• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Assembly Session: ಗೋಹತ್ಯೆ ನಿಷೇಧ ಮಸೂದೆಗೆ ವಿರೋಧ; ಕಾಂಗ್ರೆಸ್ ಶಾಸಕರಿಂದ ಸದನ ಬಹಿಷ್ಕಾರ

Karnataka Assembly Session: ಗೋಹತ್ಯೆ ನಿಷೇಧ ಮಸೂದೆಗೆ ವಿರೋಧ; ಕಾಂಗ್ರೆಸ್ ಶಾಸಕರಿಂದ ಸದನ ಬಹಿಷ್ಕಾರ

ಸಿದ್ದರಾಮಯ್ಯ-ಯಡಿಯೂರಪ್ಪ.

ಸಿದ್ದರಾಮಯ್ಯ-ಯಡಿಯೂರಪ್ಪ.

Karnataka Winter Session: ವಿಧಾನಸಭಾ ಅಧಿವೇಶನದ ಕೊನೆಯ ದಿನವಾದ ಇಂದು ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧಿಸಿ ಇಂದು ಕಾಂಗ್ರೆಸ್ ಸದನಕ್ಕೆ ಬಹಿಷ್ಕಾರ ಹಾಕಿದೆ. ಈ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಲಾಯಿತು.

  • Share this:

ಬೆಂಗಳೂರು (ಡಿ. 10): ಕರ್ನಾಟಕ ವಿಧಾನಸಭಾ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ಸದನವನ್ನು ಬಹಿಷ್ಕರಿಸಿ, ಕಾಂಗ್ರೆಸ್ ಶಾಸಕರು ಹೊರ ನಡೆದಿದ್ದಾರೆ. ಬುಧವಾರ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ವಿಧೇಯಕವನ್ನು ಮಂಡಿಸಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆತುರಾತುರವಾಗಿ ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಲಾಗಿದೆ. ಈ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆಯೇ ನಡೆದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ವಿಧಾನಸಭಾ ಅಧಿವೇಶನದ ಕೊನೆಯ ದಿನವಾದ ಇಂದು ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧಿಸಿ ಇಂದು ಕಾಂಗ್ರೆಸ್ ಸದನಕ್ಕೆ ಬಹಿಷ್ಕಾರ ಹಾಕಿದೆ. ಈ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಲಾಯಿತು.


ಗೋಹತ್ಯೆ ನಿಷೇಧದ ಬಗ್ಗೆ ಕಾಂಗ್ರೆಸ್​ ಶಾಸಕರು ಚರ್ಚೆಗೆ ಬರಬೇಕು. ಹೀಗಾಗಿ ಸದನಕ್ಕೆ ಅವರನ್ನು ಕರೆತರಲು ನಾನು ಪ್ರಯತ್ನ ಮಾಡುತ್ತೇನೆ. ಅವರು ಬಂದ ನಂತರ ಸದನ ನಡೆಸೋಣ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಮುಂದೂಡಿದರು. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಇರದ ಹಿನ್ನೆಲೆಯಲ್ಲಿ ಸದನವನ್ನು ಸಂಪ್ರದಾಯ ಬಿಟ್ಟು ನಡೆಸಲು ಸಾಧ್ಯವಿಲ್ಲ ಎಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನ ಮುಂದೂಡಿಕೆ ಮಾಡಲು ನಿರ್ಧರಿಸಿದರು.


ಇದನ್ನೂ ಓದಿ: ಏಕಾಏಕಿ ಸದನದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ; ಇದು ಲಜ್ಜೆಗೆಟ್ಟ ಸರ್ಕಾರ ಎಂದ ಸಿದ್ದರಾಮಯ್ಯ


ಈ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ತರಾತುರಿಯಲ್ಲಿ ಬಿಲ್ ಮಂಡಿಸಬೇಕಾದ ಅನಿವಾರ್ಯತೆ ಇತ್ತು. ಸದನಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡುತ್ತೇನೆ. ವಿಧಾನ ಪರಿಷತ್ ಮುಕ್ತಾಯ ಆಗುವ ಕಾರಣಕ್ಕೆ ಬಿಲ್ ಮಂಡಿಸಿದ್ದೇವೆ. ಬಿಲ್ ಅಂಗೀಕಾರ ಆಗಬೇಕು ಎಂಬ ಕಾರಣಕ್ಕೆ ಮಂಡನೆ ಮಾಡಿದ್ದೇವೆ. ಕದ್ದುಮುಚ್ಚಿ ನಾವು ಮಸೂದೆಯನ್ನು ಮಂಡನೆ ಮಾಡಿಲ್ಲ. ಸರ್ಕಾರಕ್ಕೆ ಬಹುಮತ ಇರುವುದರಿಂದ ಕದ್ದುಮುಚ್ಚಿ ಬಿಲ್ ಮಂಡನೆ ಮಾಡೋ ಅಗತ್ಯವಿಲ್ಲ ಎನ್ನುವ ಮೂಲಕ ಸದನದಲ್ಲಿ ಗೋಹತ್ಯೆ ವಿಧೇಯಕವನ್ನು ಅಂತಿಮ ಕ್ಷಣದಲ್ಲಿ ಮಂಡನೆ ಮಾಡಿದ್ದನ್ನು ಸಚಿವ ಮಾಧುಸ್ವಾಮಿ ಒಪ್ಪಿದ್ದಾರೆ.


ಸದನದಿಂದ ಹೊರನಡೆದ ಕಾಂಗ್ರೆಸ್ ಶಾಸಕರು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಸಂಧಾನಕ್ಕೆ ಬರುವಂತೆ ಸ್ಪೀಕರ್ ಕಚೇರಿಯಿಂದ ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಸಿಎಲ್​ಪಿ ಸಭೆ ನಡೆಯುವ ಸ್ಥಳಕ್ಕೆ ತೆರಳಿ ಆಹ್ವಾನ ನೀಡಿದರು. ಆದರೆ, ಶಾಸಕಾಂಗ ಪಕ್ಷದ ಸಭೆಯ ಬಳಿಕ ಬರುವುದಾಗಿ ಸಿದ್ದರಾಮಯ್ಯ ಹೇಳಿ ಕಳುಹಿಸಿದರು. ಕಾಂಗ್ರೆಸ್ ಶಾಸಕರು ಮತ್ತೆ ಸದನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿ ಮತ್ತೆ ಸದನವನ್ನು ಆರಂಭಿಸಲಾಯಿತು. ಗೋ ಹತ್ಯೆ ನಿಷೇಧ ಕಾಯ್ದೆಯ ಕುರಿತು ಮುಂದಿನ ನಡೆಯ ಬಗ್ಗೆ ಸಿಎಲ್​ಪಿ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಚರ್ಚೆ ನಡೆಸುತ್ತಿದ್ದಾರೆ.

top videos
    First published: