• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Laxmi Hebbalkar: ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಪಲಿಲ್ಲ, ನಾನ್ಯಾವ ಲೆಕ್ಕ: ಹೆಬ್ಬಾಳ್ಕರ್ ಭಾವುಕ ಮಾತು

Laxmi Hebbalkar: ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಪಲಿಲ್ಲ, ನಾನ್ಯಾವ ಲೆಕ್ಕ: ಹೆಬ್ಬಾಳ್ಕರ್ ಭಾವುಕ ಮಾತು

ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕಿ

ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕಿ

ಮಹಿಳೆಯರ ಹೋರಾಟದ ಬದುಕಿನಲ್ಲಿ ಸಂಘರ್ಷಗಳು ಸಾಮಾನ್ಯ. ಅದರಲ್ಲಿಯೂ ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟ. ನಾವು ಪ್ರತಿಹಂತದಲ್ಲಿಯೂ ಕಷ್ಟಗಳನ್ನು ಎದುರಿಸಬೇಕು ಎಂದು ರಮೇಶ್ ಜಾರಕಿಹೊಳಿ ಆರೋಪಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.

  • Share this:

ಚಿಕ್ಕಮಗಳೂರು: ಮೂಡಿಗೆರೆ (Mudigere) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ನಯನ ಮೋಟಮ್ಮ (Nayana Motamma) ಆಯೋಜನೆಯ ಆಶಾಕಿರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Congress MLA Laxmi Hebbalkar) ಭಾವುಕರಾಗಿ ಮಾತನಾಡಿದರು. ಅಂತಹ ಸೀತಾಮಾತೆಗೂ ಅಗ್ನಿಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಆಗಿಲ್ಲ. ಇನ್ನ ನಾನು ಯಾವ ಲೆಕ್ಕ. ಮಹಿಳೆ (Woman) ಆಂದ್ರೆ ಸಂಘರ್ಷ. ಸಂಘರ್ಷ ಅನ್ನೋದು ಮಹಿಳೆಯ ಹುಟ್ಟಿನ ಜೊತೆಯಲ್ಲಿಯೇ ಬರುತ್ತದೆ. ಮಹಿಳೆ ಹುಟ್ಟಿನಿಂದ ಸಾಯೋವರೆಗೂ ಸಂಘರ್ಷ ಮಾಡಿಕೊಂಡು ಬರುತ್ತಾಳೆ. ಜೀವನದ ಕೊನೆಯ ಘಟ್ಟದವರೆಗೂ ಹಲವು ಪರೀಕ್ಷೆಗಳನ್ನು ಎದುರಿಸುತ್ತಾಳೆ ಎಂದು ಮಹಿಳೆಯರ ಕಷ್ಟಗಳ ಬಗ್ಗೆ ಭಾವುಕರಾಗಿ ಮಾತನಾಡಿದರು.


ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಸಿಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಈ ಬಗ್ಗೆ ಈಗಾಗಲೇ ಪ್ರತಿಕ್ರಿಯೆಸಿದ್ದೇನೆ. ಹಾಗಾಗಿ ಮತ್ತೆ ಆ ಬಗ್ಗೆ ಏನೂ ಮಾತನಾಡಲ್ಲ. ಮುಂದಿನ ಮೂರು ತಿಂಗಳು ಅತ್ಯಂತ ತಾಳ್ಮೆಯಿಂದ ನಾನು ಕಲಸ ಮಾಡಬೇಕಿದೆ. ನನ್ನ ಅಭಿವೃದ್ಧಿ ಕೆಲಸಗಳಿಂದಲೇ ಚುನಾವಣೆ ಗೆಲ್ಲಬೇಕಿದೆ ಎಂದರು.


ಮಹಿಳೆಯ ಬದುಕಿನಲ್ಲಿ ಸಂಘರ್ಷಗಳು ಸಾಮಾನ್ಯ


ಮಹಿಳೆಯರ ಹೋರಾಟದ ಬದುಕಿನಲ್ಲಿ ಸಂಘರ್ಷಗಳು ಸಾಮಾನ್ಯ. ಅದರಲ್ಲಿಯೂ ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟ. ನಾವು ಪ್ರತಿಹಂತದಲ್ಲಿಯೂ ಕಷ್ಟಗಳನ್ನು ಎದುರಿಸಬೇಕು ಎಂದು ರಮೇಶ್ ಜಾರಕಿಹೊಳಿ ಆರೋಪಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.


ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕಿ


ಈ ಬಾರಿ ಚುನಾವಣೆಯನ್ನು ಅತ್ಯಂತ ಸಹನೆ ಮತ್ತು ತಾಳ್ಮೆಯಿಂದ ಎದುರಿಸಬೇಕು. ಕೆಟ್ಟದನ್ನ ಮಾತನಾಡಲ್ಲ, ಕೆಟ್ಟದನ್ನ ನೋಡಲ್ಲ ಮತ್ತು ಕೆಟ್ಟದನ್ನ ಕೇಳಲ್ಲ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಂದ ಗೆದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಮಹಿಳೆಯರ ಪರವಾದ ಸರ್ಕಾರವನ್ನು ಅಧಿಕಾರ ತರಬೇಕಾಗಿರೋದರಿಂದ ತಾಳ್ಮೆಯಿಂದಿರಲು ಇಷ್ಟಪಡುತ್ತೇನೆ ಎಂದು ಹೇಳಿದರು.


ಅಜ್ಜಿ ಆಗುತ್ತಿದ್ದೇನೆ ಎಂದು ಹೇಳಿದ ಹೆಬ್ಬಾಳ್ಕರ್


ಈ ಹಿಂದೆ ವಿನಯ್ ಗುರೂಜಿ (Vinay Guuruji) ಅವರನ್ನು ಭೇಟಿಯಾದಾಗ ಸೊಸೆಯ ಸೀಮಂತಕ್ಕೆ ಬರುತ್ತೇನೆ ಎಂದು ಹೇಳಿದ್ದರು. ಆಗ ನಮಗೆ ವಿಷಯವೇ ಗೊತ್ತಿರಲಿಲ್ಲ. ಗುರೂಜಿಗಳ ಹೇಳಿದ ಮೂರು ದಿನಕ್ಕೆ ಸೊಸೆ ತಾಯಿ ಆಗುತ್ತಿರುವ ವಿಷಯ ಗೊತ್ತಾಯ್ತು. ಹಾಗಾಗಿ ಸೊಸೆಯ ಸೀಮಂತಕ್ಕೆ ವಿನಯ್ ಗುರೂಜಿಗಳನ್ನು ಆಹ್ವಾನಿಸುತ್ತೇನೆ ಎಂದು ಹೇಳಿದರು.
ನೀವು ನಗಬೇಡಿ, ನನಗೆ ನಾಚಿಕೆ ಆಗುತ್ತೆ ನಾನು ಅಜ್ಜಿ ಆಗುತ್ತಿದ್ದೇನೆ ಎಂಬ ಖುಷಿಯ ವಿಚಾರವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಹಂಚಿಕೊಂಡರು. ಇನ್ನು ವೇದಿಕೆ ಮೇಲೆ ಕುಳಿತಿದ್ದ ವಿನಯ್ ಗುರೂಜಿಗಳಿಗೆ ಸೊಸೆಯ ಸೀಮಂತಕ್ಕೆ ಆಹ್ವಾನಿಸಿದರು.


ಹೆಚ್​ಡಿಕೆ ಹೇಳಿಕೆಗೆ ಪ್ರತಿಕ್ರಿಯೆ


ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಹೇಳಿಕೆಗೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ನನಗೆ ಅಣ್ಣನಿದ್ದ ಹಾಗೆ. ಯಾವ ಆಶಯವನ್ನಿರಿಸಿಕೊಂಡು ಹೇಳಿಕೆ ನೀಡಿದ್ದಾರೆ ಎಂಬುವುದು ಗೊತ್ತಿಲ್ಲ. ನಾನು ಆ ಹೇಳಿಕೆಯನ್ನು ಸಹ ಕೇಳದ ಕಾರಣ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.


ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕಿ


ಇದನ್ನೂ ಓದಿ:  PM Modi: ಇಂದು ಬೆಂಗಳೂರು, ತುಮಕೂರಿನಲ್ಲಿ 'ನಮೋ' ಅಬ್ಬರ; ಕರ್ನಾಟಕ ಗೆಲ್ಲಲು ಮೋದಿ ರಣತಂತ್ರ!


ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಯ ಅಭಿವೃದ್ಧಿ


ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ ಮಹಿಳೆಯರಿಗೆ ಎಲ್ಲಾ ಹಕ್ಕುಗಳು ಸಿಗಲು ಸಾಧ್ಯ. ಕಾಂಗ್ರೆಸ್ ಮಹಿಳೆ ಪರ ಇರೋ ಪಕ್ಷವಾಗಿದೆ. ಅಧಿಕಾರಕ್ಕೆ ಬಂದ್ರೆ ರಾಜ್ಯದಲ್ಲಿಯ ಮಹಿಳೆಯರ ಸರ್ವತೋಮಖ ಅಭಿವೃದ್ಧಿ ಸಾಧ್ಯ ಎಂದರು.

Published by:Mahmadrafik K
First published: