪರಿಷತ್ ಸಭಾಂಗಣದ ಪಕ್ಕದಲ್ಲಿ ಹಲವು ವರ್ಷದಿಂದ ಇದ್ದ ಶೌಚಾಲಯವನ್ನು ಉಪಹಾರ ಗೃಹವಾಗಿ ಮಾರ್ಪಡಿಸಿದ್ದರಿಂದ ಹಲವರಿಗೆ ಸಮಸ್ಯೆಯಾಗಿದೆ, ಉಪಹಾರ ಗೃಹ ಸ್ಥಳಾಂತರಿಸಿ ಶೌಚಾಲಯ ನಿರ್ಮಾಣಕ್ಕೆ ಹಿಂದೆ ಭರವಸೆ ನೀಡಲಾಗಿತ್ತು ಆದರೆ ಅದನ್ನು ಜಾರಿಗೆ ತರದೆ ಸದನಕ್ಕೆ ಅಗೌರವ ತರಲಾಗಿದೆ ಎಂದು ಆರೋಪಿಸಿ ಪರಿಷತ್ ಸಚಿವಾಲಾಯ ಕಾರ್ಯದರ್ಶಿ ಮತ್ತು ಸಭಾನಾಯಕರ ವಿರುದ್ಧ ಹಕ್ಕು ಚ್ಯುತಿ ಮಂಡಿಸಿದರು.

  ಕಾಂಗ್ರೆಸ್ ಮಂಡಿಸಿದ ಹಕ್ಕುಚ್ಯುತಿ ನಿಲುವಳಿ ಕುರಿತು ವಿಧಾನ ಪರಿಷತ್ ಕಾರ್ಯಕಲಾಪ ಮತ್ತು ನಿಯಮಾವಳಿ ನಿಯಮ174 ರ ಅಡಿ ಹಕ್ಕುಚ್ಯುತಿ ಪ್ರಸ್ತಾವನೆ ನಿರಾಕರಿಸಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.

  ಸಭಾಪತಿಗಳ ನಿರ್ಧಾರಕ್ಕೆ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರಶೆಟ್ಡಿ ಅಸಮಧಾನ ವ್ಯಕ್ತಪಡಿಸಿದರು, ನಿರ್ಣಯವನ್ನು ಖಂಡಿಸಿದರು.ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ವಿಪ್
  ನಾರಾಯಣಸ್ವಾಮಿ, ಕ್ಯಾಂಟೀನ್ ಗೆ ಬೇರೆ ಸ್ಥಳ ಕೊಡಿ, ಸದಸ್ಯರು, ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ ಎಂದರು. ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಮಾತನಾಡಿ ತಕ್ಷಣ ಹಿಂದೆ ಮಾಡಿದ್ದ ನಿರ್ಧಾರದಂತೆ ಕ್ಯಾಂಟೀನ್ ಜಾಗವನ್ನು ಶೌಚಾಲಯ ಮಾಡುವ ನಿರ್ಣಯ ಅನುಷ್ಠಾನಕ್ಕೆ ತರಬೇಕು ಎಂದರು.

  ಕಾಂಗ್ರೆಸ್ ಸದಸ್ಯರ ಬೇಡಿಕೆ ಕುರಿತು ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಕ್ಯಾಂಟೀನ್ ಬದಲಿಸಿ ಶೌಚಾಲಯ ಮರುನಿರ್ಮಾಣ ಕುರಿತು ಕ್ರಮದ ಭರವಸೆ ನೀಡಲಾಗಿತ್ತು,ಆದರೆ ಮುಂದುವರಿದ ಚರ್ಚೆ ಮತ್ತೆ ನಡೆಯಿತು.ಇಡೀ ಸದನ ಸಭಾಪತಿಗಳ ವ್ಯಾಪ್ತಿಗೆ ಬರಲಿದೆ, ಹಾಗಾಗಿ ಈ ಬಗ್ಗೆ ಮತ್ತೆ ಸಭಾಪತಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ, ಆದರೆ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಕ್ಕೆ ನೋವಾಗುತ್ತಿದೆ. ಸಣ್ಣ ಸಮಸ್ಯೆಯನ್ನು ದೊಡ್ಡದಾಗಿ ಮಾಡಿದ್ದಾರೆ, ಸಮಸ್ಯೆ ಬೇಗ ಪರಿಹಾರ ಮಾಡಲಾಗುತ್ತದೆ ಎಂದರು.

  ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ನನ್ನ ಕೊಠಡಿಯಲ್ಲಿ ಆಡಳಿತ, ಪ್ರತಿಪಕ್ಷ ಮುಖಂಡರ ಜೊತೆ ಸಭೆ ನಡೆಸುತ್ತೇನೆ, ಅಲ್ಲಿ ಚರ್ಚಿಸಿ ತೀರ್ಮಾನಿಸೋಣ ಎಂದು ಸೂಚಿಸಿ ಚರ್ಚೆಗೆ ತೆರೆ ಎಳೆದರು

  ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಆರೋಪ

  ಶಾಸಕ ಸಾ ರಾ ಮಹೇಶ್ ಅವರು ವಿಧಾನಸಭೆಯಲ್ಲಿ ಹಕ್ಕು ಚ್ಯುತಿ  ವಿಚಾರ ಪ್ರಸ್ತಾಪ ಮಾಡಿ,
  ಹಿಂದಿನ ಮೈಸೂರು ಜಿಲ್ಲಾಧಿಕಾರಿ ಕ್ರಿಯಾ ಯೋಜನೆಯಲ್ಲಿ ಬ್ಯಾಗ್ ಖರೀದಿ ಮಾಡಿದ್ದಾರೆ. ಮೈಸೂರು ಪುರಸಭೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಹಕ್ಕು ಮೊಟಕುಗೊಳಿಸಿ ಜಿಲ್ಲಾಧಿಕಾರಿ ನೇರವಾಗಿ ಖರೀದಿ ಮಾಡಿದ್ದಾರೆ. ಆಗ ಇತರೆ ಸದಸ್ಯರು ಜಿಲ್ಲಾಧಿಕಾರಿ ಹೆಸರು ಹೇಳಿ ಎಂದು ಒತ್ತಾಯಿಸಿದರು. ಅದಕ್ಕೆ ಸಾರಾ ಮಹೇಶ್ ಅವರು, ಅವರ ಹೆಸರು ಹೇಳೋಕೆ ಬೇಜಾರಾಗುತ್ತೆ . ಸಾ ರಾ ಮಹೇಶ್ ಒತ್ತಡ ತಂದು ವರ್ಗಾವಣೆ ಮಾಡಿದ್ದಾರೆ ಅಂತ ನಿರ್ಗಮಿತ ಜಿಲ್ಲಾಧಿಕಾರಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಯಾರದೋ ಕಾಲು ಕಟ್ಟಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ರು. ಬಂದು ಮಾಡಿದ್ದೇಲ್ಲ ಅನಾಚಾರದ ಕೆಲಸ. ಮುವತ್ತು ಲಕ್ಷಕ್ಕೆ ಸ್ವಿಮಿಂಗ್ ಫೂಲ್ ‌ಮಾಡಿಸಿಕೊಂಡ್ರು.  ಹದಿನೈದು ಲಕ್ಷಕ್ಕೆ ಕಚೇರಿ ನವೀಕರಣ ಮಾಡಿಸಿಕೊಂಡರು ಎಂದು ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಹೇಶ್ ಆರೋಪ ಮಾಡಿದರು.

  ಇದನ್ನು ಓದಿ: Cyber Crime: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು Instagram ಅಶ್ಲೀಲವಾಗಿ ಟ್ರೋಲ್​ ಮಾಡುತ್ತಿದ್ದ ಆರೋಪಿ ಬಂಧನ

  ರೋಹಿಣಿ ಸಿಂಧೂರಿಯಿಂದ ಹಕ್ಕುಚ್ಯುತಿ ಎಂಬ ಸಾರಾ ಮಹೇಶ್ ಆರೋಪ ವಿಚಾರಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಉತ್ತರಿಸಿ ಇದರಿಂದ ಶಾಸಕರಿಗೆ ಶಿಷ್ಟಾಚಾರ ಉಲ್ಲಂಘನೆ ಆಗ್ತಿದೆ. ಇದನ್ನ ನಾನು ಒಪ್ಪುತ್ತೇನೆ. ಸಾ.ರಾ ಮಹೇಶ್ ಪ್ರಕರಣದಲ್ಲೂ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ಆದರೆ ನೀವು ಹೇಳಿದಂತೆ ನಿಮ್ಮ ಹಕ್ಕು ಚ್ಯುತಿ ಏನು ಆಗಿಲ್ಲ. ಯಾವುದೇ ಶಾಸಕರಿಗೆ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಸೂಕ್ತ ಆದೇಶ ನೀಡುತ್ತೇವೆ ಎಂದು ಹೇಳಿದರು.
  Published by:HR Ramesh
  First published: