Hijab ಧರಿಸಿ ಕಲಾಪಕ್ಕೆ ಬಂದ ಶಾಸಕಿ; ಅನುಮತಿ ಸಿಗದೇ ತರಗತಿಯಿಂದ ಹೊರ ಬಂದ ವಿದ್ಯಾರ್ಥಿನಿಯರು

ಇತ್ತ ಹಿಜಾಬ್ ಬೆಂಬಲಿಸಿ ವಿದ್ಯಾರ್ಥಿನಿಯರ ನಡೆಯನ್ನು ಕಲಬುರಗಿ ಉತ್ತರ ಶಾಸಕಿ ಖನಿಜ್ ಫಾತಿಮಾ (MLA Khaneez Fatima) ಬುರ್ಕಾ, ಹಿಜಾಬ್ ಧರಿಸಿಯೇ ಕಲಾಪಕ್ಕೆ ಹಾಜರಾಗಿದ್ದರು. ಕೆಲ ದಿನಗಳ ಹಿಂದೆ ಹಿಜಾಬ್ ಧರಿಸಿಯೇ ಸದನಕ್ಕೆ ಬರುತ್ತೇನೆ, ಧೈರ್ಯ ಇದ್ರೆ ತಡೆಯಲಿ ಎಂದು ಸವಾಲು ಹಾಕಿದ್ದರು

ಶಾಸಕಿ ಖನೀಜ್ ಫಾತಿಮಾ

ಶಾಸಕಿ ಖನೀಜ್ ಫಾತಿಮಾ

  • Share this:
ಕರ್ನಾಟಕ ಹೈಕೋರ್ಟ್ (Karnataka Highcourt) ಮಧ್ಯಂತರ ಆದೇಶದ ನಡುವೆಯೂ ವಿದ್ಯಾರ್ಥಿನಿಯರು ಕಲಬುರಗಿ, ಕೊಪ್ಪಳ, ಶಿವಮೊಗ್ಗ ಜಿಲ್ಲೆಗಳಲ್ಲಿ ಹಿಜಾಬ್ (Hijab) ಧರಿಸಿಯೇ ಬಂದಿದ್ದರು. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಶಿಕ್ಷಕರು ಮಕ್ಕಳ ಹಿಜಾಬ್ ತೆಗೆಸಿದ್ದಾರೆ. ಆದ್ರೆ ಶಿವಮೊಗ್ಗ ನಗರದ ಸರ್ಕಾರಿ ಪ್ರೌಢ ಶಾಲೆಯ (Shivamogga Highschool) ವಿದ್ಯಾರ್ಥಿನಿಯರು ಅನುಮತಿ ನೀಡದಕ್ಕೆ ತರಗತಿಯಿಂದ ಹೊರಗೆ ನಡೆದಿದ್ದಾರೆ. ಈ ವಿದ್ಯಾರ್ಥಿನಿಯರು ಸಾಮಾನ್ಯವಾಗಿ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದು ತರಗತಿಗೆ ಹಾಜರಾಗುತ್ತಿದ್ದರು. ಆದ್ರೆ ಇಂದು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಪಟ್ಟು ಹಿಡಿದಿದ್ದರು. ಕೇವಲ ಎಂಟು ಮಕ್ಕಳು ಮಾತ್ರ ಪಟ್ಟು ಹಿಡಿದಿದೆ. ಇನ್ನುಳಿದ ಮಕ್ಕಳು ಹಿಜಾಬ್ ತೆಗೆದು ಪರೀಕ್ಷೆ (Exams) ಬರೆಯುತ್ತಿದ್ದಾರೆ ಎಂದು ಶಿವಮೊಗ್ಗ DDPI ರಮೇಶ್ ಹೇಳಿದ್ದಾರೆ.

ಅಧಿವೇಶನಕ್ಕೆ ಬುರ್ಕಾ ಧರಿಸಿ ಬಂದ ಶಾಸಕಿ ಖನೀಜ್ ಫಾತಿಮಾ

ಇತ್ತ ಹಿಜಾಬ್ ಬೆಂಬಲಿಸಿ ವಿದ್ಯಾರ್ಥಿನಿಯರ ನಡೆಯನ್ನು ಕಲಬುರಗಿ ಉತ್ತರ ಶಾಸಕಿ ಖನಿಜ್ ಫಾತಿಮಾ (MLA Khaneez Fatima) ಬುರ್ಕಾ, ಹಿಜಾಬ್ ಧರಿಸಿಯೇ ಕಲಾಪಕ್ಕೆ ಹಾಜರಾಗಿದ್ದರು. ಕೆಲ ದಿನಗಳ ಹಿಂದೆ ಹಿಜಾಬ್ ಧರಿಸಿಯೇ ಸದನಕ್ಕೆ ಬರುತ್ತೇನೆ, ಧೈರ್ಯ ಇದ್ರೆ ತಡೆಯಲಿ ಎಂದು ಸವಾಲು ಹಾಕಿದ್ದರು. ಹಾಕಿದ ಸವಾಲಿನಂತೆಯೇ ಇಂದು ಬುರ್ಕಾದ ಜೊತೆ ಹಿಜಾಬ್ ಧರಿಸಿದ್ದರು. ಈ ಹಿಂದಿನ ಅಧಿವೇಶನಗಳಲ್ಲಿ ಶಾಸಕಿ ಖನಿಜ್ ಫಾತಿಮಾ ಹಿಜಾಬ್ ಧರಿಸಿದ್ದರು.

ಇದನ್ನೂ ಓದಿ:  Hijab ಧರಿಸದೇ ಇದ್ದರೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ: ಜಮೀರ್ ವಿವಾದಾತ್ಮಕ ಹೇಳಿಕೆ..!

ಯ.ಟಿ.ಖಾದರ್ ವರ್ಸಸ್ ಪ್ರತಾಪ್ ಸಿಂಹ

ಮೂರ್ಖರ ಪ್ರಶ್ನೆಗೆ ಉತ್ತರ ಸಿಗುತ್ತಾ ಎಂಬ ಯು.ಟಿ.ಖಾದರ್ (UT Khader) ಹೇಳಿಕೆ‌ಗೆ ಸಂಸದ ಪ್ರತಾಪ್ ಸಿಂಹ (Pratap Simha) ತಿರುಗೇಟು ನೀಡಿದ್ದಾರೆ. ಉಳ್ಳಾಲದ ಮುಲ್ಲಾ ಈ ಯು.ಟಿ.ಖಾದರ್ ನಿಜವಾದ ಮೂರ್ಖ. ಉಳ್ಳಾಲದ‌ ಮುಲ್ಲಾ ಖಾದರ್‌ಗೆ, ಮೈಸೂರು ಇತಿಹಾಸದ ಬಗ್ಗೆ ಗೊತ್ತಿಲ್ಲ. ಮಹಾರಾಜರ ವಂಶಕ್ಕೆ ದ್ರೋಹ ಬಗೆದ ಹೈದರಾಲಿಯ ಮಗ ಟಿಪ್ಪು ಅಂತ ಗೊತ್ತಿಲ್ವ. ನಿಜವಾದ ಮೂರ್ಖತನ ಪ್ರದರ್ಶನ ಮಾಡ್ತಿರೋದು ಖಾದರ್ ಎಂದು ವಾಗ್ದಾಳಿ ನಡೆಸಿದರು.

ಇವರು ಮಾತು ಕೇಳಿದ್ರೆ ದೇಶವನ್ನು ತುಂಡು ತುಂಡು ಮಾಡ್ತಾರೆ

ಕೋರ್ಟ್ ತೀರ್ಪು ಬರುವವರೆಗೂ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯಬಾರದು. ಇವತ್ತು ಹಿಜಾಬ್ ಕೇಳ್ತಾರೆ, ನಾಳೆ ಬುರ್ಕಾ ಹಾಕೊಂಡು ಬರ್ತಾರೆ. ಶುಕ್ರವಾರ ಬಂದ್ರೆ ಶಾಲೆಯಲ್ಲೇ ನಮಾಜ್ ಮಾಡ್ತೀವಿ ಅಂತಾರೆ. ಕ್ಲಾಸ್ ರೂಂ‌ನಲ್ಲಿ ಪ್ರೇಯರ್‌‌ ಹಾಲ್ ಕಟ್ಟಿಸಿಕೊಡಿ ಅಂತಾರೆ.  ಮುಂದೊಂದು ದಿನ ದೇಶ ತುಂಡು ಮಾಡಿ ಅಂತಾರೆ. ಎಪ್ಪತ್ತು ವರ್ಷಗಳ ಹಿಂದೆ ಇವರೆಲ್ಲಾ ಇದನ್ನೇ ಮಾಡಿದ್ದು. ಇವರ ಒತ್ತಡಕ್ಕೆ ಮಣಿಯುತ್ತಾ ಹೋದರೆ ದೇಶವನ್ನ ತುಂಡರಿಸುತ್ತಾರೆ ಎಂದು ಗುಡುಗಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರ ಇದೆಯೊ ಇಲ್ಲವೋ. ಜಗತ್ತಿನ ಎಲ್ಲಾ ದೇಶಗಳಲ್ಲೂ ಸಮವಸ್ತ್ರ ಇದೆ. ಆ ಜಾತಿ, ಈ ಜಾತಿ , ಆ ಧರ್ಮ ಈ ಧರ್ಮ ಅಂತ ಭೇದಭಾವ ಇಲ್ಲದೆ ಸಮಾನವಾಗಿ ಜ್ಞಾನಾರ್ಜಾನೆ ಮಾಡಲು ಸಮವಸ್ತ್ರ ಜಾರಿಗೊಳಿಸಿವೆ.  ಇದನ್ನ ಅರ್ಥ ಮಾಡಿಕೊಳ್ಳುವ ಕನಿಷ್ಡ ಜ್ಞಾನ ಇಲ್ಲ ಅಂದ್ರೆ ಅದು ಖಾದರ್, ಕಾಂಗ್ರೆಸ್ ಸಮಸ್ಯೆ. ಅದು‌ ನಮ್ಮ ಸಮಸ್ಯೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  ನನ್ನ ವಿರುದ್ಧ ಆ ನಾಯಿಗಳ ಮೂಲಕ ಬೊಗಳಿಸುತ್ತಿರೋದೇಕೆ.. C.M.Ibrahim ‘ಉಗ್ರ’ ಮಾತು ಯಾರ ಬಗ್ಗೆ?

ತುಮಕೂರಿನಲ್ಲಿಯೂ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು

ತುಮಕೂರಿನ ಬನಶಂಕರಿ ವೃತ್ತದಲ್ಲಿರುವ ಎಸ್.ವಿ.ಎಸ್ ಶಾಲೆಗೆ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬಂದಿದ್ದಾರೆ. ಶಾಲಾ ಆಡಳಿತ ಮಂಡಳಿ ಹಿಜಾಬ್ ಧರಿಸಲು ಅನುಮತಿ ನೀಡದ ಹಿನ್ನೆಲೆ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಗಿದೆ. ಹಿಜಾಬ್ ತೆಗೆದು ತರಗತಿಗೆ ಒಪ್ಪಿದ ವಿದ್ಯಾರ್ಥಿನಿಯರನ್ನು ಬರಮಾಡಿಕೊಳ್ಳಲಾಗಿದೆ.
Published by:Mahmadrafik K
First published: