ಮಂತ್ರಿಗಿರಿಗೆ ಕಾಂಗ್ರೆಸ್​ನಲ್ಲಿ ಶುರುವಾಗಿದೆ ಲಾಬಿ; ಆರು ಸ್ಥಾನಕ್ಕೆ ಡಜನ್​ಗೂ ಹೆಚ್ಚು ಆಕಾಂಕ್ಷಿಗಳು!

news18
Updated:September 1, 2018, 3:19 PM IST
ಮಂತ್ರಿಗಿರಿಗೆ ಕಾಂಗ್ರೆಸ್​ನಲ್ಲಿ ಶುರುವಾಗಿದೆ ಲಾಬಿ; ಆರು ಸ್ಥಾನಕ್ಕೆ ಡಜನ್​ಗೂ ಹೆಚ್ಚು ಆಕಾಂಕ್ಷಿಗಳು!
ಸಾಂದರ್ಭಿಕ ಚಿತ್ರ
news18
Updated: September 1, 2018, 3:19 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.1): ಇದೇ ತಿಂಗಳ ಮೂರನೇ ವಾರದಲ್ಲಿ ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್​ ಪಾಲಿಗೆ ಉಳಿದರುವ ಆರು ಮಂತ್ರಿಗಳಿಗೆ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಿದ್ದಾರೆ. ಆದರೆ, ಯಾರಿಗೆ ಸಚಿವ ಸ್ಥಾನ ಒಲಿಯಲಿದೆ  ಎಂಬುದನ್ನು ಸದ್ಯಕ್ಕೆ ಕುತೂಹಲವಾಗಿದೆ.

ಮಂತ್ರಿಗಿರಿಗಾಗಿ ಶಾಸಕರು ನಾಯಕರ ಮನೆ ಮನೆಗೆ ಎಡತಾಕಿ ಲಾಬಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಹಿರಿಯರಿಗೆ ಅವಕಾಶ ನೀಡುವಂತೆ ಮುಖಂಡರ ಮೇಲೆ ಕೆಲವರು ಒತ್ತಡ ಹೇರುತ್ತಿದ್ದಾರೆ.

ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮಾತುಕತೆ ನಡೆಸಿದ್ದು, ಆನಂತರ ಹೈಕಮಾಂಡ್ ಜೊತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.  ಆರರಲ್ಲಿ‌ ಐದು ಸ್ಥಾನ ಭರ್ತಿ ಮಾಡಿ ಒಂದು ಖಾಲಿ ಇಡಲು ನಾಯಕರು ಚಿಂತನೆ ನಡೆಸಿದ್ದು, ಸಚಿವ ಸ್ಥಾನ ವಂಚಿತರನ್ನು ಸಮಾಧಾನ ಮಾಡಲು ನಿಗಮ, ಮಂಡಳಿಯಲ್ಲಿ ಸ್ಥಾನ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪಕ್ಷದ ಹಿರಿಯ ಶಾಸಕರಾದ ಎಚ್.ಕೆ. ಪಾಟೀಲ್ ಅವರಿಗೆ ಸ್ಥಾನ ಕಲ್ಪಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಣದಿಂದ ಒತ್ತಡ ತಂದರೆ, ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಬೆಂಗಳೂರು‌ ನಗರದ ಶಾಸಕರು ಒತ್ತಡ ಹಾಕುತ್ತಿದ್ದಾರೆ.

ಸದ್ಯ ಕಾಂಗ್ರೆಸ್​ಗೆ ಆರು ಸಚಿವ ಸ್ಥಾನಗಳು ಬಾಕಿ ಉಳಿದಿದ್ದು, ಈ ಸ್ಥಾನಕ್ಕೆ ಯಾರನ್ನು ಸೇರಿಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಜಾತಿ ಕೋಟಾದಡಿ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಲವು ಹೊಂದಿದೆ ಎನ್ನಲಾಗಿದೆ. ಹಾಗೊಂದು ವೇಳೆ ಜಾತಿ ಕೋಟಾದಡಿ ಸಚಿವ ಸ್ಥಾನ ನೀಡಿದರೆ, ಕುರುಬ, ಲಿಂಗಾಯತ, ನಾಯಕ, ಲಂಬಾಣಿ, ಒಕ್ಕಲಿಗ ,ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಒಲಿಯಲಿದೆ.
Loading...

ಯಾರೆಲ್ಲಾ ಸಚಿವ ಸ್ಥಾನದ ಆಕ್ಷಾಂಕ್ಷಿಗಳು?

ಕಾಂಗ್ರೆಸ್ ಪಾಲಿಗೆ ಉಳಿದಿರುವ ಆರು ಸಚಿವ ಸ್ಥಾನಗಳಿಗೆ 20ಕ್ಕೂ ಹೆಚ್ಚು ಮಂದಿ ಸಚಿವಾಕಾಂಕ್ಷಿಗಳು ಇದ್ದಾರೆ. ಎಂಬಿ ಪಾಟೀಲ್, ಎಚ್ ಕೆ ಪಾಟೀಲ್, ರಾಮಲಿಂಗಾ ರೆಡ್ಡಿ, ತುಕಾರಾಂ, ರೋಷನ್ ಬೇಗ್, ಪಿ.ಟಿ ಪರಮೇಶ್ವರ್ ನಾಯ್ಕ, ಪ್ರತಾಪ್‌ಗೌಡ ಪಾಟೀಲ್, ತನ್ವೀರ್ ಸೇಠ್, ರಹೀಂಖಾನ್, ಬಿ.ಕೆ. ಸಂಗಮೇಶ್, ಬಿ.ಸಿ‌.ಪಾಟೀಲ್, ಶಾಮನೂರು ಶಿವಶಂಕರಪ್ಪ, ಲಕ್ಷ್ಮೀ ಹೆಬ್ಬಾಳಕರ್, ಸತೀಶ್ ಜಾರಕಿಹೊಳಿ, ಎಂ. ಕೃಷ್ಣಪ್ಪ, ಎಂಟಿಬಿ ನಾಗರಾಜ್, ಸಿ.ಎಸ್. ಶಿವಳ್ಳಿ, ಎಸ್.ಆರ್. ಪಾಟೀಲ್, ಎಚ್.ಕೆ. ಪಾಟೀಲ್, ಡಾ.ಸುಧಾಕರ್ ಯಶವಂತರಾಯಗೌಡ ಪಾಟೀಲ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...