IMA Jewels Case; ಮೂರು ದಿನದ ಬಳಿಕ ಶಾಸಕ ರೋಷನ್ ಬೇಗ್ ಪ್ರತ್ಯಕ್ಷ; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Roshan Baig : ಸಚಿವ ಜಮೀರ್ ಅಹಮ್ಮದ್ ನನ್ನ ತಮ್ಮ ಇದ್ದಂಗೆ.‌ ಅವರ ಮೇಲೆ ಯಾವುದೇ ಅನುಮಾನ ಇಲ್ಲ. ದಯವಿಟ್ಟು ಈ ಪ್ರಕರಣವನ್ನು ಸಿಬಿಐಗೆ ಕೊಡಿ. ನಾನು ಸಿಎಂ ಭೇಟಿಗೆ ಹೋದಾಗ, ಸಿಎಂ ಜೆಪಿ ನಗರದ ಮನೆ ಬಿಟ್ಟಿದ್ದಾರೆ, ಅಧಿಕಾರಿಗಳ ಜೊತೆ ಸಭೆ ಇದೆ ಅಂದ್ರು. ನಾನು ಈಗ ಸಿಎಂ ಭೇಟಿ ಮಾಡಿ ಸಿಬಿಐಗೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

HR Ramesh | news18
Updated:June 12, 2019, 5:08 PM IST
IMA Jewels Case; ಮೂರು ದಿನದ ಬಳಿಕ ಶಾಸಕ ರೋಷನ್ ಬೇಗ್ ಪ್ರತ್ಯಕ್ಷ; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ
ಶಾಸಕ ರೋಷನ್​ ಬೇಗ್​
HR Ramesh | news18
Updated: June 12, 2019, 5:08 PM IST
ಬೆಂಗಳೂರು: ಯಾರೋ ವಂಚಕ ಹೇಳಿದ್ದಾನೆ. ಅದರ ಬಗ್ಗೆ ಸಮಗ್ರ ತನಿಖೆ ಮಾಡಿ ಎಂದು ನಾನು ಮೊನ್ನೆಯೇ ಹೇಳಿದ್ದೇನೆ. ಈಗಲೂ ಸಿಎಂಗೆ ಅದನ್ನೇ ಹೇಳ್ತಿದ್ದೇನೆ. ಪ್ರಕರಣವನ್ನು ಸಿಬಿಐ ತನಿಖೆ ಮಾಡಿಸಿ ಎಂದು ಶಾಸಕ ರೋಷನ್​ ಬೇಗ್​ ಹೇಳಿದರು.

ಐಎಂಎ ಜ್ಯುವೆಲರಿ ವಂಚನೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಬಳಿಕ ನಾಪತ್ತೆಯಾಗಿದ್ದ ಶಾಸಕ ರೋಷನ್ ಇಂದು ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಇಂತಹ ಸಾಕಷ್ಟು ಕಂಪನಿಗಳು ನಮ್ಮ ಜನಕ್ಕೆ ಮೋಸ ಮಾಡಿವೆ. ಕೆಲವರು ಬಂಧನಕ್ಕೆ ಒಳಗಾದರೂ ಜಾಮೀನು ಪಡೆದು ಹೊರಗಿದ್ದಾರೆ. ಇನ್ನೂ ಕೆಲವರು ಓಡಿ ಹೋಗಿದ್ದಾರೆ.  ಯಾರು ದುಡ್ಡು ಕಳೆದುಕೊಂಡಿದ್ದಾರೆ ಅವರಿಗೆ ಹಣ ಕೊಡಿಸಿ. ಮನ್ಸೂರ್ ಖಾನ್ ಜೊತೆ ಯಾರೆಲ್ಲಾ ಸಂಪರ್ಕದಲ್ಲಿದ್ದರು, ವ್ಯಾಟ್ಸಾಪ್ ನಲ್ಲಿ ಅವರ ಜೊತೆ ಯಾರು ಸಂಪರ್ಕದಲ್ಲಿದ್ದರು, ಅವರ ಜೊತೆ ಕೊನೆಯದಾಗಿ ಯಾರು ಸಂಪರ್ಕದಲ್ಲಿದ್ದರು ಅನ್ನೋದರ ಬಗ್ಗೆ ತನಿಖೆ ಮಾಡಿದರೆ ಸತ್ಯ ಗೊತ್ತಾಗುತ್ತದೆ ಎಂದು ಹೇಳಿದರು.

ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್​ಐಟಿಗೆ ವಹಿಸಿದೆ. ನಾನು ಎಸ್​ಐಟಿ ತನಿಖೆಗೆ ಸಹಕರಿಸುತ್ತೇನೆ. ಯಾವನೋ ಫ್ರಾಡ್ 400 ಕೋಟಿ ಕೊಟ್ಟಿದ್ದಾನೆ ಎಂದು ಹೇಳಿದಾಕ್ಷಣ ಅದು ಸತ್ಯ ಎಂದು ನಂಬುವುದು ಎಷ್ಟು ಸರಿ? ಪ್ರಕರಣವನ್ನು ಸಿಬಿಐಗೆ ಕೊಟ್ಟರೆ ಸತ್ಯ ಹೊರಬರುತ್ತದೆ. ಮನ್ಸೂರ್ ಖಾತೆಯಿಂದ ಸಾವಿರ ಕೋಟಿ ವರ್ಗಾವಣೆಯಾಗಿದೆ. ಮನ್ಸೂರ್ ಅಕೌಂಟ್ ಸೀಜ್ ಮಾಡಿ ಎಂದು ರೋಷನ್ ಬೇಗ್ ಆಗ್ರಹಿಸಿದರು.

ವಿಕೆಒ ಶಾಲೆ ಅಭಿವೃದ್ಧಿ ವಿಚಾರದಲ್ಲಿ ನಾನು ಶ್ರಮವಹಿಸಿದ್ದೇನೆ.‌ ಅದಕ್ಕೆ ಸಹಾಯ ಮಾಡಲು ಅವರು ಬಂದಿದ್ದರು ಅಷ್ಟೇ. ನಾನು ಯಾವುದೇ ಸಂಸ್ಥೆಯಿಂದ 4 ಕೋಟಿ, 5 ಕೋಟಿ ಹಣವನ್ನು ಪಡೆದಿಲ್ಲ. ನನ್ನ ಬಳಿ ಚಾಟರ್ ಫ್ಲೈಟ್ ಇದೆ, ಅದಿದೆ, ಇದಿದೆ ಅಂತಾ ಸುದ್ದಿ ಬರುತ್ತಿದೆ. ನನ್ನ ಮಗ ಚಾಟರ್ ಫ್ಲೈಟ್​ ನೋಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: IMA Jewels Fraud: 8 ತಿಂಗಳ ಹಿಂದೆಯೇ ಅಕ್ರಮದ ಬಗ್ಗೆ ಹೂಡಿಕೆದಾರರಿಗೆ ಸಾರ್ವಜನಿಕ ಎಚ್ಚರಿಕೆ ನೀಡಿತ್ತು ರಾಜ್ಯ ಸರ್ಕಾರ

ನನಗೂ ಐಎಂಎಗೂ ಯಾವುದೇ ಸಂಬಂಧ ಇಲ್ಲ. ನಾನು ಹೋರಾಟಗಾರ, ಟಿಪಿಕಲ್ ರಾಜಕಾರಣಿ ಅಲ್ಲ. ನಾನು ಸಾಮಾಜಿಕ ಹೋರಾಟಗಾರ. ನಾನು, ನನ್ನ ಕುಟುಂಬ ಸದಸ್ಯರು, ಸ್ನೇಹಿತರು ಯಾರೂ ಈ ವಿಚಾರದಲ್ಲಿ ಭಾಗಿಯಾಗಿಲ್ಲ‌. ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದರು.

ನಾನು ಯಾವಾಗ ಕೆಲ ಕಾಂಗ್ರೆಸ್ ಮುಖಂಡರ ವಿರುದ್ಧ ಹೇಳಿಕೆ ನೀಡಲು ಶುರು ಮಾಡಿದೆ. ಆ ಸಮಯದಿಂದಲೇ ನನ್ನ ಮೇಲೆ ಇಂತಹ ಬೆಳವಣಿಗೆ ನಡೆಯುತ್ತಿದೆ. ನಿನ್ನೆ ಹೋಗಿ ಕೆಲ ಮುಸ್ಲಿಂ ಮುಖಂಡರು ಗೃಹ ಸಚಿವರನ್ನು ಭೇಟಿ ಮಾಡಿ ಎಸ್​ಐಟಿಗೆ ಕೊಡಿ ಅಂತಾ ಹೇಳಿದ್ರು. ಹಿಂದೆ ಆ್ಯಂಬಿಡೆಂಟ್ ಸೇರಿ ಕೆಲ ಹಗರಣಗಳು ನಡೆದಾಗ ಯಾಕೆ ಇವರು ಸುಮ್ಮನಿದ್ದರು ಎಂದು ಪ್ರಶ್ನಿಸಿದರು.

ಸಚಿವ ಜಮೀರ್ ಅಹಮ್ಮದ್ ನನ್ನ ಸಹೋದರ. ನಾನು ಅವರ ಬಗ್ಗೆ ಹೇಳಿಲ್ಲ. ಜಮೀರ್ ನನ್ನ ತಮ್ಮ ಇದ್ದಂಗೆ.‌ ಅವರ ಮೇಲೆ ಯಾವುದೇ ಅನುಮಾನ ಇಲ್ಲ. ದಯವಿಟ್ಟು ಈ ಪ್ರಕರಣವನ್ನು ಸಿಬಿಐಗೆ ಕೊಡಿ. ನಾನು ಸಿಎಂ ಭೇಟಿಗೆ ಹೋದಾಗ, ಸಿಎಂ ಜೆಪಿ ನಗರದ ಮನೆ ಬಿಟ್ಟಿದ್ದಾರೆ, ಅಧಿಕಾರಿಗಳ ಜೊತೆ ಸಭೆ ಇದೆ ಅಂದ್ರು. ನಾನು ಈಗ ಸಿಎಂ ಭೇಟಿ ಮಾಡಿ ಸಿಬಿಐಗೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

 

First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...