ಮಹೇಶ್ ಕುಮಟಳ್ಳಿ ಮನುಷ್ಯತ್ವ ಇಲ್ಲದವರು; ಮುಗ್ಧತೆಯ ಸೋಗಿನವರು: ಲಕ್ಷ್ಮೀ ಹೆಬ್ಬಾಳ್ಕರ್​

ಸಂಭಾವಿತ ಎಂದು ಆರಿಸಿದ ಕುಮಟಳ್ಳಿ ಪ್ರವಾಹ ಸಂದರ್ಭದಾಗ ನಿಮಗ ಸ್ಪಂದಿಸಲಿಲ್ಲ. ನಾನು ಜೋರಾಗಿ ಮಾತನಾಡಿದ್ರೆ ಮಾಧ್ಯಮವರು ತೋರಿಸ್ತಾರೆ. ಅದಕ್ಕೆ ಸೂಕ್ಷ್ಮವಾಗಿ ಮಾತಾಡ್ತೇನೆ. ಬಿಜೆಪಿ ಅಭ್ಯರ್ಥಿಗೆ ಮನುಷ್ಯತ್ವ ಇಲ್ಲ. ಮುಗ್ದ ಮುಖದ ಹಿಂದೆ ಏನಿದೆ ಗೊತ್ತಿಲ್ಲ

news18-kannada
Updated:November 27, 2019, 6:21 PM IST
ಮಹೇಶ್ ಕುಮಟಳ್ಳಿ ಮನುಷ್ಯತ್ವ ಇಲ್ಲದವರು; ಮುಗ್ಧತೆಯ ಸೋಗಿನವರು: ಲಕ್ಷ್ಮೀ ಹೆಬ್ಬಾಳ್ಕರ್​
ಮಹೇಶ್ ಕುಮಟಳ್ಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್​
  • Share this:
ಬೆಳಗಾವಿ(ನ. 27): ಸಮ್ಮಿಶ್ರ ಸರಕಾರ ರಚನೆಗೂ ಮುನ್ನ ಬೆಳಗಾವಿ ಜಿಲ್ಲೆಯ ದೊಡ್ಡವರು ಬಿಜೆಪಿ ಸೇರಲು ನಿರ್ಧರಿಸಿದ್ದರು. ಈ ನಿಟ್ಟಿನಲ್ಲಿ ನಮ್ಮೊಂದಿಗೆ ಸಭೆಯನ್ನೂ ಮಾಡಿದ್ದರು. ಬಿಜೆಪಿಗೆ ಹೋಗೋಣ ಅಂದ್ರು. ಇದು ನಂಗೆ ಆಗೋದುಲ್ಲ ಅಂತ ಹೇಳಿ ಸಭೆಯನ್ನು ಮೊಟಕುಗೊಳಿಸಿ ಹೊರ ಬಂದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದಾರೆ.

ಅಥಣಿ ಉಪಚುನಾವಣೆಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿನ ಮತದಾರರು‌‌ ಈ ಉಪಚುನಾವಣೆ ಯಾಕೆ ಬಂತು ಅಂತ ಯೋಚಿಸಬೇಕು. ಬರ ಇತ್ತು, ನೆರೆ ಬಂದಿತ್ತು. ನಿಮಗ ಈ ಎಲೆಕ್ಷನ್ ಬೇಕಾಗಿತ್ತಾ? 2018ರ ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹೇಶ್ ಕುಮಟಳ್ಳಿ ಗೆಲ್ಲಲು ರಾಹುಲ್ ಗಾಂಧಿ ಅವರನ್ನು ಕರಕೊಂಡು ಬಂದು ಪ್ರಚಾರ ಮಾಡಿದ್ವಿ. ಬರ ಇದ್ದಾಗ ನೀರು ಕೊಡಲಿಲ್ಲ. ಪ್ರವಾಹ ಬಂದಾಗ ನಿಮಗೆ ಗಂಜಿ ಕುಡ್ಯಾಕ ಇರಲಿಲ್ಲ. ಮಹೇಶ ಕುಮಟಳ್ಳಿ ಮುಂಬೈನಲ್ಲಿ ಫೈವ್ ಸ್ಟಾರ್ ಹೊಟೇಲ್​​​ ನಲ್ಲಿ ಆರಾಮಾಗಿದ್ದರು ಎಂದು ಹೆಬ್ಬಾಳ್ಕರ್ ಕಿಡಿಕಾರಿದರು.

ಸಂಭಾವಿತ ಎಂದು ಆರಿಸಿದ ಕುಮಟಳ್ಳಿ ಪ್ರವಾಹ ಸಂದರ್ಭದಾಗ ನಿಮಗ ಸ್ಪಂದಿಸಲಿಲ್ಲ. ನಾನು ಜೋರಾಗಿ ಮಾತನಾಡಿದ್ರೆ ಮಾಧ್ಯಮವರು ತೋರಿಸ್ತಾರೆ. ಅದಕ್ಕೆ ಸೂಕ್ಷ್ಮವಾಗಿ ಮಾತಾಡ್ತೇನೆ. ಬಿಜೆಪಿ ಅಭ್ಯರ್ಥಿಗೆ ಮನುಷ್ಯತ್ವ ಇಲ್ಲ. ಮುಗ್ದ ಮುಖದ ಹಿಂದೆ ಏನಿದೆ ಗೊತ್ತಿಲ್ಲ. ಬಿಜೆಪಿ ಸೇರಿದ ಕುಮಟಳ್ಳಿಗೆ ಸಮ್ಮಿಶ್ರ ಸರಕಾರದ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು ಎಂದು ಕುಮಟಳ್ಳಿ ವಿರುದ್ದ  ಹೆಬ್ಬಾಳ್ಕರ್​ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ :  ದುಷ್ಟ ಶಕ್ತಿಯನ್ನು ಕಿತ್ತೆಸೆಯಲು ನನ್ನನ್ನು ಬೆಂಬಲಿಸಿ ; ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ

ಸಮ್ಮಿಶ್ರ ಸರಕಾರ ರಚನೆಗೂ ಮುನ್ನವೇ ಬಿಜೆಪಿ ಸೇರಲು ನಿರ್ಧರಿಸಿದ ಇವರಿಗೆ ತಕ್ಕ ಪಾಠ ಕಲಿಸಲೇಬೇಕು. ಚುನಾವಣೆಯಲ್ಲಿ ಆಯ್ಕೆಯಾದ ಏಳೆಂಟು ದಿನದ ಬಳಿಕವೇ ಅವರು ಬಿಜೆಪಿ ಸೇರಲು ಯೋಚಿಸಿದ್ದರು. ಮೈತ್ರಿ ಸರ್ಕಾರವು ಅಭಿವೃದ್ಧಿಗೆ ಸ್ಪಂದಿಸದಿದ್ದರೆ ಇವರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಬೇಕಿತ್ತು. ಆಗಲೂ ಒಪ್ಪದಿದ್ದರೆ ರಾಜೀನಾಮೆ ನೀಡಬೇಕಿತ್ತು, ಆಗ ಒಪ್ಪುತ್ತಿದ್ದೆವು. ಈಗ ರಾಜೀನಾಮೆ ನೀಡಿದ್ದು ಸ್ವಾರ್ಥಕ್ಕಾಗಿ ಎಂದು  ಅಥಣಿ ಮತಕ್ಷೇತ್ರದ ಸಂಕೋನಟ್ಟಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
First published:November 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ