ಅತ್ತ ರೆಸಾರ್ಟ್​ನಲ್ಲಿ ಕಾಂಗ್ರೆಸ್ ಶಾಸಕರು ; ಇತ್ತ ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿ ಸ್ಪೀಕರ್

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಮಧ್ಯದಲ್ಲಿ ಸ್ಪೀಕರ್ ರಮೇಶ್ ಕುಮಾರ್, ರಾಜ್ಯ ರಾಜಕಾರಣಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ತಮ್ಮ ಹೊಲದಲ್ಲಿಕುರಿ-ಕೋಳಿ ಮೇಯಿಸಿಕೊಂಡು ಸಮಯವನ್ನು ಕಳೆಯುತ್ತಿದ್ದಾರೆ.

G Hareeshkumar | news18
Updated:January 19, 2019, 3:46 PM IST
ಅತ್ತ ರೆಸಾರ್ಟ್​ನಲ್ಲಿ ಕಾಂಗ್ರೆಸ್ ಶಾಸಕರು ; ಇತ್ತ ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿ ಸ್ಪೀಕರ್
ಸಾಂದರ್ಭಿಕ ಚಿತ್ರ
  • News18
  • Last Updated: January 19, 2019, 3:46 PM IST
  • Share this:
ಬೆಂಗಳೂರು(ಜ.19) : ಕರ್ನಾಟಕದಲ್ಲಿ ರೆಸಾರ್ಟ್​​ ರಾಜಕಾರಣ ಜೋರಾಗಿದೆ. ಬಿಜೆಪಿ ಶಾಸಕರು ರೆಸಾರ್ಟ್​​ ರಾಜಕಾರಣ ಆರಂಭಿಸಿದ ಬೆನ್ನಲ್ಲೇ ಕಾಂಗ್ರೆಸ್​​ ಕೂಡ ಇದೇ ಮಾರ್ಗ ಅನುಸರಿಸಿದೆ. ಆದರೆ ಹಲವು ಒತ್ತಡಗಳು ನಡುವೆಯೂ ಕೂಲ್ ಆಗಿರುವ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಪತ್ನಿಯೊಂದಿಗೆ ತಮ್ಮ ತೋಟದಲ್ಲಿ ಕಾಲ ಕಳೆಯುತ್ತಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಮಧ್ಯದಲ್ಲಿ ಸ್ಪೀಕರ್ ರಮೇಶ್ ಕುಮಾರ್, ರಾಜ್ಯ ರಾಜಕಾರಣಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ತಮ್ಮ ಹೊಲದಲ್ಲಿ ಕುರಿ-ಕೋಳಿ ಮೇಯಿಸಿಕೊಂಡು ಸಮಯವನ್ನು ಕಳೆಯುತ್ತಿದ್ದಾರೆ.

ಪತ್ನಿ ವಿಜಯಮ್ಮ ಜೊತೆ ಸ್ಪೀಕರ್ ರಮೇಶಕುಮಾರ್


ಇದನ್ನು ಓದಿ :  ಕಾಂಗ್ರೆಸ್ ನಡೆಗಳ ಹಿಂದೆ ದೇವೇಗೌಡ ಮಾಸ್ಟರ್​ಮೈಂಡ್; ರಮೇಶ್ ಜಾರಕಿಹೊಳಿ ಸೇರಿ ನಾಲ್ವರ ರಾಜೀನಾಮೆ?

ಸ್ಪೀಕರ್ ರಮೇಶ ಕುಮಾರ್ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿರುವ ತಮ್ಮ ತೋಟದಲ್ಲಿ ವಿಶ್ರಾಂತಿಯನ್ನು ಕಳೆದಿದ್ದು, ತಮ್ಮ ಪತ್ನಿ ವಿಜಯಮ್ಮ ಜೊತೆ ಕುರಿ, ಕೋಳಿ ಹಾಗೂ ಪಾಲೀಹೌಸ್ ವೀಕ್ಷಣೆ ಮಾಡಿದ್ದಾರೆ. ಅಷ್ಟೆ ಅಲ್ಲದೇ ಜಾಗಿಂಗ್ ಡ್ರೆಸ್​ನಲ್ಲಿ ಇಡೀ ದಿನ ತಮ್ಮ ತೋಟದ ಮನೆಯಲ್ಲಿ ಬೀಡು ಬಿಟ್ಟಿದ್ದರು ಎನ್ನಲಾದ ಪೊಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ.

ಬೆಂಗಳೂರಿನಿಂದ ಬಂದ ಸ್ಪೀಕರ್ ರಮೇಶ್ ಕುಮಾರ್ ತೋಟದ ಮನೆಯಲ್ಲಿ ಸೇರಿಕೊಂಡು ಕಳೆದ ಮೂರು ದಿನಗಳಿಂದ ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿ ಹಳ್ಳಿ ಜೀವನವನ್ನು  ಎಂಜಾಯ್ ಮಾಡುತ್ತಿದ್ದಾರೆ.

First published:January 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ