HOME » NEWS » State » CONGRESS MLAS DEMANDING CM TO NAME V SOMANNA AS IN CHARGE MINISTER OF CHAMARAJANAGAR GNR

‘ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ವಿ. ಸೋಮಣ್ಣರನ್ನು ನೇಮಿಸಿ‘ - ಸಿಎಂಗೆ ಕಾಂಗ್ರೆಸ್ಸಿಗರ ಒತ್ತಾಯ

ಸಚಿವ ಸುರೇಶ್ ಕುಮಾರ್ ಹೇಳಿದ ಕೆಲಸಗಳು ಇಲ್ಲಿಯವರೆಗೆ ಯಾವುದು ಆಗಿಲ್ಲ. ಇದಲ್ಲದೆ ಕೋವಿಡ್ ಗಾಗಿ 3 ಕೋಟಿ 11 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಗಣಿ ಭೂ ವಿಜ್ಷಾನ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಹೇಳಿಕೊಳ್ಳುವಂತಹ ಯಾವ ಕೆಲಸಗಳೂ ಆಗಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಆರೋಪಿಸಿದರು.

news18-kannada
Updated:July 20, 2020, 5:16 PM IST
‘ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ವಿ. ಸೋಮಣ್ಣರನ್ನು ನೇಮಿಸಿ‘ - ಸಿಎಂಗೆ ಕಾಂಗ್ರೆಸ್ಸಿಗರ ಒತ್ತಾಯ
ವಿ ಸೋಮಣ್ಣ
  • Share this:
ಚಾಮರಾಜನಗರ(ಜು.20): ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಅವರನ್ನು ಕೂಡಲೇ ಬದಲಾವಣೆ ಮಾಡಿ ಸಕ್ರಿಯವಾಗಿ ಕೆಲಸ ಮಾಡುವ ಸಚಿವ ವಿ.ಸೋಮಣ್ಣ ಅವರನ್ನು ನೇಮಿಸಬೇಕೆಂದು ಕಾಂಗ್ರೆಸ್ಸಿಗರೇ ಒತ್ತಾಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ

ಸಚಿವ ಸುರೇಶ್ ಕುಮಾರ್ ಅವರಿಗೆ ಅಭಿವೃದ್ಧಿ ಅಂದರೆ ಏನೂ ಅಂತಾನೆ ಗೊತ್ತಿಲ್ಲ. ಕಾಂಗ್ರೆಸ್ ಶಾಸಕರನ್ನು ಕಡೆಗಣಿಸುತ್ತಿದ್ದಾರೆ. ಈ ವಿಚಾರವಾಗಿ ಮೂರು ಬಾರಿ ಕ್ಷಮೆ ಕೋರಿದ್ದಾರೆ. ಮತ್ತೆ ಅದೇ ಚಾಳಿ ಮುಂದುವರಿಸಿದ್ದಾರೆ. ಅವರು ಸಚಿವರಾಗಿರಲು ನಾಲಾಯಕ್ ಎಂದು ಜಂಟೀ ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಎಸ್ ನಂಜುಂಡಸ್ವಾಮಿ ವಾಗ್ಧಾಳಿ ನಡೆಸಿದರು.

ಏನೂ ಕೆಲಸವಿಲ್ಲದೆ ಕೊಡಗು ಜಿಲ್ಲೆಗೆ ಸಚಿವ ಸೋಮಣ್ಣ ಅವರಂತಹ ಸಕ್ರಿಯ ಮಂತ್ರಿಯನ್ನು ನಿಯೋಜಿಸಿರುವುದು ಸರಿಯಲ್ಲ. ಅವರೊಬ್ಬ ಒಳ್ಳೇ ಕ್ಯಾಬಿನೇಟ್ ಸಚಿವ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನು ಬದಲಿಸಿ ಆ ಸ್ಥಾನಕ್ಕೆ ವಿ.ಸೋಮಣ್ಣ ಅವರನ್ನು ನೇಮಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸುವ ಮೂಲಕ ಅಚ್ಚರಿ ಮೂಡಿಸಿದರು.

ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ ಎಷ್ಟೋ  ಅಭಿವೃದ್ಧಿ ಕೆಲಸಗಳು ಆಗುತ್ತಿದ್ದವು. ಬಾಕಿ ಉಳಿದ ಅನೇಕ ಕಾಮಗಾರಿಗಳೆಲ್ಲಾ ಮುಗಿಯುತ್ತಿದ್ದವು ಎಂದ ಅವರು ಒಂದು ವೇಳೆ  ಸುರೇಶ್ ಕುಮಾರ್ ಅವರನ್ನೇ ಮುಂದುವರಿಸಿದರೆ ಜಿಲ್ಲೆಯ ಯಾವುದೇ ಭಾಗಕ್ಕೆ ಬಂದರೂ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಾಮರಾಜನಗರ ಶಾಸಕ, ಮಾಜಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರೂ ಸಹ ಸಚಿವ ಸುರೇಶ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು. ಸಚಿವ ಸುರೇಶ್ ಕುಮಾರ್ ಇಲ್ಲಿಗೆ ಬಂದು ರಾಜಕೀಯ ಮಾಡುತ್ತಿದ್ದಾರೆಯೇ ಹೊರತು ಏನೂ ಕೆಲಸ ಮಾಡುತ್ತಿಲ್ಲ.  ಇನ್ನು ಮುಂದೆಯಾದರೂ ರಾಜಕೀಯ ಮಾಡೋದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿ. ರಾಜಕೀಯ ಮಾಡೋದಾದ್ರೆ  ನಿಮ್ಮ ಪಕ್ಷದ ಕಚೇರಿಯಲ್ಲಿ ಮಾಡಿ, ಸುಮ್ಮನೆ ಯಾಕೆ ಉಸ್ತುವಾರಿ ಸಚಿವರಾಗಿದ್ದೀರಿ ಎಂದು ಹರಿಹಾಯ್ದರು.

ಇದನ್ನೂ ಓದಿ: ‘ಬರೀ ಬಾಯಿ ಮಾತಲ್ಲ, ಯಾವುದಕ್ಕೆ ಎಷ್ಟೆಂದು ದಾಖಲೆ ತೋರಿಸಿ?‘ - ಶ್ರೀರಾಮುಲು ಲೆಕ್ಕಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆಸಚಿವ ಸುರೇಶ್ ಕುಮಾರ್ ಹೇಳಿದ ಕೆಲಸಗಳು ಇಲ್ಲಿಯವರೆಗೆ ಯಾವುದು ಆಗಿಲ್ಲ. ಇದಲ್ಲದೆ ಕೋವಿಡ್ ಗಾಗಿ 3 ಕೋಟಿ 11 ಲಕ್ಷ ರೂಪಾಯಿ  ಖರ್ಚು ಮಾಡಲಾಗಿದೆ. ಗಣಿ ಭೂ ವಿಜ್ಷಾನ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಹೇಳಿಕೊಳ್ಳುವಂತಹ ಯಾವ  ಕೆಲಸಗಳೂ ಆಗಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಆರೋಪಿಸಿದರು.
Published by: Ganesh Nachikethu
First published: July 20, 2020, 5:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories