ಬೆಂಗಳೂರು: ಶಾಂತಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ (Congress MLA NA Harris) ತಿಗಳ ಸಮುದಾಯದ (Tigala Community) ಕ್ಷಮೆ ಕೇಳಿದ್ದಾರೆ. ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಾಲಯಕ್ಕೆ (Dharmaraya Temple, Bengaluru) ಆಗಮಿಸಿದ ಶಾಸಕ ಎನ್ಎ ಹ್ಯಾರಿಸ್ ಬಹಿರಂಗವಾಗಿ ಕ್ಷಮೆ ಕೇಳಿದರು. ಇತ್ತೀಚೆಗೆ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬೆಂಗಳೂರು ಕರಗವನ್ನು (Bengaluru Karaga) ನಾಟಕ ಎಂದು ಹ್ಯಾರಿಸ್ ಹೇಳಿದ್ದರು. ಶಾಸಕರ ಈ ಹೇಳಿಕೆಗೆ ತಿಗಳರ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತು. ಸೋಶಿಯಲ್ ಮೀಡಿಯಾದಲ್ಲಿ (Social Media) ನಿರಂತರವಾಗಿ ಶಾಸಕರನ್ನು ಟ್ಯಾಗ್ ಮಾಡಿ ತಿಗಳರ ಸಮುದಾಯ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಸಮುದಾಯದಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಎಚ್ಚೆತ್ತ ಶಾಸಕರು ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಕ್ಷಮೆ ಕೋರಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎನ್ಎ ಹ್ಯಾರಿಸ್, ನಾನು ಆ ರೀತಿಯಲ್ಲಿ ಮಾತಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನನ್ನ ಹೇಳಿಕೆಯನ್ನು ವೈರಲ್ ಮಾಡಲಾಗಿದೆ. ಇಂದು ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಆಗಮಿಸಿ ದೇವರ ಮುಂದೆ ಕ್ಷಮೆ ಕೇಳಿದ್ದೀನಿ. ನಾನು ಪ್ರತಿ ವರ್ಷ ಕರಗ ಉತ್ಸವದಲ್ಲಿ ಭಾಗಿಯಾಗುತ್ತೇನೆ. ದೇವರ ಮೇಲೆ ನನಗೆ ಅಪಾರ ಭಕ್ತಿ ಗೌರವವಿದೆ ಎಂದು ಹೇಳಿದರು.
ಇದು ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯ ಪಿತೂರಿ
ಲಿಂಗಾಯತ ಸಮುದಾಯಕ್ಕೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಹೇಳಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಸುಳ್ಳಿನ ಸುದ್ದಿ ಹಬ್ಬಿಸಿದ್ದಾರೆ. ಕನಸಿನಲ್ಲೂ ನಾನು ಜಾತಿ ರಾಜಕಾರಣ ಮಾಡಿದವನಲ್ಲ. ಜಾತಿಯ ಬಗ್ಗೆ ಯೋಚನೆಯನ್ನು ಮಾಡಲ್ಲ. ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಲಿಂಗಾಯಿತ ವಿರೋಧಿ ಭಾವನೆ ಹುಟ್ಟುಹಾಕುವ ಕೆಲಸವನ್ನ ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ಕಿಡಿ
ಲಿಂಗಾಯತ ಪ್ರಮುಖ ನಾಯಕರು ಸಿ.ಟಿ.ರವಿ ಬಗ್ಗೆ ಸಿಟ್ಟು ಹೊರಹಾಕ್ತಿದ್ದಂತೆ ಟ್ವೀಟ್ ಮಾಡಿದ್ರು. ಲಿಂಗಾಯತ ಸಮುದಾಯದ ಒಗ್ಗಟ್ಟನ್ನು ಒಡೆಯುವ ಕಾಂಗ್ರೆಸ್ನ ಚಾಳಿ ಎಲ್ಲರಿಗೂ ತಿಳಿದದ್ದೇ ಮತ್ತು ಅದಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸಲೂ ಹೇಸದ ಹಂತ ತಲುಪಿದ್ದಾರೆ.
ಲಿಂಗಾಯತ ಸಮುದಾಯದಲ್ಲಿ ಬಿಜೆಪಿಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಪತ್ರಿಕೆಯಲ್ಲಿ ಪ್ರಕಟವಾದ ರೀತಿ ಸುಳ್ಳು ಸೃಷ್ಟಿಸಿ, ಮಾಧ್ಯಮಗಳಿಗೂ ಅಪಚಾರ ಎಸಗಲಾಗಿದೆ. ಅಂತ ಕಾಂಗ್ರೆಸ್ನವರ ಮೇಲೆ ಸಿಟ್ಟು ಹೊರಹಾಕಿದ್ದಾರೆ.
ಮೂಡಿಗೆರೆ ಬಿಜೆಪಿಯಲ್ಲಿ ಭಿನ್ನಮತ!
ಚಿಕ್ಕಮಗಳೂರಿನ ಮೂಡಿಗೆರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರ ಆಕ್ರೋಶ ಹೊರಹಾಕಿದ್ದಾರೆ. ಶಾಸಕರ ವಿರುದ್ಧ ಬಹಿರಂಗ ಸಭೆ ನಡೆಸಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ವಿಜಯಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಬಣ ರಾಜಕೀಯ ಬೀದಿಗೆ ಬಿದ್ದಿದೆ.
ಇದನ್ನೂ ಓದಿ: Araga Jnanendra: ತುಳುನಾಡ ದೈವಕ್ಕೆ ಗೃಹ ಸಚಿವರಿಂದ ಅಪಮಾನ; ಪೂರ್ಣವಾಗದ ಕಟ್ಟಡಕ್ಕೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಭಾಗ್ಯ
ವ್ಯಾಪಾರ ಧರ್ಮ ದಂಗಲ್!
ಚಿಕ್ಕಮಗಳೂರಿನಲ್ಲಿ ಮತ್ತೆ ಧರ್ಮ ದಂಗಲ್ ತಾರಕಕ್ಕೇರಿದೆ. ಕಿಗ್ಗದ ಋಷ್ಯಶೃಂಗೇಶ್ವರ ಸ್ವಾಮಿ ದೇವಳದ ಜಾತ್ರೆ ವಿಷಯದಲ್ಲಿ ವ್ಯಾಪಾರ ದಂಗಲ್ ಶುರುವಾಗಿದೆ. ಜಾತ್ರೆಯಲ್ಲಿ ಅನ್ಯ ಧರ್ಮೀಯರು ವ್ಯಾಪಾರ ಮಾಡುವುದನ್ನು ನಿರ್ಬಂಧಿಸುವಂತೆ ಜಾಗೃತ ಹಿಂದೂ ಬಾಂಧವರ ಹೆಸರಿನಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ