ಶಾಸಕ ಉಮೇಶ್ ಜಾಧವ್ ಇಂದೇ ರಾಜೀನಾಮೆ?

ಉಮೇಶ್​ ಜಾಧವ್​ ಸಹೋದರ ರಾಮಚಂದ್ರ ಜಾಧವ್​ ಈ ಬಗ್ಗೆ ಮಾತನಾಡಿದ್ದು, ಇಂದು ಸಂಜೆಯೊಳಗೆ ರಾಜೀನಾಮೆ ನೀಡುತ್ತಾರೆ. ಇಂದು ಆಗದಿದ್ದಲ್ಲಿ ನಾಳೆ ರಾಜೀನಾಮೆ ನೀಡುವುದು ಖಚಿತ ಎಂದು ಹೇಳಿದ್ಧಾರೆ. ರಾಜೀನಾಮೆ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಿದ್ಧಾರೆ ಎನ್ನಲಾಗಿದೆ.

Latha CG | news18
Updated:February 12, 2019, 11:57 AM IST
ಶಾಸಕ ಉಮೇಶ್ ಜಾಧವ್ ಇಂದೇ ರಾಜೀನಾಮೆ?
ಶಾಸಕ ಉಮೇಶ್​ ಜಾಧವ್​
Latha CG | news18
Updated: February 12, 2019, 11:57 AM IST
ಬೆಂಗಳೂರು,(ಫೆ.12): ಸ್ವಪಕ್ಷದ ನಾಯಕರು ನಿಲಕ್ಷ್ಯ ತೋರುತ್ತಿದ್ದಾರೆ ಎಂದು ಬೇಸರಗೊಂಡಿರುವ ಕಲಬುರ್ಗಿ ಶಾಸಕ ಉಮೇಶ್​ ಜಾಧವ್​ ಇಂದೇ ರಾಜೀನಾಮೆ ನೀಡಲಿದ್ಧಾರೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಬೆಂಗಳೂರಿನಲ್ಲೇ ಇರುವ ಉಮೇಶ್​ ಜಾಧವ್​ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ ಎಂದು ಬಲ್ಲ ಮೂಲಗಳು ತಿಳಿಸಿವೆ.

ಉಮೇಶ್​ ಜಾಧವ್​ ಸಹೋದರ ರಾಮಚಂದ್ರ ಜಾಧವ್​ ಈ ಬಗ್ಗೆ ಮಾತನಾಡಿದ್ದು, ಇಂದು ಸಂಜೆಯೊಳಗೆ ರಾಜೀನಾಮೆ ನೀಡುತ್ತಾರೆ. ಇಂದು ಆಗದಿದ್ದಲ್ಲಿ ನಾಳೆ ರಾಜೀನಾಮೆ ನೀಡುವುದು ಖಚಿತ ಎಂದು ಹೇಳಿದ್ಧಾರೆ. ರಾಜೀನಾಮೆ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಿದ್ಧಾರೆ ಎನ್ನಲಾಗಿದೆ.

ಆ ಒಬ್ಬ ಮುಖಂಡ ಯೆಸ್ ಅಂದಿದ್ದರೆ ಉಮೇಶ್ ಜಾಧವ್ ಕಾಂಗ್ರೆಸ್ ತೊರೆಯುವ ನಿರ್ಧಾರಕ್ಕೆ ಬರುತ್ತಿರಲಿಲ್ಲವಾ?

ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕ ಉಮೇಶ್​ ಜಾಧವ್​ ನಡುವೆ ಒಡಕು ಮೂಡಿತ್ತು. ಇದಾದ ಬಳಿಕ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಮುಂಬರುವ ಲೋಕಸಭಾ ಚುನಾವಣೆಗೆ ಕಲಬುರ್ಗಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಯಾವ ಬಲಿಷ್ಟ ಅಭ್ಯರ್ಥಿ ಇಲ್ಲ ಎಂಬುದು ಬಿಜೆಪಿಗೆ ತಿಳಿದಿತ್ತು. ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಉಮೇಶ್​ ಜಾಧವ್​ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನ ನಡೆಸಿದ್ದಾರೆ.

ಶಾಸಕರ ಅಪಹರಣ ಮಾಡಿದ್ದೀರಾ? ಅತೃಪ್ತರ ಮುಖಂಡ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ನೋಟೀಸ್

ಚಿಂಚೊಳ್ಳಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಪಕ್ಷ ಬಿಟ್ಟು ಹೋಗದಿರಲು ಕಾಂಗ್ರೆಸ್​ ಮುಖಂಡರು ಪ್ರಯತ್ನ ಕೂಡ ನಡೆಸಿದ್ದರು. ಆದರೆ ಮಲ್ಲಿಕಾರ್ಜುನ ಖರ್ಗೆ ಉಮೇಶ್​ ಜಾಧವ್​ ಪಕ್ಷ ಬಿಟ್ಟು ಹೋದರೆ ಹೋಗಲಿ ಎಂದು ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಸ್ವಪಕ್ಷದ ನಾಯಕರಿಂದಲೇ ನಿರ್ಲಕ್ಷ್ಯಕ್ಕೊಳಗಾಗಿರುವ ಜಾಧವ್ ಪಕ್ಷ ತೊರೆಯಲು ಸಿದ್ಧರಿದ್ಧಾರೆ ಎನ್ನಲಾಗಿದೆ. ಬೇಸರಗೊಂಡಿರುವ ಶಾಸಕ ಉಮೇಶ್​ ಜಾಧವ್ ಇಂದು​ ರಾಜೀನಾಮೆ ನೀಡುವುದು ಖಚಿತ ಎನ್ನಲಾಗುತ್ತಿದೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ