ಬಿಎಸ್​ವೈ ಪದಚ್ಯುತಿಗೊಳಿಸಿದರೆ ಲಿಂಗಾಯತ ಸಮುದಾಯದ ಅವಕೃಪೆಗೆ ತುತ್ತಾಗಬೇಕಾಗುತ್ತದೆ; ಎಂಬಿ ಪಾಟೀಲ್​

ಸಿಎಂ ನಾಯಕತ್ವದ ಕುರಿತ ಅನಿಶ್ಚಿತತೆ ಬಗ್ಗೆ ಮತ್ತೆ ಅಪಸ್ವರಗಳು ಕೇಳಿ ಬಂದಿದೆ. ಈ ನಡುವೆ ಕಾಂಗ್ರೆಸ್​ನ ಮಾಜಿ ಸಚಿವ ಎಂಬಿ ಪಾಟೀಲ್​ ಸಿಎಂ ಪರ ಬ್ಯಾಟಿಂಗ್​ ನಡೆಸಿದ್ದು, ಅವರು ತಮ್ಮ ಲಿಂಗಾಯತ ಸಮುದಾಯದ ಧೀಮಂತ ನಾಯಕ ಎಂದು ಬಣ್ಣಿಸಿದ್ದಾರೆ.

ಎಂಬಿ ಪಾಟೀಲ

ಎಂಬಿ ಪಾಟೀಲ

 • Share this:
  ಬೆಂಗಳೂರು (ಜು. 19):  ರಾಜ್ಯದಲ್ಲಿ ನಾಯಕತ್ವ ಚರ್ಚೆ ಕುರಿತು ಮತ್ತೊಂದು ಸುತ್ತಿನ ಚರ್ಚೆ ಆರಂಭವಾಗಿದ್ದು, ಈ ನಡುವೆ ಮಾಜಿ ಸಚಿವ, ಕಾಂಗ್ರೆಸ್​ ಶಾಸಕ ಎಂ ಬಿ ಪಾಟೀಲ್​ ಸಿಎಂ ಬಿಎಸ್​ ಯಡಿಯೂರಪ್ಪ ಪರ ಮಾತನಾಡಿ ಕುತೂಹಲ ಮೂಡಿಸಿದ್ದಾರೆ. ಜು. 26ಕ್ಕೆ ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಿ ಎರಡು ವರ್ಷ ಪೂರೈಸಲಿದ್ದು, ಇದಾದ ಬಳಿಕ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಜೋರಾಗಿದೆ. ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಬಿಜೆಪಿ ರಾಜ್ಯಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಧ್ವನಿಯಲ್ಲಿ ಕೇಳಿ ಬಂದಿರು ಆಡಿಯೋ ಕೂಡ ವೈರಲ್​ ಆಗಿದೆ. ಆದರೆ, ನಳೀನ್​ ಕುಮಾರ್​ ಕಟೀಲ್​ ತಮ್ಮ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಯಾರೋ ಈ ರೀತಿ ಆಡಿಯೋ ಮಾಡಿದ್ದಾರೆ ಎಂದು ಈ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.

  ಈ ಹಿನ್ನಲೆ ಸಿಎಂ ನಾಯಕತ್ವದ ಕುರಿತ ಅನಿಶ್ಚಿತತೆ ಬಗ್ಗೆ ಮತ್ತೆ ಅಪಸ್ವರಗಳು ಕೇಳಿ ಬಂದಿದೆ. ಈ ನಡುವೆ ಕಾಂಗ್ರೆಸ್​ನ ಮಾಜಿ ಸಚಿವ ಎಂಬಿ ಪಾಟೀಲ್​ ಸಿಎಂ ಪರ ಬ್ಯಾಟಿಂಗ್​ ನಡೆಸಿದ್ದು, ಅವರು ತಮ್ಮ ಲಿಂಗಾಯತ ಸಮುದಾಯದ ಧೀಮಂತ ನಾಯಕ ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೇ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

  ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆ ಎಂದು ತಿಳಿಸಿದ್ದಾರೆ.  ಕಳೆದ ವಿಧಾನಸಭೆ ಚುನಾವಣಾ ವೇಳೆ ಈ ಇಬ್ಬರು ನಾಯಕರು ಪರಸ್ಪರ ಆರೋಪ ಪ್ರತ್ಯಾರೋಕ್ಕೆ ಇಳಿದಿದ್ದರು. ಅಲ್ಲದೇ ಲಿಂಗಾಯತ ಹೋರಾಟ ವಿಚಾರದಲ್ಲಿ ಎಂಬಿ ಪಾಟೀಲ್ ಸೋಲಿಸಲು ಯಡಿಯೂರಪ್ಪ ಅವರ ವಿರುದ್ಧ ಪ್ರಚಾರ ನಡೆಸಿದ್ದರು. ಇದೀಗ ಸಿಎಂ ಪರವಾಗಿ ಟ್ವಿಟ್ ಮಾಡುವ ಮೂಲಕ ಎಂಬಿ ಪಾಟೀಲ್​ ಕುತೂಹಲ ಮೂಡಿಸಿದ್ದಾರೆ.

  ಇದನ್ನು ಓದಿ: ಸುರಿವ ಮಳೆಯಲ್ಲಿಯೇ ಪೊಲೀಸರ ಕರ್ತವ್ಯ ಪ್ರಜ್ಞೆ; ಅಂಗಾಂಗ ಸಾಗಾಟಕ್ಕೆ ಗ್ರೀನ್ ಕಾರಿಡಾರ್

  ಸಿಎಂ ಬದಲಾವಣೆಗೆ ಸೂಚಿಸಿದ್ಯಾ ಹೈ ಕಮಾಂಡ್​​

  ಕಳೆದೆರಡು ದಿನಗಳ ಹಿಂದೆ ಹೈ ಕಮಾಂಡ್​ ಭೇಟಿಯಾಗಿ ಮರಳಿದ  ಬಿಎಸ್​ ಯಡಿಯೂರಪ್ಪ ಅವರ ಮಾತಿನ ವರಸೆಯಲ್ಲಿ ಕೊಂಚ ಬದಲಾವಣೆ ಯಾಗಿತ್ತು. ಹೈ ಕಮಾಂಡ್​ಗೆ ನನ್ನ ಮೇಲೆ ವಿಶ್ವಾಸವಿದೆ ಎನ್ನತ್ತಿರುವ ಬಿಎಸ್​ವೈ ಇದೇ ವೇಳೆ ಹೈಕಮಾಂಡ್ ಬಯಸಿದರೆ ಅವರ ಮಾತು ಕೇಳಬೇಕಾಗುತ್ತದೆ ಎನ್ನುವ ಮೂಲಕ ನಾಯಕತ್ವ ಬದಲಾವಣೆ ಕುರಿತ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದ್ದರು. ಇದೇ ವೇಳೆ ಸಿಎಂ ಜು. 26ರ ಒಳಗೆ ಎಲ್ಲಾ ಕಡತಗಳನ್ನು ಕ್ಲಿಯರ್​ ಮಾಡುವಂತೆ ಕೂಡ ಸೂಚನೆ ನೀಡಿರುವುದು ಬಹಳಷ್ಟು ಪ್ರಶ್ನೆ ಹುಟ್ಟು ಹಾಕಿದೆ. ಇದರೊಟ್ಟಿಗೆ ಜು. 26ರಂದು ಸಿಎಂ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದು, ಜು. 25ಕ್ಕೆ ಔತಣಕೂಟವನ್ನು ಆಯೋಜಿಸಿದ್ದಾರೆ. ಇದೇ ಹಿನ್ನಲೆ ಯಡಿಯೂರಪ್ಪ ಅವರ ನಾಯಕತ್ವ ಇದೇ ತಿಂಗಳಿಗೆ ಮುಕ್ತಾಯವಾಗುವ ಸಾಧ್ಯತೆ ಬಗ್ಗೆ ಅನುಮಾನ ಹೆಚ್ಚಿದೆ.

  ಈಗಾಗಲೇ ಪಕ್ಷದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಪರ ವಿರೋಧಿ ಅಲೆಗಳು ಹೆಚ್ಚಿರುವ ಹಿನ್ನಲೆ, ಹೈ ಕಮಾಂಡ್​ ಈ ರೀತಿ ಮುನ್ಸೂಚನೆ ನೀಡಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಅವರಿಗೆ ಸಲಹೆ ನೀಡಿದೆ ಎನ್ನಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Seema R
  First published: