ಬೆಂಗಳೂರು (ಆ. 21): ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ ಹಿನ್ನಲೆ ಹೆಚ್ಚಿನ ವಿಚಾರಣೆಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ದೆಹಲಿಗೆ ತೆರಳಿದ್ದಾರೆ. ಆಗಸ್ಟ್ 5 ರಂದು ಜಮೀರ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿ ವೇಳೆ ಅನೇಕ ದಾಖಲೆಗಳನ್ನು ವಶ ಪಡಿಸಿಕೊಂಡ ಇಡಿ ಅಧಿಕಾರಿಗಳು ಇಂದು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ಈ ಹಿನ್ನಲೆ ಅವರು ಇಂದು ದೆಹಲಿಗೆ ತೆರಳಿದ್ದು, ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆ ಸುಮಾರು ಕೆಂಪೇಗೌಡ ಏರ್ ಪೋರ್ಟ್ ನಿಂದ ದೆಹಲಿಗೆ ತೆರಳಿದ್ದಾರೆ.
ಇನ್ನು ತಮ್ಮ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಸಂಬಂಧ ಹಾಗೂ ಇಡಿ ವಿಚಾರಣೆಗೆ ಹಾಜರಾಗುವ ಪ್ರಕ್ರಿಯೆಗಳ ಕುರಿತು ಅವರು ನಿನ್ನೆ ತಡರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು, ಈ ವೇಳೆ ಹಿಂದಿನ ಘಟನಾವಳಿ ಬಗ್ಗೆ ಡಿಕೆ ಶಿವಕುಮಾರ್ ಅವರಿಗೆ ವಿವರಣೆಯನ್ನು ಅವರು ನೀಡಿದ್ದಾರೆ. ಅಲ್ಲದೇ, ಇಡಿ ರೀತಿ ರಿವಾಜುಗಳ ಬಗ್ಗೆ ಸಲಹೆ ಕೆಪಿಸಿಸಿ ಅಧ್ಯಕ್ಷರು ಶಾಸಕ ಜಮೀರ್ ಅಹ್ಮದ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ತಮ್ಮ ಮೇಲಿನ ದಾಳಿ ಷಡ್ಯಂತ್ರ:
ಇನ್ನು ತಮ್ಮ ಮೇಲೆ ನಡೆಸಿದ ಈ ದಾಳಿ ಕುರಿತು ಟ್ವಿಟರ್ನಲ್ಲಿ ಹರಿಹಾಯ್ದಿರುವ ಜಮೀರ್ ಅಹ್ಮದ್, ದೇಶಾದ ವಿವಿಧ ರಾಜ್ಯಗಳ ಪ್ರಬಲ ಮುಸ್ಲಿಂ ಸಮುದಾಯದ ನಾಯಕರ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಅವರಿಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ ನನ್ನ ಮೇಲೆ ದಾಳಿಗಳಾಗುತ್ತಿವೆ ಆದರೆ, ಇಂತಹ ಷಡ್ಯಂತ್ರಗಳಿಗೆ ನಾನು ಹೆದರುವುದಿಲ್ಲ ಎಂದಿದ್ದರು.
ಅಲ್ಲದೇ ತಮ್ಮ ಮೇಲಿನ ದಾಳಿಗೆ ತಾವು ಮನೆ ಕಟ್ಟಿಸಿದ್ದೆ ಮೂಲಕ ಕಾರಣವಾಗಿದೆ. ದೊಡ್ಡದಾಗೊ ಮನೆಯನ್ನು ಕಟ್ಟಿಸಿದ್ದೆ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಈ ಕಾರಣಕ್ಕಾಗಿ ನನ್ನ ಮೇಲೆ ಇ.ಡಿ ದಾಳಿಯಾಯಿತು. ಇ.ಡಿ ಯವರು ಯಾವ ನಿರೀಕ್ಷೆಯಿಂದ ನನ್ನ ಮೇಲೆ ದಾಳಿ ಮಾಡಿದ್ದರೋ ಆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ ಎಂದು ನಿನ್ನೆಯಷ್ಟೇ ಅವರು ಟ್ವೀಟ್ ಮೂಲಕ ದಾಳಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಗಳ ಕೆಲವೇ ಘಂಟೆಗಳ ಬಳಿಕ ಅವರು ಇಡಿ ಮುಂದೆ ವಿಚಾರಣೆಗೆ ಹಾಜರಾಗಲು ಮುಂದಾಗಿದ್ದಾರೆ.
ಇದನ್ನು ಓದಿ: ಆಲಮಟ್ಟಿಗೆ ಡ್ಯಾಂಗೆ ಬಾಗಿನ ಅರ್ಪಿಸಿ, ರೈತರ ಮನವಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ
ಐಎಂಎ ಹಗರಣ ಸಂಬಂಧಿಸಿದಂತೆ ಐಟಿ ಮತ್ತು ಇಡಿ ತನಿಖಾ ಸಂಸ್ಥೆಗಳು ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ ಸ್ಥಳಗಳ ಮೇಲೆ ಆಗಸ್ಟ್ 5 ರಂದು ದಾಳಿ ನಡೆಸಿದ್ದರು. ಜಮೀರ್, ರಿಚ್ಮಂಡ್ ಟೌನ್ನಲ್ಲಿರುವ ತಮ್ಮ ಆಸ್ತಿಯನ್ನು ಐಎಂಎ ಮಾಲೀಕ ಮನ್ಸೂರ್ ಖಾನ್ ಅವರಿಗೆ ಜಮೀರ್ ಮಾರಾಟ ಮಾಡಿದಾಗ ಅವ್ಯವಹಾರವಾಗಿದೆ ಎಂಬುದು ಇಡಿ ಸಂಶಯ. ಹೀಗಾಗಿ, ಜಮೀರ್ ಮನೆ, ಕಚೇರಿ ಮೇಲೆ ಇಡಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದ ಅವರು ಅನೇಕ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಅಲ್ಲದೇ, ಈ ಆಸ್ತಿ ವ್ಯವಹಾರ ಕುರಿತ ವಿವರಣೆ ನೀಡುವಂತೆ ಸಮಯ ನೀಡಿದ್ದರು. ಈ ಸಮಯ ಅವಕಾಶ ಮುಗಿದ ಹಿನ್ನಲೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ