ಉಪಚುನಾವಣೆಯಲ್ಲಿ ಕಾಂಗ್ರೆಸ್​ 10, ಜೆಡಿಎಸ್​ 2 ಸ್ಥಾನ ಗೆಲ್ಲಲಿದೆ; ಸತೀಶ್​ ಜಾರಕಿಹೊಳಿ

ಗೋಕಾಕ್ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ, ಬಹಳ ದಿನಗಳ ಹಿಂದೆ ಟಿಕೆಟ್ ಫೈನಲ್ ಆಗಿದೆ.  ಸದ್ಯ ಟಿಕೆಟ್ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಕ್ಷೇತ್ರದಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 

Latha CG | news18-kannada
Updated:November 12, 2019, 4:16 PM IST
ಉಪಚುನಾವಣೆಯಲ್ಲಿ ಕಾಂಗ್ರೆಸ್​ 10, ಜೆಡಿಎಸ್​ 2 ಸ್ಥಾನ ಗೆಲ್ಲಲಿದೆ; ಸತೀಶ್​ ಜಾರಕಿಹೊಳಿ
ಮಾಜಿ ಸಚಿವ ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ(ನ.12): ಪಕ್ಷಾಂತರಿಗಳನ್ನು ಮಹಾರಾಷ್ಟ್ರದಲ್ಲಿ ಸೋಲಿಸಿದ್ದಾರೆ.  ಕರ್ನಾಟಕದಲ್ಲೂ ಅದೇ ರೀತಿ ಆಗುತ್ತದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್​ 10 ಸ್ಥಾನ ಮತ್ತು ಜೆಡಿಎಸ್​ 2 ಸ್ಥಾನ ಗೆಲ್ಲಲಿದೆ ಎಂದು ಶಾಸಕ ಸತೀಸ್​ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಪಕ್ಷ 10 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಪಚುನಾವಣೆ ತೀರ್ಪಿನ ನಂತರ ಸರ್ಕಾರದ ಭವಿಷ್ಯ ನಿರ್ಧಾರವಾಗುತ್ತದೆ. ಮತ್ತೆ ಶಾಸಕರು ಆ ಕಡೆ, ಈ ಕಡೆ ಹೋಗುವ ಪ್ರಕ್ರಿಯೆ ಶುರುವಾಗಲಿದೆ. ಇದೆಲ್ಲದಕ್ಕೂ ಸುಪ್ರೀಂಕೋರ್ಟ್ ನಿರ್ಧಾರ ಮಹತ್ವದ್ದು. ಸುಪ್ರೀಂಕೋರ್ಟ್ ಷರತ್ತು ವಿಧಿಸಿದರೆ ಅನುಕೂಲ ಎಂದು ಹೇಳಿದರು.

ಪ್ರಧಾನಿ ಮೋದಿ ಹಿಟ್ಲರ್ ಧೋರಣೆ ಕೈಬಿಟ್ಟು, ಮನಮೋಹನ್​ ಸಿಂಗ್​ ಮಾರ್ಗದರ್ಶನ ಪಡೆಯಲಿ; ದಿನೇಶ್​ ಗುಂಡೂರಾವ್​ ಕಿಡಿ

ಗೋಕಾಕ್ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ, ಬಹಳ ದಿನಗಳ ಹಿಂದೆ ಟಿಕೆಟ್ ಫೈನಲ್ ಆಗಿದೆ.  ಸದ್ಯ ಟಿಕೆಟ್ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಕ್ಷೇತ್ರದಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೇರೆಯವರು ಈಗ ಟಿಕೆಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ನಾವು ಹೈಕಮಾಂಡ್​ಗೆ ಮನವರಿಕೆ ಮಾಡಿದ್ದೇವೆ. ಟಿಕೆಟ್ ಹಂಚಿಕೆ ವಿಚಾರ ಮುಗಿದು ಹೋದ ಅಧ್ಯಾಯ. ಹೈಕಮಾಂಡ್​ ಟಿಕೆಟ್ ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಬಿಜೆಪಿ ಮುಖಂಡ ಅಶೋಕ್​​ ಪೂಜಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಅಶೋಕ್ ಪೂಜಾರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ, ದಿನೇಶ್​ ಗುಂಡೂರಾವ್ ಹಾಗೂ ಡಿಕೆಶಿಯವರು ಭೇಟಿಯಾಗಿದ್ದಾರೆ. ಟಿಕೆಟ್ ವಿಚಾರ ಸಂಬಂಧ ಈಗ ಚರ್ಚೆಯ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಬೆಳಗಾವಿ ಕಾಂಗ್ರೆಸ್ ಪಕ್ಷದಲ್ಲಿ  ಮೊದಲಿನಿಂದಲೂ ಗೊಂದಲ ಇದೆ. ನಾನು ಸಚಿವನಾಗಿದ್ದಾಲೇ ಇದನ್ನು ಬ್ಯಾಲೆನ್ಸ್ ಮಾಡುತ್ತಿದೆ. ಟಿಕೆಟ್ ಸಿಗುವವರೆಗೆ ಅನೇಕ ಗೊಂದಲ ಇರುವುದು ಸಹಜ. ಟಿಕೆಟ್ ಘೋಷಣೆಯಾದ ಬಳಿಕ ಎಲ್ಲರೂ ಸೇರಿ  ಕೆಲಸ ಮಾಡುತ್ತೇವೆ. ಅಶೋಕ ಪೂಜಾರಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ನಮ್ಮ ಜತೆಗೆ ಯಾವುದೇ ಚುನಾವಣೆ ಬಗ್ಗೆ ಚರ್ಚೆ ಮಾಡಿಲ್ಲ ಎಂದರು.

ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ವಿರುದ್ಧ ಮತ್ತೊಂದು ದೂರು; ಅನಗತ್ಯ ವೆಚ್ಚದ ಆರೋಪ
First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading