ರಮೇಶ್​ ರಾಜ್ಯಕ್ಕೆ ಹೀರೋ ಇರಬಹುದು; ಆದರೆ ನಮ್ಮ ಮುಂದೆ ಬಿಗ್​ ಝೀರೋ; ಸತೀಶ್​ ಜಾರಕಿಹೊಳಿ ವ್ಯಂಗ್ಯ

Latha CG | news18-kannada
Updated:October 29, 2019, 9:36 PM IST
ರಮೇಶ್​ ರಾಜ್ಯಕ್ಕೆ ಹೀರೋ ಇರಬಹುದು; ಆದರೆ ನಮ್ಮ ಮುಂದೆ ಬಿಗ್​ ಝೀರೋ; ಸತೀಶ್​ ಜಾರಕಿಹೊಳಿ ವ್ಯಂಗ್ಯ
ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ.
  • Share this:
ಬೆಳಗಾವಿ(ಅ.29): ರಮೇಶ್​ ಜಾರಕಿಹೊಳಿ ರಾಜ್ಯಕ್ಕೆ, ಮಾಧ್ಯಮಗಳಿಗೆ ಹೀರೋ ಇರಬಹುದು. ಆದರೆ ನಮ್ಮ ಮುಂದೆ ಆತ ಬಿಗ್​ ಝೀರೋ ಎಂದು ಶಾಸಕ ಸತೀಶ್​ ಜಾರಕಿಹೊಳಿ ಲೇವಡಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಸತೀಶ್​ ಬಂಡವಾಳ ಬಯಲು ಮಾಡುತ್ತೇನೆ ಎಂದು ಹೇಳಿದ್ದ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿಗೆ ತಿರುಗೇಟು ನೀಡಿದರು. "ನನ್ನ ಬಂಡವಾಳ ಬಯಲು ಮಾಡುವುದಿರಲಿ, ಪ್ರವಾಹ ಪರಿಹಾರ ವಿಚಾರದಲ್ಲಿ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. 1200 ಟ್ರಾಕ್ಟರ್​​​ಗಳ ಬಾಡಿಗೆ ಬಗ್ಗೆ ಹೇಳಲಿ. ಶಾಸಕರಾದವರು ಮೊದಲು ಅದಕ್ಕೆ ಉತ್ತರ ಕೊಡಲಿ. ನಮ್ಮ ಬಂಡವಾಳ ಏನೂ ಇಲ್ಲ, ಇದ್ದರೆ ಅದಕ್ಕೆ ನಾನು ಉತ್ತರ ಕೊಡುತ್ತೇನೆ," ಎಂದು ತಿರುಗೇಟು ನೀಡಿದರು.

ಬಾಗ್ದಾದಿ ಸ್ಥಾನಕ್ಕೆ ನೇಮಕವಾದ ವಾರಸುದಾರನೂ ಅಮೆರಿಕ ಭದ್ರತಾ ಪಡೆಗಳಿಂದ ಹತ್ಯೆಯಾಗಿದ್ದಾನೆ ಎಂದ ಟ್ರಂಪ್

ಸತೀಶ್ ಷಂ... ಎಂಬ ರಮೇಶ್ ಹೇಳಿಕೆಗೆ ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.  "ರಮೇಶ್ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಅವನು ಬದ್ಧತೆ ಇಲ್ಲದ ರಾಜಕಾರಣಿ. ರಮೇಶ್​ ಈ ರೀತಿ ಮಾತನಾಡುವುದು ಹೊಸದೇನಲ್ಲ. ಆತ ರಾಜ್ಯಕ್ಕೆ ಮತ್ತು ಮಾಧ್ಯಮಗಳಿಗೆ ಹೀರೋ ಇರಬಹುದು. ಆದರೆ ನಮ್ಮ ಮುಂದೆ ರಮೇಶ್ ಬಿಗ್ ಝೀರೋ," ಎಂದು ವ್ಯಂಗ್ಯ ಮಾಡಿದರು.

"ಗೋಕಾಕ್ ಉಪಚುನಾವಣೆ ಹೋರಾಟ ಸಹೋದರರ ನಡುವೆ ಅಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ. ಇದನ್ನು ವೈಯಕ್ತಿಕ ಚುನಾವಣೆ ಎನ್ನಲು ಸಾಧ್ಯವಿಲ್ಲ.  ಬಾಲಚಂದ್ರ ಮತ್ತು ಸಿಎಂ ಬಿಎಸ್​ವೈ ಸೇರಿದಂತೆ ಇಡೀ ಮಂತ್ರಿ ಮಂಡಲ ಗೋಕಾಕ್ ನಲ್ಲಿ ಚುನಾವಣಾ ಪ್ರಚಾರಕ್ಕೆ ಬರುತ್ತದೆ. ನಮ್ಮ ಕಡೆಯಿಂದಲೂ ಕಾಂಗ್ರೆಸ್​ ನಾಯಕರು ಪ್ರಚಾರಕ್ಕೆ ಬರುತ್ತಾರೆ. ಅದರಲ್ಲಿ ಸಿದ್ದರಾಮಯ್ಯ ಸ್ಟಾರ್ ಪ್ರಚಾರಕ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ  ಹಿನ್ನಡೆಯಾಗಿತ್ತು. ಆದರೆ ಈಗ ಒಂದು ಹಂತದಲ್ಲಿ ಕ್ಷೇತ್ರದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ," ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ಬೀಳಿಸುವ ಅಭ್ಯಾಸ ಇರುವುದು ದೇವೇಗೌಡರ ಕುಟುಂಬಕ್ಕೆ; ಸಿದ್ದರಾಮಯ್ಯ ವ್ಯಂಗ್ಯ

First published: October 29, 2019, 9:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading