PSI Recruitment Scam: ಸರ್ಕಾರ ಯತ್ನಾಳ್ ಅವರ ಸಲಹೆ ಸ್ವೀಕರಿಸಲಿ, ಬೆದರಿಕೆ ಕರೆಗಳು ಬರುತ್ತಿವೆ: ಪ್ರಿಯಾಂಕ್ ಖರ್ಗೆ

ಆರೋಪಿ ದಿವ್ಯಾ ಅವರ ಮನೆಗೆ ಕೆಲವು ದಿನಗಳ ಹಿಂದೆ ಗೃಹ ಸಚಿವರು ಹೋಗಿ ಸನ್ಮಾನ ಮಾಡಿಸಿಕೊಂಡು ಡ್ರೈ ಫ್ರೂಟ್ಸ್ ತಿಂದು ಬಂದಿದ್ದಾರೆ.  ಅನೇಕ ಬಿಜೆಪಿ ನಾಯಕರ ಜೊತೆ ಅವರು ಫೋಟೋ ತೆಗಸಿಕೊಂಡಿದ್ದಾರೆ. ಆದರೆ ಅವರು ನಮ್ಮ ಕಾರ್ಯಕರ್ತೆ ಅಲ್ಲ ಅಂತಾರೆ ಎಂದರು.

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ

  • Share this:
ಪಿಎಸ್‍ಐ ನೇಮಕಾತಿ ಅಕ್ರಮಕ್ಕೆ (PSI Recruitment Scam) ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Congress MLA Priyank Kharge) ಎರಡು ಬಾರಿ ಸುದ್ದಿಗೊಷ್ಠಿ ನಡೆಸಿದ್ದರು. ಈ ವೇಳೆ ಆಡಿಯೋ ಕ್ಲಿಪ್ (Audio Clip) ಸಹ ಬಿಡುಗಡೆಗೊಳಿಸಿದ್ದರು. ಈ ಸಂಬಂಧ ಸಿಐಡಿ ಅಧಿಕಾರಿಗಳು ತಮ್ಮಲ್ಲಿರುವ ಮಾಹಿತಿ ನೀಡುವಂತೆ ಪ್ರಿಯಾಂಕ್ ಖರ್ಗೆ ಅವರಿಗೆ ಭಾನುವಾರ ಸಂಜೆ ನೋಟಿಸ್ ನೀಡಲಾಗಿತ್ತು. ಈ ಸಂಬಂಧ ಇಂದು ಕೆಪಿಸಿಸಿ (KPCC) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು. ಆರಂಭದಲ್ಲಿಯೇ ಸಿಐಡಿ ಅಧಿಕಾರಿಗಳು ನಿನ್ನೆ ಸಂಜೆ ಮನೆಗೆ ಬಂದು ನೋಟಿಸ್ ನೀಡಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ಹಾಜರಾಗಲು ಹೇಳಿದ್ದರು ಎಂದು ನೋಟಿಸ್ ನಲ್ಲಿರುವ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಓದಿದರು. 

ಈ ನೋಟೀಸ್ ಸರ್ಕಾರದ ಕಾರ್ಯವೈಖರಿ ತೋರಿಸುತ್ತಿದೆ. ಈ ಸರ್ಕಾರದ ವೈಪಲ್ಯ ತೋರಿಸುತ್ತಿದೆ. ನನ್ನ ಸುದ್ದಿಗೋಷ್ಠಿಯನ್ನು ಕಣ್ಣು ತೆರೆದು ಕಿವಿಗೊಟ್ಟು ಕೇಳಿ ಎಂದು ಸರ್ಕಾರಕ್ಕೆ ಕೇಳ್ತಿದ್ದೇನೆ. ನಾನು ಎಲ್ಲೂ ಕೂಡ ತನಿಖಾ ವರದಿಗಾರಿಕೆ ಮಾಡಿದ್ದೇನೆಂದು ಹೇಳಿಲ್ಲ. ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಇದನ್ನ ನೀವೇ ಟ್ವೀಟ್ ಮಾಡಿದ್ದೀರಿ. ಈ ಮಾಹಿತಿ ನಿಮ್ಮ ಬಳಿ ಇಲ್ವೇ ಹೋಂ ಮಿನಿಸ್ಟರ್ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: Corona Virus: ರಾಜ್ಯದಲ್ಲಿ ಕೊರೊನಾ 4ನೇ ಅಲೆ ಹೇಗಿರುತ್ತೆ? ಸಚಿವ Sudhakar ಮಾಹಿತಿ

ಆಡಿಯೋ ರಿಲೀಸ್ ಆಗಿ 3 ದಿನ ಆದ್ರೂ ಎಫ್‍ಐಆರ್ ದಾಖಲಾಗಿಲ್ಲ

ನಾನು ವಿಚಾರಣೆಗೆ ಹಾಜರಾಗಲೇಬೇಕು ಅಂತೇನಿಲ್ಲ. ನಾನು ಲಖಿತ ರೂಪದಲ್ಲಿ ನನ್ನಲ್ಲಿರುವ ಮಾಹಿತಿ ಕೊಡುತ್ತೇನೆ. ಸರ್ಕಾರ ಕೋಲಾಟ, ಕತ್ತೆ ಕಾಯುತ್ತಿದ್ದೀರಾ? ನನ್ನ ಬಳಿ ಇನ್ಯಾವ ಸಾಕ್ಷಿ ಕೇಳ್ತಾ ಇದ್ದೀರಾ? ಆಡಿಯೋ ರಿಲೀಸ್ ಆಗಿ ಮೂರು ದಿನಗಳಾಗಿವೆ. ಯಾಕೆ ಎಫ್‍ಐಆರ್ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ಎಡಿಜಿಪಿ ನೇತೃತ್ವದಲ್ಲಿ ನೇಮಕಾತಿ ನಡೆದಿರುತ್ತದೆ. ಯಾರ ನೇತೃತ್ವದಲ್ಲಿ ನೇಮಕಾತಿಯಾಗಿರುತ್ತದೆಯೋ ಅವರನ್ನು ಯಾಕೆ ಕರೆಯುತ್ತಿಲ್ಲ. ನೇಮಕಾತಿ ಪ್ರಕ್ರಿಯೆ ಮಾಡಿದವರನ್ನು ವಿಚಾರಣೆ ಯಾಕೆ ಮಾಡ್ತಾ ಇಲ್ಲ. ಇದನ್ನು ಸಾರ್ವಜನಿಕ ಮುಂದೆ ತಂದರೆ ಅವರಿಗೆ ನೋಟೀಸ್ ಕೊಡ್ತೀರಾ ಎಂದು ಕೇಳಿದರು.

ಗೃಹ ಸಚಿವರೇ ದಿವ್ಯಾ ಹಾಗರಗಿ ಮನೆಗೆ ಹೋಗಿದ್ದು!

ಆರೋಪಿ ದಿವ್ಯಾ ಅವರ ಮನೆಗೆ ಕೆಲವು ದಿನಗಳ ಹಿಂದೆ ಗೃಹ ಸಚಿವರು ಹೋಗಿ ಸನ್ಮಾನ ಮಾಡಿಸಿಕೊಂಡು ಡ್ರೈ ಫ್ರೂಟ್ಸ್ ತಿಂದು ಬಂದಿದ್ದಾರೆ.  ಅನೇಕ ಬಿಜೆಪಿ ನಾಯಕರ ಜೊತೆ ಅವರು ಫೋಟೋ ತೆಗಸಿಕೊಂಡಿದ್ದಾರೆ. ಆದರೆ ಅವರು ನಮ್ಮ ಕಾರ್ಯಕರ್ತೆ ಅಲ್ಲ ಅಂತಾರೆ ಎಂದರು.

ಸುಶೀಲ್ ನಮೋಶಿ ಪ್ರಶ್ನೆ ಕೇಳಿದಾಗ ಇದೇ ಇದೇ ಗೃಹ ಸಚಿವರು ಉತ್ತರ ಕೊಟ್ಟಿದ್ದಾರೆ. ಎಸ್.ರವಿ ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರ ಹೋಮ್ ಮಿನಿಸ್ಟರ್ ಕೊಟ್ಟಿದ್ದಾರೆ. ಯು.ಬಿ.ವೆಂಕಟೇಶ್ ಕೂಡ ಪ್ರಶ್ನೆ ಕೇಳಿದ್ದಾರೆ ಅವರಿಗೂ ಉತ್ತರ ಕೊಟ್ಟಿದ್ದಾರೆ. ಮೇಲ್ಮನವಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಉತ್ತರ ನೀಡಿದ್ದಾರೆ.

ನೇಮಕಾತಿ ಪಟ್ಟಿ ಫೈನಲ್ ಆದ ಅಭ್ಯರ್ಥಿ ಯುನಿಫಾರ್ಮ್ ಹಾಕೊಂಡು ಓಡಾಡ್ತಾ ಇರೋದು ಮಾಹಿತಿ ಇಲ್ವಾ ನಿಮಗೆ?  ದಿವ್ಯಾ ಹಾಗರಗಿ, ಮಹಾಂತೇಶ್ ಪಾಟೀಲ್ ಹೀಗೆ ಅನೇಕರ ಹೆಸರು ಬಂತು. ಆಡಿಯೋ ರಿಲೀಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇತ್ತು. ರಿಲೀಸ್ ಮಾಡೋದಕ್ಕೂ ಮುನ್ನ ಪತ್ರಿಕೆಗಳಲ್ಲಿ ಬಂದಿದೆ.ನಾನು ಸ್ಟಿಂಗ್ ಮಾಡಿದ್ದಾ ಅದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: PWD JE ಪರೀಕ್ಷೆಯಲ್ಲೂ ಅಕ್ರಮ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಪತ್ರಿಕೆಗಳಲ್ಲಿ ಬಂದ ವಿಚಾರವನ್ನು ಸುದ್ದಿಗೋಷ್ಟಿ ಮಾಡಿ ಹೇಳಿದ್ದೇನೆ. ಪೇಪರ್ ಓದಿ ಇಂಟಲಿಜೆನ್ಸ್ ಹೇಳ್ತಾ ಇದಾವೆ. ಟಲಿಜೆನ್ಸ್ ಕಾಮನ್ ಸೆನ್ಸ್ ಇಲ್ಲದೇ ಇರೋವರು. ಪೇಪರ್ ನಲ್ಲಿ ಬರೋದನ್ನ ಸಿಎಂ ಮುಂದೆ ಒಪ್ಪಿಸುತ್ತಿದ್ದಾರೆ.

ಸರ್ಕಾರ ಯತ್ನಾಳ್ ಅವರ ಸಲಹೆ ಸ್ವೀಕರಸಲಿ

ದಯವಿಟ್ಟು ಸರ್ಕಾರ ಶಾಸಕ ಬಸನÀಗೌಡ ಪಾಟೀಲ್ ಯತ್ನಾಳ್ ಅವರ ಸಲಹೆ ತೆಗೆದುಕೊಳ್ಳಿ. ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಯತ್ನಾಳ ಅವರ ಸಲಹೆ ತಗೋಬೇಕು. ಪೋಲಿಸ್ ಇಲಾಖೆಗೆ ಒಬ್ಬ ಸ್ಟ್ರಾಂಗ್ ಹೋಮ್ ಮಿನಿಸ್ಟರ್ ಬೇಕು. ಯತ್ನಾಳ ಕೂಡ ಇದೇ ಹೇಳಿದ್ದಾರೆ ಎಂದು ಸರ್ಕಾರ ಮತ್ತು ಗೃಹ ಇಲಾಖೆಯ ಕಾರ್ಯವೈಖರಿಯ ಬಗ್ಗೆ ವ್ಯಂಗ್ಯವಾಡಿದರು.
ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ನಾನು ಪಿಎಸ್‍ಐ ಅಕ್ರಮದ ಬಗ್ಗೆ ಮಾತಾಡಿದಕ್ಕೆ ನನ್ನ ಟ್ವಿಟರ್ ಖಾತೆಯನ್ನು ಉದ್ದೇಶಪೂರ್ವಕವಾಗಿ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದರು. ಬೇರೆ ಬೇರೆ ನಂಬರ್ ಗಳಿಂದ ನನಗೆ ಬೆದರಿಕೆ ಕರೆ ಬರುತ್ತಿದೆ. ಹಿಂದಿ ಭಾಷೆಯಲ್ಲಿ ಕರೆ ಮಾಡಿ ಬೆದರಿಕೆ ಹಾಕುತಿದ್ದಾರೆ ಎಂದು ಹೇಳಿದರು.

ಬೆದರಿಕೆ ಕರೆಗಳು

ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮ ಸರ್ಕಾರ ಇದೆ ನೀನು ಸುಮ್ಮನೆ ಇರು ಅಂತ ಬೆದರಿಕೆ ಹಾಕುತಿದ್ದಾರೆ. ನಾನು ಯಾರಪ್ಪ ನೀನು ಎಂದು ಕೇಳಿದಾಗ ಕರೆ ಕಟ್ ಮಾಡುತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಅವರಿಂದಲೇ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿದರು.

ಸರ್ಕಾರದಲ್ಲಿ ಉದ್ಯೋಗ ಸಿಗೋದು ತುಂಬಾನೇ ಕಷ್ಟವಾಗಿದೆ. ಪೈಸಾ ಫೇಕೋ ತಮಾಷೆ ದೇಖೋ ಎಂಬಾಂತಾಗಿದೆ. ಇದು ಸರ್ಕಾರದಲ್ಲಿ ನಡೆಯುತ್ತಿರುವ ಸದ್ಯದ ಪರಿಸ್ಥಿತಿ ಎಂದರು.
Published by:Mahmadrafik K
First published: