ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಅಳಿಯ ಅಂಬಿರಾವ್ ಪ್ರಾಬಲ್ಯವೇ ಜೋರು: ಸತೀಶ್ ಜಾರಕಿಹೊಳಿ

ಚುನಾವಣೆಯಲ್ಲಿ ಸಂದರ್ಭದಲ್ಲಿ ನಾವೆಲ್ಲ ಸಹೋದರರ ಒಂದೇ ಎಂದು ರಮೇಶ ಜಾರಕಿಹೊಳಿ ದಾರಿ ತಪ್ಪಿಸುವ ಯತ್ನವನ್ನು ಮಾಡುತ್ತಿದ್ದರು. ಆದರೆ ಅದಲ್ಲಾ ಈ ಬಾರಿ ನಡೆಯಲ್ಲ. ಸಹೋದರ ಲಖನ್ ಜಾರಕಿಹೊಳಿ ಅವರನ್ನು ನಾನೇನೂ ಹಾಳು ಮಾಡಿಲ್ಲ.

G Hareeshkumar | news18-kannada
Updated:September 23, 2019, 6:51 PM IST
ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಅಳಿಯ ಅಂಬಿರಾವ್ ಪ್ರಾಬಲ್ಯವೇ ಜೋರು: ಸತೀಶ್ ಜಾರಕಿಹೊಳಿ
ಅಂಬಿರಾವ್​​ ಪಾಟೀಲ್​​​ ಹಾಗೂ ಶಾಸಕ ಸತೀಶ್​​ ಜಾರಕಿಹೊಳಿ
  • Share this:
ಬೆಳಗಾವಿ(ಸೆ.23): ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ ಬಗ್ಗೆ ತಾನು ಹತಾಶೆಯಾಗೋ ಪ್ರಶ್ನೆಯೇ ಇಲ್ಲ. ಗೋಕಾಕ್ ಕ್ಷೇತ್ರದಲ್ಲಿ ಅಂಬಿರಾವ್ ಪ್ರಾಬಲ್ಯ ಜೋರಾಗಿದೆ. ಪೊಲೀಸರಿಂದ ದಬ್ಬಾಳಿಕೆ ಆದವರ ಪಟ್ಟಿ ದೊಡ್ಡದಿದೆ. ಈ ಬಗ್ಗೆ ಗೋಕಾಕ್ ಸಮಾವೇಶದಲ್ಲಿ ಬಹಿರಂಗವಾಗಿ ಹೇಳುತ್ತೇನೆಂದು ಎಂದು ರಮೇಶ್ ಜಾರಕಿಹೊಳಿ ವಿರುದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಗುಡುಗಿದ್ದಾರೆ.

ಅಂಬಿರಾವ್ ಪಾಟೀಲ್ ಗೋಕಾಕ್ ಕ್ಷೇತ್ರ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಅವರು ಯಾವ ಪ್ರೀತಿ, ಹೇಗೆ ಪ್ರೀತಿ ಗಳಿಸಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ರಮೇಶ ಜಾರಕಿಹೊಳಿ ಸ್ಪಷ್ಟನೆ ನೀಡಬೇಕು. ರಮೇಶ ಹೇಳಿದ ಮಾತನ್ನು ಅಳಿಯ ಅಂಬಿರಾವ್ ಪಾಟೀಲ್ ಕೇಳುವ ಸ್ಥಿತಿ ಇಲ್ಲ. ಅಂಬಿರಾವ್ ಹೇಳಿದ ಮಾತನ್ನು ರಮೇಶ ಕೇಳುವ ಪರಿಸ್ಥಿತಿ ಇದೆ ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ತಿಳಿಸಿದರು.

ಚುನಾವಣೆಯಲ್ಲಿ ಸಂದರ್ಭದಲ್ಲಿ ನಾವೆಲ್ಲ ಸಹೋದರರ ಒಂದೇ ಎಂದು ರಮೇಶ ಜಾರಕಿಹೊಳಿ ದಾರಿ ತಪ್ಪಿಸುವ ಯತ್ನವನ್ನು ಮಾಡುತ್ತಿದ್ದರು. ಆದರೆ ಅದಲ್ಲಾ ಈ ಬಾರಿ ನಡೆಯಲ್ಲ. ಸಹೋದರ ಲಖನ್ ಜಾರಕಿಹೊಳಿ ಅವರನ್ನು ನಾನೇನೂ ಹಾಳು ಮಾಡಿಲ್ಲ. ರಮೇಶ ವಿರೋಧಿಗಳು ನಮ್ಮ ಜತೆಗೆ ಬರಲಿದ್ದಾರೆ. ನಮ್ಮ ವಿರೋಧಿಗಳು ರಮೇಶ ಜಾರಕಿಹೊಳಿ ಜತೆಗೆ ಹೋಗಲಿದ್ದಾರೆ. ಜಾರಕಿಹೊಳಿ ಸಾಮ್ರಾಜ್ಯ ಕಟ್ಟಿದ್ದು ಯಾರು ಎಂಬ ಬಗ್ಗೆ ಜನರಿಗೆ ಗೊತ್ತಿದೆ ಎಂದು ತಮ್ಮ ಸಹೋದರನ ವಿರುದ್ದ  ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಲಕ್ಷ್ಮೀ ಹೆಬ್ಬಾಳ್ಕರ್​​​ಗೆ ಇಡಿ ನೋಟೀಸ್​​​​​ ನೀಡಿದ್ದರ ಹಿಂದೆ ದುರುದ್ದೇಶವಿಲ್ಲ; ಸತೀಶ್​​ ಜಾರಕಿಹೊಳಿ ಹೇಗೆ ಅಂದಿದ್ದೇಕೆ?

ಬಿಜೆಪಿಯಲ್ಲಿ ಆಂತರಿಕ ಕಲಹದಿಂದ ಪ್ರವಾಹ ಸ್ಥಿತಿ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿಲ್ಲ ನಾವು ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯುತ್ತೇವೆ. ಬಿಜೆಪಿ ಜನರ ಸಮಸ್ಯೆ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬಿಜೆಪಿ ರಾಜ್ಯದಲ್ಲಿ ಶ್ರಮದಿಂದ ಅಲ್ಲ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆ. ಬಹಳಷ್ಟು ಶಾಸಕರು ದೆಹಲಿ, ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮುಂದಿನ ದಿನಗಳಲ್ಲಿ ಜನ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸತೀಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.

First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading