ಬೆಂಗಳೂರು: ನಿನ್ನೆ ಕಾಂಗ್ರೆಸ್ ಅಲ್ಪ ಸಂಖ್ಯಾತರ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕ ಜಮೀರ್ ಅಹ್ಮದ್ (Congress MLA Zameer) ಅವರನ್ನು ಆಹ್ವಾನ ಮಾಡಿರಲಿಲ್ಲ ಅಂತ ಗಲಾಟೆ ಆಗಿದೆ. ಇದೇ ಕಾರಣಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukacharya) ಆರೋಪಿಸಿದ್ದರು. ಇದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹಾಗೂ ಶಾಸಕ ಜಮೀರ್ ಅಹಮ್ಮದ್ ಖಾನ್ (Zameer Ahmed Khan) ಅಲ್ಲಗಳೆದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ನಿನ್ನೆ ಅಲ್ಪಸಂಖ್ಯಾತರ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಷಣ ನಿಲ್ಲಿಸುವಂತ ಗದ್ದಲ ಆಗಿಲ್ಲ. ಸಿದ್ದರಾಮಯ್ಯ ಅವರು ಪುನಿತ್ ನಮನ ಕಾರ್ಯಕ್ರಮಕ್ಕೆ ತೆರಳಬೇಕಿತ್ತು. ಹೀಗಾಗಿ ಸಣ್ಣ ಭಾಷಣ ಮಾಡಿ ತೆರಳಿದರು ಎಂದು ಸ್ಪಷ್ಟನೆ ನೀಡಿದರು. ಬಿಜೆಪಿಯವರ ಟ್ವೀಟ್ ಗೆ ನಾನು ಉತ್ತರ ಕೊಡಬೇಕಾಗಿಲ್ಲ. ಅದು ನಮ್ಮ ಪಕ್ಷದ ವಿಚಾರ, ನಮ್ಮ ಕಾರ್ಯಕರ್ತರ ಕಾರ್ಯಕ್ರಮ. ನಮ್ಮ ಪಕ್ಷದ ವಿಚಾರ ಬಿಜೆಪಿಯವರಿಗೆ ಏಕೆ. ಮೊದಲು ಅವರ ತಟ್ಟೆಯಲ್ಲಿರುವ ಹೆಗ್ಗಣ ಕ್ಲೀನ್ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಕಂಟ್ರೋಲ್ ತಗೋಳ್ಳಕ್ಕೆ ನಾನು ರೇಗುತ್ತೇನೆ
ರೇಣುಕಾಚಾರ್ಯ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಬಿಜೆಪಿಯ ಮೆಂಟಲ್ ಗಳಿಗೆಲ್ಲ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಮೆಂಟಲ್ ಗಿರಾಕಿಗಳಿಗೆಲ್ಲ ಉತ್ತರ ಕೊಡಲ್ಲ. ಸಿಎಂ ಅವರು ಏನಾದ್ರು ಹೇಳಿದ್ರೆ ಹೇಳಿ, ನಾನು ಉತ್ತರ ಕೊಡ್ತೇನೆ ಎಂದರು. ಸಿದ್ದರಾಮಯ್ಯ ಅವರ ಬಳಿಕ ಕಾರ್ಯಕ್ರಮದಲ್ಲಿ ನಾನು ಭಾಷಣ ಮಾಡಿದ್ದೇನೆ. ಹೌದು ನಾನು ಸ್ವಲ್ಪ ಹಾರ್ಡ್ ಆಗಿ ಮಾತಾಡಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ನಾನು ಕಂಟ್ರೋಲ್ ತಗೊಬೇಕಾಗುತ್ತೆ. ಕೆಲವೊಮ್ಮೆ ನಾನು ಸಾಫ್ಟ್, ಕೆಲವೊಮ್ಮೆ ಹಾರ್ಡ್ ಆಗಬೇಕಾಗುತ್ತೆ.
ನಾನು ಬೈದರು, ಉಗಿದರು ನನ್ನ ಇಷ್ಟಪಡುತ್ತಾರೆ
ನಾನು ಬೈದರು, ಉಗಿದರು ನನ್ನ ನಮ್ಮ ಕಾರ್ಯಕರ್ತರು ನನ್ನ ಇಷ್ಟಪಡ್ತಾರೆ. ಇನ್ನು ಶಾಸಕ ಜಮೀರ್ ಅಹಮದ್ ಕಾರ್ಯಕ್ರಮಕ್ಕೆ ಗೈರಾಗಿದ್ದು ಬೇರೆ ಕಾರಣಕ್ಕೆ. ಜಮೀರ್ ಅಹಮದ್ ನಿನ್ನೆ ದೆಹಲಿಯಲ್ಲಿದ್ದರು.. ಹೀಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಗೈರಿಗೆ ಕಾರಣ ತಿಳಿಸಿದರು. ಪಕ್ಷದ ಪೂಜೆ ಮಾಡಬೇಕು. ವ್ಯಕ್ತಿ ಪೂಜೆ ಸಲ್ಲದು ಎಂದು ನಾನು ಮೊದಲಿನಿಂದಲೂ ಹೇಳ್ತಿದ್ದೇನೆ ಎಂದರು.
ಯಡಿಯೂರಪ್ಪ ಜೊತೆ ಇದ್ದಿದ್ದಕ್ಕೆ ಪಾಪ ಅವರನ್ನು ತುಳಿದಿದ್ದಾರೆ
ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರನ್ನು ತುಳಿಯುತ್ತಿದ್ದಾರೆ, ಅದಕ್ಕೆ ಕಾರ್ಯಕ್ರಮಕ್ಕೆ ಜಮೀರ್ನ ಕರೆದಿಲ್ಲ ಎಂದ ರೇಣುಕಾಚಾರ್ಯ ಆರೋಪಕ್ಕೆ ಜಮೀರ್ ದೆಹಲಿಯಲ್ಲಿ ತಿರುಗೇಟು ನೀಡಿದರು. ರೇಣುಕಾಚಾರ್ಯಗೆ ಆ ರೀತಿಯ ಅನುಭವ ಆಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜೊತೆಗಿದ್ದ ಕಾರಣ ಅವರನ್ನು ತುಳಿದಿದ್ದಾರೆ. ಯಡಿಯೂರಪ್ಪ ಜೊತೆಗಿದ್ದ ಕಾರಣ ಅವರನ್ನು ಮಂತ್ರಿ ಮಾಡಿಲ್ಲ. ತುಳಿಯುವ ಸಂಸ್ಕೃತಿ ಬಿಜೆಪಿಯಲ್ಲಿದೆ. ಆ ಸಂಸ್ಕೃತಿ ಕಾಂಗ್ರೆಸ್ನಲ್ಲೂ ಇದೆ ಎಂದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಆ ಸಂಸ್ಕೃತಿ ಇಲ್ಲ ಎಂದು ಮಾತಿನಲ್ಲೇ ತಿವಿದರು.
ಇದನ್ನೂ ಓದಿ: ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ: MP Renukacharya
ಸಿದ್ದರಾಮಯ್ಯ ಬೇಜಾರು ಮಾಡಿಕೊಳ್ಳುವ ವ್ಯಕ್ತಿ ಅಲ್ಲ
ಸಿದ್ದರಾಮಯ್ಯ ಅವರು ಜೊತೆಗೆ ಇದ್ದವರನ್ನು ತುಳಿಯಲ್ಲ, ನನ್ನನ್ನು ಯಾರು ತುಳಿದಿಲ್ಲ. ಸಿದ್ದರಾಮಯ್ಯ ಭಾಷಣಕ್ಕೆ ನಿನ್ನೆಯ ಕಾರ್ಯಕ್ರಮದಲ್ಲಿ ಅಡ್ಡಿಪಡಿಸಿಲ್ಲ. ಅದು ಅಡ್ಡಿಪಡಿಸಿರೋದಲ್ಲ, ಜೋರಾಗಿ ಜೈಕಾರ ಹಾಕಿದಷ್ಟೇ. ಸಿದ್ದರಾಮಯ್ಯ ಬೇಜಾರಾಗೋ ವ್ಯಕ್ತಿಯಲ್ಲ, ಇಂತಹದನ್ನೆಲ್ಲ ಅವರು ಖುಷಿಪಡುತ್ತಾರೆ. ನಾನು ನಿನ್ನೆ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ. ನಾನು ಅನುಪಸ್ಥಿತಿಯಲ್ಲಿ ಇರೋ ಕಾರಣ ನಮ್ಮ ಜನ ಎಲ್ಲಿ ಅಂತ ಕೇಳಿದ್ದಾರೆ ಅಷ್ಟೆ ಎಂದು ಸಮಜಾಯಿಷಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ