Sowmya Reddy: ಕಾಂಗ್ರೆಸ್​ ಶಾಸಕಿ ಸೌಮ್ಯ ರೆಡ್ಡಿಗೆ ಕೊರೋನಾ ಸೋಂಕು ದೃಢ

ಸೌಮ್ಯ ರೆಡ್ಡಿ

ಸೌಮ್ಯ ರೆಡ್ಡಿ

ಕಳೆದೆರಡು ದಿನಗಳ ಹಿಂದೆ ಕಾಂಗ್ರೆಸ್​ ನಾಯಕಿಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಶಾಸಕಿ ಸೌಮ್ಯ ರೆಡ್ಡಿ ಅವರು ಭಾಗಿಯಾಗಿದ್ದರು.

  • Share this:

ಕಳೆದೆರಡು ದಿನಗಳ ಹಿಂದೆ ಕಾಂಗ್ರೆಸ್​ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. ಈ ಕುರಿತು ಟ್ವೀಟರ್​ನಲ್ಲಿ ಅವರು ದೃಢಪಡಿಸಿದ್ದಾರೆ. ಕೋವಿಡ್ ರೋಗಲಕ್ಷಣಗಳು ಹೆಚ್ಚಿಲ್ಲದಿದ್ದರು ಸಹ ನನಗೆ ಈ ಹಿಂದೆ ಅಸ್ತಮಾ ಇದ್ದ ಕಾರಣ, ಪಾಲಕರ ಸೂಚನೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಸಾರ್ವಜನಿಕರಿಗೆ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ನನ್ನ ಕಚೇರಿಗೆ ಕರೆಮಾಡಬೇಕಾಗಿ ಕೋರುತ್ತೇನೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ. ಇದೇ ವೇಳೆ ಕೋವಿಡ್ 2ನೇ ಅಲೆಯ ತೀವ್ರತೆ ಹೆಚ್ಚುತ್ತಿದ್ದು, ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಕೈಗೊಂಡು ಮಾಸ್ಕ್ ಧರಿಸಿ. ಎಲ್ಲರಿಗೂ ಲಸಿಕೆ ನೀಡುವ ವಿಧಾನವನ್ನು ತ್ವರಿತಗೊಳಿಸಬೇಕೆಂದು ನಾನು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.



ಸಚಿವ ಡಾ. ಸುಧಾಕರ್​ ಅವರ ಏಕಪತ್ನಿವೃತ್ರಸ್ಥ ಹೇಳಿಕೆ ಖಂಡಿಸಿ, ಕಳೆದೆರಡು ದಿನಗಳ ಹಿಂದೆ ಕಾಂಗ್ರೆಸ್​ ನಾಯಕಿಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಶಾಸಕಿ ಸೌಮ್ಯ ರೆಡ್ಡಿ ಅವರು ಭಾಗಿಯಾಗಿದ್ದರು.


ರಾಜ್ಯದಲ್ಲಿ ಕೋವಿಡ್​ ಎರಡನೇ ಅಲೆ ಹೆಚ್ಚಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆ ಮುಂಜಾಗ್ರತೆವಹಿಸುವಂತೆ ಸರ್ಕಾರ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಇಳಿಕೆಯಾಗಿದ್ದ ಪ್ರಕರಣಗಳು ಈಗ ದಿನವೊಂದಕ್ಕೆ ಒಂದೂವರೆ ಸಾವಿರ ದಾಟುತ್ತಿದೆ. ಈ ಹಿನ್ನಲೆ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ಸರ್ಕಾರ ಮನವಿ ಮಾಡಿದೆ. ಅಲ್ಲದೇ ಮಾಸ್ಕ್​ ಧರಿಸದವರ ವಿರುದ್ಧ ದಂಡ ಸಂಗ್ರಹಕ್ಕೆ ಮಾರ್ಷಲ್​ಗಳು ಮುಂದಾಗಿದ್ದಾರೆ. ಸಭೆ ಸಮಾರಂಭಗಳಿಗೆ ಜನರ ಮಿತಿಯನ್ನು ಹೇರಲಾಗಿದ್ದು, ಇದು ತಪ್ಪಿದರೆ ಭಾರೀ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.


ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲು ಹೊರ ರಾಜ್ಯದ ಪ್ರವಾಸಿಗರು ಕಾರಣವಾಗಿದ್ದಾರೆ. ಇದೇ ಹಿನ್ನಲೆ ಏಪ್ರಿಲ್​ 1 ರಿಂದ ರಾಜಧಾನಿಗೆ ಆಗಮಿಸುವ ಹೊರ ರಾಜ್ಯದವರಿಗೆ ಆರ್​ಟಿಪಿಸಿಆರ್​ ಪರೀಕ್ಷೆ ಕಡ್ಡಾಯವಾಗಿದೆ.

top videos
    First published: