• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Ramesh Kumar: ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ

Ramesh Kumar: ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ

ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಅಬ್ಬರದ ಭಾಷಣ

ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಅಬ್ಬರದ ಭಾಷಣ

ಅಯೋಧ್ಯೆ ರಾಮನ ಹೆಸರಿನಲ್ಲಿ, ದೇಶದಲ್ಲಿ ಧರ್ಮ ಧರ್ಮಗಳ ಮಧ್ಯೆ ಕಲಹ ಸೃಷ್ಟಿ ಮಾಡುವ ಯತ್ನ ಮಾಡುತ್ತಿದ್ದಾರೆ. ನಿಮ್ಮದು ಆರ್​​ಎಸ್​ಎಸ್​​ ತತ್ವ, ದೇಶ ನೆಮ್ಮದಿಯಿಂದ ಇರುವುದು ಇಷ್ಟವಿಲ್ಲ ಎಂದು ರಮೇಶ್​ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

 • News18 Kannada
 • 3-MIN READ
 • Last Updated :
 • Kolar, India
 • Share this:

ಕೋಲಾರ: ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸ್ಪೀಕರ್​ ರಮೇಶ್​ ಕುಮಾರ್ (KR Ramesh Kumar)​ ವಾಗ್ದಾಳಿ ನಡೆಸಿದ್ದಾರೆ. ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ (Srinivasapura) ಪಟ್ಟಣದ ಮಾರುತಿ ಸಭಾ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ (Congress) ಸೇರ್ಪಡೆ ಸಭೆಯಲ್ಲಿ ಮಾತನಾಡಿರುವ ರಮೇಶ್​ ಕುಮಾರ್ ಅವರು, ರಾಹುಲ್​ ಗಾಂಧಿ (Rahul Gandhi) ಅವರನ್ನು ಸಂಸತ್​​ನಿಂದ ಅಮಾನತು ಮಾಡಿರುವ ವಿಚಾರದ ಕುರಿತಂತೆ ಬಿಜೆಪಿ ಸರ್ಕಾರದ (BJP Government) ವಿರುದ್ಧ ಕೆಂಡಕಾರಿದರು. ಅಲ್ಲದೆ ಇದೇ ವೇಳೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಜನರ ಭಾವನೆಗಳನ್ನು ಕೆರಳಿಸಿ ಕಲಹ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇದೇ ವೇಳೆ ರಾಮ ರಾಮ ಅಂತ ಧರ್ಮದ (Religion) ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಯಾವ ರಾಮ ಹೆಸರು ಹೇಳಿ ಮತ ಕೇಳುತ್ತಿದ್ದೀರಾ? ಕಳ್ಳ ರಾಮನಾ, ತೋಟ ರಾಮನಾ, ಬೆಂಕಿ ರಾಮನಾ, ಅಯೋಧ್ಯೆ ರಾಮನ ಎಂದು ಕಿಡಿಕಾರಿದ್ದಾರೆ.


ರಾಜ್ಯ ಸರ್ಕಾರದ ವಿರುದ್ಧ ರಮೇಶ್​ ಕುಮಾರ್ ವಾಗ್ದಾಳಿ


ಕಾಂಗ್ರೆಸ್​ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ರಮೇಶ್​ ಕುಮಾರ್​ ಅವರು, ಈ ಬಾರಿಯ ಚುನಾವಣೆಯಲ್ಲಿ ಯಾರು ಬಂದರೂ ತಗ್ಗೋದೆ ಇಲ್ಲ ಎಂದು ಸಿನಿಮಾ ಶೈಲಿಯಲ್ಲಿ ಎದುರಾಳಿಗಳಿಗೆ ವಾರ್ನ್​​ ಮಾಡಿದ್ದಾರೆ. ನಮ್ಮ ನಾಯಕ ರಾಹುಲ್​ ಗಾಂಧಿ ಅವರನ್ನೇ ಅನರ್ಹ ಮಾಡಿದ ಮೇಲೆ ನನಗೆ ಈ ಎಂಎಲ್​​ಎ ಪದವಿ ಯಾಕೆ ಬೇಕು?
ಇದನ್ನೂ ಓದಿ: Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ


ನನ್ನನ್ನು ಎಂಎಲ್​​​ಎ ಮಾಡಿ ಅಂತ ಇಂದಿರಾ ಗಾಂಧಿ ಅವರು ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಆದರೆ ಈಗ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ದೇಶಸೇವೆ ಮಾಡಲು ಮುಂದಾದ ರಾಹುಲ್ ಗಾಂಧಿ, ಸಂಸದ ಸ್ಥಾನ ಅನರ್ಹ ಮಾಡಿದ ನಿಮಗೆ ನಾಚಿಕೆ ಆಗುವುದಿಲ್ಲವೇ ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರ ತೊಲಗಿಸುವವರೆಗೂ ನಂಗೆ ವಿಶ್ರಾಂತಿ ಇಲ್ಲ ಎಂದು ಹೇಳಿದರು.


ನಿಮ್ಮದು RSS ತತ್ವ, ದೇಶ ನೆಮ್ಮದಿಯಿಂದ ಇರುವುದು ಇಷ್ಟವಿಲ್ಲ


ರಾಮ ರಾಮ ಅಂತ ಧರ್ಮದ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಯಾವ ರಾಮ, ಯಾವನಯ್ಯ ಅವನು. ಕಳ್ಳ ರಾಮನಾ, ತೋಟ ರಾಮನಾ, ಬೆಂಕಿ ರಾಮನಾ, ಅಯೋಧ್ಯೆ ರಾಮನಾ? ಅಯೋಧ್ಯೆ ರಾಮನ ಹೆಸರಿನಲ್ಲಿ, ದೇಶದಲ್ಲಿ ಧರ್ಮ ಧರ್ಮಗಳ ಮಧ್ಯೆ ಕಲಹ ಸೃಷ್ಟಿ ಮಾಡುವ ಯತ್ನ ಮಾಡುತ್ತಿದ್ದಾರೆ. ನಿಮ್ಮದು ಆರ್​​ಎಸ್​ಎಸ್​​ ತತ್ವ, ದೇಶ ನೆಮ್ಮದಿಯಿಂದ ಇರುವುದು ಇಷ್ಟವಿಲ್ಲ. ನೀವು ಒಬ್ಬ ನಾಯಕ, ನಿಮ್ಮದೊಂದು ರಾಜಕೀಯ ಪಕ್ಷ, ಇದೊಂದು ಪ್ರಜಾಪ್ರಭುತ್ವನಾ? ಇವರಿಗೆ ದೇಶ ಮುನ್ನೆಡೆಸುವುದು ಹೇಗಂತ ಗೊತ್ತಿಲ್ಲ ಎಂದು ಕಿಡಿಕಾರಿದರು.


ಸಚಿವ ಸುಧಾಕರ್​​ಗೆ ರಮೇಶ್​ ಕುಮಾರ್​ ಪಂಥಾಹ್ವಾನ


ಇದೇ ವೇಳೆ ಆರೋಗ್ಯ ಸಚಿವ ಸುಧಾಕರ್​ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವ ಸುಧಾಕರ್ ಅವರು, ಕೊರೊನಾ ಸಮಯದಲ್ಲಿ ಚಾಮರಾಜನಗರದ 36 ಕುಟುಂಬಗಳು ನಾಶವಾಗಿತ್ತು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ನೀವು ಎಲ್ಲಿ ಇದ್ರಿ?


ಇದನ್ನೂ ಓದಿ: PM Modi: ಕಾಂಗ್ರೆಸ್​​ ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್​​; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಪ್ರಧಾನಿ ಮೋದಿ ವಾಗ್ದಾಳಿ


ಇವನ್ಯಾರೋ ಹೆಲ್ತ್​ ಮಿನಿಸ್ಟರ್​ ಚಿಕ್ಕಬಳ್ಳಾಪುರದ ಸುಧಾಕರ್​ ಅಂತೇ, ನನ್ನನ್ನು ಸೋಲಿಸಲು 100 ಬಾರಿ ಕ್ಷೇತ್ರಕ್ಕೆ ಬರುತ್ತೇನೆ ಅಂತ ಹೇಳಿದ್ದ. ಬಾ ಈಗ ಬಾ ಒಂದು ಸಾರಿ ಬಾ ನೋಡೋಣಾ ಎಂದು ಪಂಥಾಹ್ವಾನ ನೀಡಿದ್ದಾರೆ. ಅಂದಹಾಗೆ, ರಮೇಶ್ ಕುಮಾರ್ ಸೋಲಿಸಲು ಶ್ರೀನಿವಾಸಪುರದಲ್ಲಿ ಪ್ರಚಾರಕ್ಕೆ ಬರುತ್ತೇನೆ ಎಂದು ಸಚಿವ ಸುಧಾಕರ್ ನೀಡಿದ್ದ ಹೇಳಿಕೆಗೆ ರಮೇಶ್​ ಕುಮಾರ್​ ಸದ್ಯ ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ. ಭಾಷಣದ ಉದ್ದಕ್ಕೂ ರಮೇಶ್​ ಕುಮಾರ್​ ತೆಲುಗು ಭಾಷೆಯಲ್ಲೇ ಮಾಡಿದ್ದಾರೆ.

First published: