HOME » NEWS » State » CONGRESS MLA SHARANAPPAGOWDA DARSHANAPURA HITS OUT AT CM BS YEDIYURAPPA LG

ಸಿಎಂ ಬಿಎಸ್ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ; ಕೈ ಶಾಸಕ ಶರಣಬಸಪ್ಪಗೌಡ ಆಕ್ರೋಶ

ಪ್ರವಾಹ ನಿರ್ವಹಣೆಗೆ ರಸ್ತೆ ಹಾಗೂ ವಿವಿಧ ಕಾಮಗಾರಿ ಕೈಗೊಳ್ಳಲು ಸರಕಾರ ಜಿಲ್ಲೆಗೆ 10 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ.ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕೂಡ ಮಳೆಯಿಂದ ರಸ್ತೆ ಹಾಗೂ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ, ಸರಕಾರ ಶಹಾಪುರ ಕ್ಷೇತ್ರಕ್ಕೆ ಒಂದು ರೂ ಅನುದಾನ ಕೊಟ್ಟಿಲ್ಲ. ಇದರಿಂದ ಕ್ಷೇತ್ರದ ಜನ ಬೇಸತ್ತು ನನಗೆ ರಾಜೀನಾಮೆ ನೀಡಲು ಕೇಳುತ್ತಿದ್ದಾರೆ.

news18-kannada
Updated:November 24, 2020, 9:20 AM IST
ಸಿಎಂ ಬಿಎಸ್ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ; ಕೈ ಶಾಸಕ ಶರಣಬಸಪ್ಪಗೌಡ ಆಕ್ರೋಶ
ಕೈ ಶಾಸಕ ಶರಣಬಸಪ್ಪಗೌಡ
  • Share this:
ಯಾದಗಿರಿ(ನ.24): ಕಾಂಗ್ರೆಸ್ ಕ್ಷೇತ್ರಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ  ಅವರು ತಾರತಮ್ಯ ಮಾಡಿ ರಾಜಕೀಯ ದ್ವೇಷ ಮಾಡುತ್ತಿದ್ದಾರೆ. ನೆರೆ ಪ್ರವಾಹದಿಂದ ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ  ಅಪಾರ ಪ್ರಮಾಣದ ಬೆಳೆ, ಆಸ್ತಿ, ರಸ್ತೆ, ಸೇತುವೆಗಳು ಹಾನಿಯಾದರೂ ನೆರೆ ಪರಿಹಾರದ ಹಣ ನೀಡಿಲ್ಲವೆಂದು ಶಹಾಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಸಿಎಂ ವಿರುದ್ಧ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಯಾದಗಿರಿ ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ನೇತೃತ್ವದಲ್ಲಿ ನಡೆದ ಪ್ರವಾಹ ನಿರ್ವಹಣೆ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇದಕ್ಕೂ ಮುನ್ನ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರವಾಹ ನಿರ್ವಹಣೆ ಸಭೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಹಾಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಸಚಿವ ಪ್ರಭು ಚವ್ಹಾಣ ಅವರಿಗೆ ತರಾಟೆ ತೆಗೆದುಕೊಂಡರು.ಈ ವೇಳೆ  ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಐಎಂಎ ಪ್ರಕರಣದ ತನಿಖೆ ಚುರುಕುಗೊಂಡಿದೆ ನಿಜ, ಆದರೆ, ಮನ್ಸೂರ್ ಖಾನ್ ದುಬೈಗೆ ಪರಾರಿಯಾಗಲು ಸಹಾಯ ಮಾಡಿದವರು ಯಾರು?

ಅಭಿವೃದ್ಧಿ ಮಾಡದಿದ್ದರೆ ಜನ ರಾಜೀನಾಮೆ ನೀಡು ಅಂತಾರೆ:

ಪ್ರವಾಹ ನಿರ್ವಹಣೆಗೆ ರಸ್ತೆ ಹಾಗೂ ವಿವಿಧ ಕಾಮಗಾರಿ ಕೈಗೊಳ್ಳಲು ಸರಕಾರ ಜಿಲ್ಲೆಗೆ 10 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ.ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕೂಡ ಮಳೆಯಿಂದ ರಸ್ತೆ ಹಾಗೂ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ, ಸರಕಾರ ಶಹಾಪುರ ಕ್ಷೇತ್ರಕ್ಕೆ ಒಂದು ರೂ ಅನುದಾನ ಕೊಟ್ಟಿಲ್ಲ. ಇದರಿಂದ ಕ್ಷೇತ್ರದ ಜನ ಬೇಸತ್ತು ನನಗೆ ರಾಜೀನಾಮೆ ನೀಡಲು ಕೇಳುತ್ತಿದ್ದಾರೆ. ಹಣ ನೀಡದಿದ್ದರೆ ನಾವು ಕ್ಷೇತ್ರದಲ್ಲಿ ಹೇಗೆ ಓಡಾಡಬೇಕೆಂದು ಸಚಿವ ಪ್ರಭು ಚವ್ಹಾಣಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತರಾಟೆ ತೆಗೆದುಕೊಂಡರು.

ಅನುದಾನ ನೀಡದೆ ತಾರತಮ್ಯ ಮಾಡಿ ಕ್ಷೇತ್ರಕ್ಕೆ ವಿಷ ಹಾಕುವ ಕೆಲಸ ಸರಕಾರ ಮಾಡಿದೆ ಎಂದು ಶಾಸಕ ದರ್ಶನಾಪುರ ಗರಂ ಆದ್ರು, ಈ ವೇಳೆ ಪಿಡಬ್ಲುಡಿ ಅಧಿಕಾರಿಗೆ ಯಾಕೆ ಹಣ ಬಂದಿಲ್ಲವೆಂದರು. ಪ್ರಸ್ತಾವನೆ ಸಲ್ಲಿಸಿದರೂ ಹಣ ಬಂದಿಲ್ಲವೆಂದರೆ ಏನು ಸಚಿವ ಚವ್ಹಾಣ ಹಣ ಕೊಡಬಾರದೆಂದು ಹೇಳಿದ್ದಾರಾ ಎಂದು ಅಧಿಕಾರಿಗೆ ಪ್ರಶ್ನೆ ಮಾಡಿದರು.
ಈ ನಡುವೆ ಸಚಿವ ಪ್ರಭು ಚವ್ಹಾಣ, ನಾವು ಬೇಡ ಅಂದಿಲ್ಲ ಸಾಹೇಬ್ರೆ ಎಂದರು. ನೀವು ಒಂದು ಗಂಟೆ ಸಭೆ ನಡೆಸಿ ಹೋದ್ರೆ ಏನು ಆಗಲ್ಲ ನಮ್ಮ ಕ್ಷೇತ್ರಕ್ಕೆ ಹಣ ನೀಡಬೇಕೆಂದು ಪಟ್ಟು ಹೀಡಿದರು. ನಂತರ ಸಚಿವ ಚವ್ಹಾಣ ಹಣ ನೀಡಲು ಕ್ರಮವಹಿಸುವದಾಗಿ ಭರವಸೆ ನೀಡಿದರು. ಸಭೆಯಲ್ಲಿ ಕೆಲ ಕಾಲ ವಾಗ್ವಾದಕ್ಕೆ ಕಾರಣವಾಯಿತು.
Published by: Latha CG
First published: November 24, 2020, 9:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading