ಎಂಟಿಬಿ ದುಡ್ಡು ಕೊಟ್ರೆ ತಗೊಳ್ಳಿ, ಆದ್ರೆ ಕಾಂಗ್ರೆಸ್​​ಗೆ ಮತ ಹಾಕಿ; ಕೆ.ವೈ.ನಂಜೇಗೌಡ ಕರೆ

ಎಂಟಿಬಿ ನಾಗರಾಜ್ ತಮ್ಮ​ 1200 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಅದೆಲ್ಲಾ ನಿಮ್ಮ ಆಶೀರ್ವಾದದಿಂದ ಮಾಡಿದ ಹಣ. ಎಂಟಿಬಿ ನಾಗರಾಜ್ ನಿಮ್ಮ ಋಣದಲ್ಲಿ ಇದ್ದಾರೆ.  ಹಾಗಾಗಿ ಅವರು ದುಡ್ಡು ಕೊಟ್ಟರೆ ತೆಗೆದುಕೊಳ್ಳಿ ಎಂದು ಬಹಿರಂಗ ಪ್ರಚಾರದಲ್ಲಿ ಕರೆ ನೀಡಿದ್ದಾರೆ.

Latha CG | news18-kannada
Updated:November 23, 2019, 9:53 PM IST
ಎಂಟಿಬಿ ದುಡ್ಡು ಕೊಟ್ರೆ ತಗೊಳ್ಳಿ, ಆದ್ರೆ ಕಾಂಗ್ರೆಸ್​​ಗೆ ಮತ ಹಾಕಿ; ಕೆ.ವೈ.ನಂಜೇಗೌಡ ಕರೆ
ಕೆ.ವೈ.ನಂಜೇಗೌಡ
  • Share this:
ಹೊಸಕೋಟೆ(ನ.23): ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಎಷ್ಟೇ ದುಡ್ಡು ಕೊಟ್ಟರೂ ತಗೊಳ್ಳಿ. ಆದ್ರೆ ಕಾಂಗ್ರೆಸ್​ ಪಕ್ಷಕ್ಕೆ ಮತಹಾಕಿ ಎಂದು ಮಾಲೂರಿನ ಕಾಂಗ್ರೆಸ್​​​ ಶಾಸಕ ಕೆ.ವೈ.ನಂಜೇಗೌಡ ಜನರಿಗೆ ಕರೆ ನೀಡಿದ್ದಾರೆ. 

ಹೊಸಕೋಟೆಯಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಪದ್ಮಾವತಿ ಸುರೇಶ್​ ಪರ ಶಾಸಕ ನಂಜೇಗೌಡ ಪ್ರಚಾರ ಮಾಡುತ್ತಿದ್ದಾರೆ. ಹೊಸಕೋಟೆಯ ಕೆಂಬಳಿಗಾನಹಳ್ಳಿಯಲ್ಲಿ ಪ್ರಚಾರ ಮಾಡುವ ವೇಳೆ, ಮಾತನಾಡಿದ ಅವರು, ಎಂಟಿಬಿ ನಾಗರಾಜ್ ದುಡ್ಡು ಕೊಟ್ಟರೆ ತಗೊಳ್ಳಿ. 2000, 4000 ರೂ.ಎಷ್ಟೇ ಕೊಟ್ಟರೂ ತಗೊಳ್ಳಿ. ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ಎಂದು ಹೇಳಿದರು.

ಎಂಟಿಬಿ ನಾಗರಾಜ್ ತಮ್ಮ​ 1200 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಅದೆಲ್ಲಾ ನಿಮ್ಮ ಆಶೀರ್ವಾದದಿಂದ ಮಾಡಿದ ಹಣ. ಎಂಟಿಬಿ ನಾಗರಾಜ್ ನಿಮ್ಮ ಋಣದಲ್ಲಿ ಇದ್ದಾರೆ.  ಹಾಗಾಗಿ ಅವರು ದುಡ್ಡು ಕೊಟ್ಟರೆ ತೆಗೆದುಕೊಳ್ಳಿ ಎಂದು ಬಹಿರಂಗ ಪ್ರಚಾರದಲ್ಲಿ ಕರೆ ನೀಡಿದ್ದಾರೆ.

ಬಿಜೆಪಿಗೆ ಬರಲ್ಲ ಅಂದಮೇಲೆ ಎಂಟಿಬಿ ಸಾಲ ವಾಪಸ್​ ಕೇಳ್ತಿದ್ದಾರೆ; ಕೆ.ವೈ.ನಂಜೇಗೌಡ ವಾಗ್ದಾಳಿ

ಶಾಸಕ ನಂಜೇಗೌಡ ತನ್ನ ಬಳಿ ಸಾಲ ತೆಗೆದುಕೊಂಡಿರುವುದಾಗಿ ಎಂಟಿಬಿ ನಾಗರಾಜ್​ ಆರೋಪ ಮಾಡಿದ್ದರು. ಇದಕ್ಕೆ ಮೊನ್ನೆ ಸ್ಪಷ್ಟನೆ ಕೊಟ್ಟಿದ್ದ ಕೆ.ವೈ.ನಂಜೇಗೌಡ, ಸಿದ್ದರಾಮಯ್ಯ ಎಂಟಿಬಿ ನಾಗರಾಜ್ ಬಳಿ ಹಣ ತೆಗೆದುಕೊಂಡಿಲ್ಲ, ನಮಗೆ ಕೊಡಿಸಿದ್ದು ನಿಜ. ಸಿದ್ದರಾಮಯ್ಯ ಹೇಳಿದ್ದಕ್ಕೆ ಎಂಟಿಬಿ ನಾಗರಾಜ್​ ನನಗೆ ಹಣ ಕೊಟ್ಟಿದ್ದು ನಿಜ.

ಚುನಾವಣಾ ಖರ್ಚಿಗಾಗಿ ನನಗೆ 2 ಕೋಟಿ ಕೊಡಿ ಎಂದು ಸಿದ್ದರಾಮಯ್ಯ ಎಂಟಿಬಿಗೆ ಹೇಳಿದ್ದರು. ನಾನು ಇನ್ನೊಂದು ಕೋಟಿ ಹೆಚ್ಚಾಗಿ ಅಂದರೆ 3 ಕೋಟಿ ರೂಪಾಯಿಯನ್ನು ಎಂಟಿಬಿ ನಾಗರಾಜ್​ ಅವರಿಂದ ಸಾಲವಾಗಿ ಪಡೆದುಕೊಂಡಿದ್ದೆ. ಪಡೆದ ಸಾಲದಲ್ಲಿ 1 ಕೋಟಿ ಹಣವನ್ನು ಒಂದು ವಾರದಲ್ಲೇ ವಾಪಸ್​​ ಮಾಡಿದ್ದೇನೆ. ಉಳಿದ 2 ಕೋಟಿ ಹಣವನ್ನು ಇಂದು ಅವರ ಖಾತೆಗೆ ವರ್ಗಾಯಿಸುತ್ತೇನೆ ಎಂದು ಹೇಳಿದ್ದರು.

First published:November 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ