ಬೆಂಗಳೂರು: ನನ್ನಂತ ಅನಾಥ (Orphan) ಹುಡುಗನಿಗೆ ಟಿಕೆಟ್ ಕೊಟ್ಟು, ವಿಧಾನಸೌಧಕ್ಕೆ (Vidhana Soudha) ರೀಚ್ ಆಗಿದ್ದೇನೆ ಎಂದರೆ ಕಾಂಗ್ರೆಸ್ (Congress) ಪಕ್ಷದ ಸಾಮಾಜಿಕ ನ್ಯಾಯಕ್ಕೂ, ಸಿದ್ಧಾಂತಕ್ಕೆ ತಂದ ಗೆಲುವು ಇದು. ನಮ್ಮ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಒಳ್ಳೆ ಕೆಲಸ ಮಾಡಿದರೆ ಅಭಿಮಾನ ಸಿಗೋದು, ಹಗಲು ದರೋಡೆ ಮಾಡಿದರೆ ಎಲ್ಲಿ ಸಿಗುತ್ತೆ. ಸ್ವಲ್ಪ ಒಳ್ಳೆದು ಮಾಡಿದರೆ ನಾನು ಇಲ್ಲಿ ಏಕೆ ಬರುತ್ತಿದೆ ಎಂದು ಮಾಜಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಅವರಿಗೆ ಚಿಕ್ಕಬಳ್ಳಾಪುರ (Chikkaballapura) ನೂತನ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ನನ್ನ ಕ್ಷೇತ್ರದಲ್ಲಿ 14 ಸರ್ಕಾರಿ ಶಾಲೆಗಳಿವೆ
ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್ ಅವರು, ಚಿಕ್ಕಬಳ್ಳಾಪುರ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ನನ್ನ ಕ್ಷೇತ್ರದಲ್ಲಿ 14 ಸರ್ಕಾರಿ ಶಾಲೆಗಳಿವೆ. 9ನೇ ತರಗತಿಯಿಂದಲೇ ನೀಟ್ ಪರೀಕ್ಷೆ ಹಾಗೂ ಐಐಟಿ ಫೌಂಡೇಶನ್ ಅನ್ನು ಸರ್ಕಾರಿ ಶಾಲೆಯಲ್ಲಿ ಶುರು ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Priyank Kharge: ಬಿಜೆಪಿ ತಂದ ಎಲ್ಲಾ ಕಾಯ್ದೆಗಳ ಪರಿಷ್ಕರಣೆ; ಕಮಲ ನಾಯಕರ ಕೆಂಗಣ್ಣಿಗೆ ಗುರಿಯಾದ ಖರ್ಗೆ ಹೇಳಿಕೆ
ಅಲ್ಲದೆ, ಈ ವರ್ಷ 9ನೇ ತರಗತಿಯಲ್ಲಿ ಸಾವಿರ ಮಕ್ಕಳಿದ್ದಾರೆ. ಅವರು ಯಾವ ಹಂತದಲ್ಲಿದ್ದಾರೆ ಎಂದು ತೋರಿಸಿ, ಮುಂದಿನ ಚುನಾವಣೆಯಲ್ಲಿ ಮತ ಕೇಳುತ್ತೇನೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ, ಅಂತರ್ಜಲ ಸಮಸ್ಯೆ ಇದ್ದು, ಬಡವರು ಕಷ್ಟದಲ್ಲಿದ್ದಾರೆ. ಆದ್ದರಿಂದ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡುತ್ತೇನೆ. ಪ್ರವಾಸೋದ್ಯಮದಿಂದ ದಿನನಿತ್ಯ 10 ಸಾವಿರ ಜನ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಮಾಡುತ್ತೇನೆ. ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಜೊತೆ ಮಾತನಾಡುತ್ತೇನೆ ಎಂದು ವಿವರಿಸಿದರು.
ಯಾವುದೇ ಕಾರಣಕ್ಕೂ ನಾನು ಕ್ಷೇತ್ರದಲ್ಲಿ ದ್ವೇಷ ರಾಜಕಾರಣ ಮಾಡುವುದಿಲ್ಲ. ನಮ್ಮ ಸರ್ಕಾರ ಯಾವ ಸ್ಟ್ಯಾಂಡ್ ತೆಗೆದುಕೊಳ್ಳುತ್ತದೆ ಗೊತ್ತಿಲ್ಲ. ನನ್ನ ಮೇಲೆ 20 ಕೇಸ್ ಹಾಕಿದ್ದಾರೆ. ಆದರೆ ಅವರಾಗಿ ಅವರೇ ಕೇಸ್ ಹಾಕಿಸಿಕೊಂಡರೆ ನಾನು ಜವಾಬ್ದಾರನಲ್ಲ. ಪ್ರತಿದಿನ ಬೆಳಗ್ಗೆ 6 ರಿಂದ 9 ಗಂಟೆ, ಸಂಜೆ 6 ರಿಂದ 9 ಗಂಟೆವರೆಗೂ ಕ್ಷೇತ್ರದಲ್ಲಿನ ಪ್ರತಿ ಮನೆ ಮನೆಗೂ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ