ಐಷಾರಾಮಿ ರೆಸಾರ್ಟ್ ಬಿಟ್ಟು ಕೋಲಾರದಲ್ಲಿ ಆನೆ ಓಡಿಸಿದ ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್!

ಈಗಲ್​ಟನ್​ ರೆಸಾರ್ಟ್​ನಿಂದ ಅವರು ಮೊದಲು ಕೋಲಾರಕ್ಕೆ ತೆರಳಿದರು. ಅಲ್ಲಿ, ಅರಣ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಅವರ ಜೊತೆಗೆ ಆನೆಯನ್ನು ದೂರ ಅಟ್ಟುವ ಕಾರ್ಯಕ್ಕೆ ಮುಂದಾದರು.

Rajesh Duggumane | news18
Updated:January 20, 2019, 8:36 AM IST
ಐಷಾರಾಮಿ ರೆಸಾರ್ಟ್ ಬಿಟ್ಟು ಕೋಲಾರದಲ್ಲಿ ಆನೆ ಓಡಿಸಿದ ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್!
ಸಾಂದರ್ಭಿಕ ಚಿತ್ರ
  • News18
  • Last Updated: January 20, 2019, 8:36 AM IST
  • Share this:
ಕೃಷ್ಣ ಜಿವಿ

ಬೆಂಗಳೂರು (ಜ.20): ಕಾಂಗ್ರೆಸ್​ ಶಾಸಕರು ಐಷಾರಾಮಿ ರೆಸಾರ್ಟ್​​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಪಕ್ಷದ ಶಾಸಕರ ಜೊತೆ ಚರ್ಚೆ ನಡೆಸಲು ರೆಸಾರ್ಟ್​ ಸೇರಿದ್ದೇವೆ ಎನ್ನುವ ಸ್ಪಷ್ಟನೆ ಕಾಂಗ್ರೆಸ್​ ನಾಯಕರಿಂದ ಸಿಕ್ಕಿದೆ. ರೆಸಾರ್ಟ್​ ಸೇರಿರುವ ಶಾಸಕರು ತಮ್ಮ ಕ್ಷೇತ್ರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಪ್ರತಿಪಕ್ಷದವರು ಆರೋಪಿಸುತ್ತಿದ್ದಾರೆ. ಅಚ್ಚರಿ ಎಂದರೆ, ಕಾಂಗ್ರೆಸ್​ ಶಾಸಕಿ ರೂಪಾ ಶಶಿಧರ್​ ರೆಸಾರ್ಟ್​​ನಲ್ಲಿರುವ ಹೊರತಾಗಿಯೂ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ್ದಾರೆ. ಅವರು ಕೋಲಾರಕ್ಕೆ ತೆರಳಿ ಆನೆ ಓಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು!

ಕೋಲಾರದಲ್ಲಿ ಆನೆಗಳು ಪ್ರತ್ಯಕ್ಷವಾಗಿದ್ದವು. ಹೊಲ ಗದ್ದೆಗಳಿಗೆ ನುಗ್ಗಿ ಅವು ದಾಂಧಲೆ ನಡೆಸುತ್ತಿದ್ದವು. ಇದರಿಂದ ಜನರು ತೀವ್ರ ಸಮಸ್ಯೆ ಎದುರಿಸಿದ್ದರು. ಅಲ್ಲದೆ, ಆನೆ ಓಡಿಸುವಂತೆ ಅರಣ್ಯಾಧಿಕಾರಿಗಳ ಬಳಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರು. ಆದರೆ, ಅವರಿಂದ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಜನರು ಸ್ಥಳೀಯ ಮುಖಂಡರಿಗೆ ದೂರಿದ್ದಾರೆ.

ಬೇರೆ ದಾರಿ ಕಾಣದೆ ಸ್ಥಳೀಯ ನಾಯಕರು ಶಾಸಕಿ ರೂಪಾ ಶಶಿಧರ್​ಗೆ ವಿಷಯ ತಿಳಿಸಿದ್ದಾರೆ. ರೆಸಾರ್ಟ್​​ನಲ್ಲಿದ್ದ ಹೊರತಾಗಿಯೂ ಅವರು ಹಿರಿಯ ನಾಯಕರಿಂದ ಅನುಮತಿ  ಪಡೆದು, ಕೋಲಾರಕ್ಕೆ ತೆರಳಿದ್ದಾರೆ. ಅಷ್ಟೇ ಅಲ್ಲ ಆನೆ ಓಡಿಸುವ ಕೆಲಸದ ಮೇಲ್ವಿಚಾರಣೆ ವಹಿಸಿಕೊಂಡಿದ್ದರು.

ಇದನ್ನೂ ಓದಿ: ಬಂದ ದಾರಿಗೆ ಸುಂಕವಿಲ್ಲ; ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರುತ್ತಿದ್ದಂತೆ ಹರಿಯಾಣದಿಂದ ಮನೆಯತ್ತ ಹೊರಟ ರಾಜ್ಯ ಬಿಜೆಪಿ ಶಾಸಕರು!

ಫೈಲ್​ ಫೋಟೋ: ರೂಪಾ ಶಶಿಧರ್​


ಈಗಲ್​ಟನ್​ ರೆಸಾರ್ಟ್​ನಿಂದ ಅವರು ಮೊದಲು ತೆರಳಿದ್ದು ಕೋಲಾರಕ್ಕೆ. ಅಲ್ಲಿ, ಅರಣ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಅವರ ಜೊತೆಗೆ ಆನೆಯನ್ನು ದೂರ ಅಟ್ಟುವ ಕಾರ್ಯಕ್ಕೆ ಮುಂದಾದರು. ಈ ಕಾರ್ಯಾಚರಣೆ ಸಂಪೂರ್ಣ ಮೇಲ್ವಿಚಾರಣೆ ಇವರೇ ವಹಿಸಿಕೊಂಡಿದ್ದರು. ಕೆಲಸ ಪೂರ್ಣಗೊಂಡ ನಂತರದಲ್ಲಿ ಅವರು ರೆಸಾರ್ಟ್​​ಗೆ ವಾಪಾಸಾಗಿದ್ದಾರೆ. ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ನಡೆದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರು ಪಾಲ್ಗೊಳ್ಳುತ್ತಾರೆ ಯಾರು ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಆಧರಿಸಿ ಮುಂದಿನ ನಡೆಯ ಬಗ್ಗೆ ಚಿಂತಿಸಲು ಆಪರೇಷನ್​ ಕಮಲಕ್ಕೆ ಮುಂದಾಗಿದ್ದ ಬಿಜೆಪಿ ನಿರ್ಧರಿಸಿತ್ತು. ಅತೃಪ್ತರ ಜೊತೆ ಸಂಪರ್ಕದಲ್ಲಿದ್ದ ಕೆಲ ಕಾಂಗ್ರೆಸ್​ ಶಾಸಕರು, ಸಭೆ ಮುಗಿಸಿ ವಾಪಾಸಾಗುವುದಾಗಿ ತಿಳಿಸಿದ್ದರು. ಆದರೆ, ಅವರನ್ನು ನೇರವಾಗಿ ಈಗಲ್​ಟನ್​ ರೆಸಾರ್ಟ್​ಗೆ ಕರೆದೊಯ್ದಿರುವುದು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದನ್ನೂ ಓದಿ: ನಾನು ಕಾಂಗ್ರೆಸ್​​ ನಿಷ್ಠಾವಂತ ಕಾರ್ಯಕರ್ತ: ಪಕ್ಷದ ಒಳಿತಿಗಾಗಿ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ; ಡಿ.ಕೆ ಶಿವಕುಮಾರ್​​

First published: January 20, 2019, 8:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading