ಸಭಾಪತಿಗಳೇ ಸುಪ್ರೀಂ, ರಾಜಭವನ ಬಿಜೆಪಿ ಪಕ್ಷದ ಕಚೇರಿಯಾಗಿದೆ; ಎಂಎಲ್​ಸಿ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಸಭಾಪತಿಗಳು ಸೂಚಿಸಿದ ನಂತರ ಉಪ ಸಭಾಪತಿ ಪೀಠದಲ್ಲಿ ಕೂರಬೇಕು. ಯಾರೋ ಹೇಳಿದರು ಎಂದ ಮಾತ್ರಕ್ಕೆ ಸಭಾಪತಿ ಸ್ಥಾನದಲ್ಲಿ ಕೂರುವುದು ಕಾನೂನಿನ ಪ್ರಕಾರ ತಪ್ಪು. ಎಲ್ಲಿಯ ತನಕ ಸಭಾಪತಿ ಇರುತ್ತಾರೋ ಅಲ್ಲಿಯವರೆಗೆ ಅವರೇ ಸುಪ್ರೀಂ ಎಂದು ಎಂಎಲ್​ಸಿ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಬಿ.ಕೆ. ಹರಿಪ್ರಸಾದ್.

ಬಿ.ಕೆ. ಹರಿಪ್ರಸಾದ್.

  • Share this:
ಬೆಂಗಳೂರು (ಡಿ. 15): ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರನ್ನು ಸಭಾಪತಿ ಪೀಠದಿಂದ ಕಾಂಗ್ರೆಸ್ ಸದಸ್ಯರು ಎಳೆದು ಕೆಳಗಿಳಿಸಿದ್ದು ಹಾಗೂ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಕಲಾಪ ಪ್ರವೇಶಿಸಲು ಬಿಡದೆ ಬಾಗಿಲು ಹಾಕಿ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ್ದು ರಾಜ್ಯವನ್ನೇ ತಲೆತಗ್ಗಿಸುವಂತೆ ಮಾಡಿದೆ. ಇಂದು ನಡೆದ ಘಟನೆಯ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಭಾಪತಿಗಳು ಸೂಚಿಸಿದ ನಂತರ ಉಪ ಸಭಾಪತಿ ಪೀಠದಲ್ಲಿ ಕೂರಬೇಕು. ಯಾರೋ ಹೇಳಿದರು ಎಂದ ಮಾತ್ರಕ್ಕೆ ಸಭಾಪತಿ ಸ್ಥಾನದಲ್ಲಿ ಕೂರುವುದು ಕಾನೂನಿನ ಪ್ರಕಾರ ತಪ್ಪು. ಇದೀಗ ಕಾಂಗ್ರೆಸ್ ವಿರುದ್ಧವೇ ಬಿಜೆಪಿ ನಾಯಕರು ದೂರು ನೀಡಲು ರಾಜ್ಯಪಾಲರ ಬಳಿ ಹೋಗಿದ್ದಾರೆ. ರಾಜಭವನ ಬಿಜೆಪಿ ಪಕ್ಷದ ಕಚೇರಿಯಾಗಿದೆ ಎಂದು ಆರೋಪ ಮಾಡಿದ್ದಾರೆ.

ವಿಧಾನ ಪರಿಷತ್​ನಲ್ಲಿ ಇಂದು ನಡೆದ ಘಟನೆ ನಡೆಯಬಾರದಿತ್ತು. ಕಲಾಪ ಆರಂಭವಾಗುವ ಮೊದಲು ಬಿಜೆಪಿ‌ ಸದಸ್ಯರು ಸದನದ ಬಾಗಿಲು ಹಾಕಿದ್ದು ಕಾನೂನು ಬಾಹಿರ. ಇಂತಹ ಅಗೌರವ ಸೂಚಿಸಿದ ಘಟನೆ ಯಾವತ್ತೂ ನಡೆದಿರಲಿಲ್ಲ. ಉಪ ಸಭಾಪತಿಯಾದವರು ಸಭಾಪತಿಯ ಸೂಚನೆ ಬಳಿಕ ಪೀಠದಲ್ಲಿ ಕೂರಬೇಕು. ಆದರೆ, ಅವರು ಯಾರದೋ ಸೂಚನೆ ಮೇರೆಗೆ ಪೀಠದಲ್ಲಿ ಕೂತಿದ್ದು ತಪ್ಪು ಎಂದು ಎಂಎಲ್​ಸಿ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಅವಿಶ್ವಾಸ ನಿರ್ಣಯದ ಚರ್ಚೆಯೇ ಆಗದೆ ಅವಿಶ್ವಾಸವಿದೆ ಎನ್ನುವುದು ತಪ್ಪು. ಇದೇ ಸರಿಯೆಂದರೆ ಮುಂದೊಂದು ದಿನ ಕಾಂಗ್ರೆಸ್​ನವರು ಸಿಎಂ ಯಡಿಯೂರಪ್ಪನವರ ಮೇಲೂ ವಿಶ್ವಾಸ ಇಲ್ಲ ಅಂತ ಹೇಳಿದರೆ ಅವರು ಕೂಡ ಸಿಎಂ ಕುರ್ಚಿ ಬಿಟ್ಟು ಹೋಗಬೇಕಾದೀತು. ರಾಜ್ಯಪಾಲರು ಸೂಚನೆ ಕೊಟ್ಟರೆ ಅವಿಶ್ವಾಸ ನಿರ್ಣಯವನ್ನು ಎದುರಿಸಲು ನಾವು ತಯಾರಾಗಿದ್ದೇವೆ. ಎಲ್ಲಿಯ ತನಕ ಸಭಾಪತಿ ಇರುತ್ತಾರೋ ಅಲ್ಲಿಯವರೆಗೆ ಅವರೇ ಸುಪ್ರೀಂ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ನೇತೃತ್ವದ ನಿಯೋಗದಿಂದ ರಾಜ್ಯಪಾಲರ ಭೇಟಿ; ಮತ್ತೆ ವಿಧಾನ ಪರಿಷತ್ ಕಲಾಪ ನಡೆಸಲು ಬಿಜೆಪಿ ಸಿದ್ಧತೆ

ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುವುದು ಅವರ ರಾಜಕೀಯ ತೀರ್ಮಾನ. ಸದನದ ನಿಯಮ ಪಾಲನೆ ಮಾಡಿದರೆ ನಮ್ಮ ಅಡ್ಡಿ ಇಲ್ಲ. ಸಭಾಪತಿಯನ್ನು ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಬೇಕಾಗಿತ್ತು. ಸರ್ಕಾರ ಕ್ಯಾಬಿನೆಟ್ ನಿರ್ಧಾರ ಕೈಗೊಂಡು ಸದನ ಕರೆಯಬೇಕು. ಅವಿಶ್ವಾಸ ನಿರ್ಣಯ ಚರ್ಚೆ ಆಗದೆ ಅವಿಶ್ವಾಸ ಇದೆ ಎನ್ನುವುದು ತಪ್ಪು. ಬಿಜೆಪಿಗೆ ಹಸುಗಳ ಬಗ್ಗೆ ಪ್ರೀತಿ ಇದ್ದರೆ ಮೊದಲು ಅದನ್ನು ಚರ್ಚೆ ಮಾಡಬೇಕಿತ್ತು. ಅದರ ಬದಲಾಗಿ ಅವಿಶ್ವಾಸ ಚರ್ಚೆಯನ್ನೇ ಮೊದಲು ಮಾಡಿದ್ದಾರೆ. ಇವತ್ತು ಸರ್ಕಾರದ ನಿರ್ದೇಶನದ ಮೇಲೆ ಸದನ ಕರೆಯಲಾಗಿದೆ. ಅವಿಶ್ವಾಸ ಅಧಿಕೃತವಾಗಿ ನಿರ್ಧಾರ ಆಗುವುದು ಸದನದಲ್ಲಿ. ಆದರೆ, ಇಂದು ಸದನವೇ ನಡೆದಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ವಿಧಾನ ಪರಿಷತ್​ನಲ್ಲಿ ಇಂದು ನಡೆದ ಹೈಡ್ರಾಮಾ ಕುರಿತು ಮಾಹಿತಿ ನೀಡಲು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸಚಿವರು ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿ ಎಂಎಲ್​ಸಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದೆ.
Published by:Sushma Chakre
First published: