ಈಶ್ವರಪ್ಪನವರೇ ಎಷ್ಟು ಜನ ಕುರುಬರಿಗೆ ಎಂಎಲ್​ಎ ಟಿಕೆಟ್ ಕೊಟ್ಟು ಗೆಲ್ಲಿಸಿದ್ದೀರಿ?: ಬೈರತಿ ಸುರೇಶ್ ಪ್ರಶ್ನೆ

ಸಿದ್ದರಾಮಯ್ಯ ಜೊತೆಗೆ ನಾವು ನೀವು ಎಲ್ಲಾ ಹೋರಾಟ ಮಾಡೋಣ. ಆದರೆ ಕುರುಬ ಜನಾಂಗ ಒಡೆಯುವ ಕೆಲಸ ಮಾಡಬೇಡಿ. ಕುರುಬರ ನಾಯಕ ಯಾವತ್ತೂ ಇದ್ರೂ ಸಿದ್ದರಾಮಯ್ಯನವರೇ.  ಕುರುಬರ ಜನಾಂಗಕ್ಕೆ ಅವರ ಕೊಟ್ಟ ಕೊಡುಗೆ ಅಪಾರ.  ನಮ್ಮ ಜನಾಂಗದಲ್ಲಿ ಎಷ್ಟು ಜನರು ರಾಜಕೀಯವಾಗಿ ಇಂದು ಮೇಲೆ ಬಂದಿದ್ದಾರೆ. ಅದಕ್ಕೆಲ್ಲಾ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಹೇಳಿದರು.

ಭೈರತಿ ಸುರೇಶ್.

ಭೈರತಿ ಸುರೇಶ್.

 • Share this:
  ಬೆಂಗಳೂರು(ಡಿ.11): ಈಶ್ವರಪ್ಪನವರೇ ನೀವು ಎಷ್ಟು ಜನರಿಗೆ ಟಿಕೆಟ್​ ಕೊಡಿಸಿದ್ದೀರಿ? ಕುರುಬ ಸಮುದಾಯಕ್ಕೆ ಬಿಜೆಪಿಯ ಕೊಡುಗೆ ಏನು ಹೇಳಿ? ಈಶ್ವರಪ್ಪನವರೇ ಸಮಾಜಕ್ಕೆ ನಿಮ್ಮ ಕೊಡುಗೆ ಏನು? 8 ಜನ ಕುರುಬ ಶಾಸಕರು ಸಿದ್ದರಾಮಯ್ಯನವರ ಕೊಡುಗೆ. ಸಿದ್ದರಾಮಯ್ಯನವರು ಮೂವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದರು. ನೀವು ಎಷ್ಟು ಜನಕ್ಕೆ ಟಿಕೆಟ್ ಕೊಡಿಸಿದ್ದೀರಿ ಎಂದು ಶಾಸಕ ಬೈರತಿ ಸುರೇಶ್ ಸಚಿವ ಕೆ.ಎಸ್​. ಈಶ್ವರಪ್ಪನವರನ್ನು ಪ್ರಶ್ನೆ ಮಾಡಿದ್ದಾರೆ. 

  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿಯ ಕುಟಿಲ ರಾಜಕಾರಣಕ್ಕೆ ಬಲಿಯಾಗಬೇಡಿ ಎಂದರು. ಸರ್ಕಾರದಲ್ಲಿ ಇರುವ ಮಂತ್ರಿ ಸರ್ಕಾರದ ವಿರುದ್ಧವೇ ಹೋರಾಟ ಮಾಡುತ್ತಾರೆ. ಇದು ದೇಶದಲ್ಲೇ ಮೊದಲು. ಈಶ್ವರಪ್ಪ ಕ್ಯಾಬಿನೆಟ್​​ನಲ್ಲಿ ಇದ್ದಾರೆ. ಎಸ್ಟಿ ಹೋರಾಟಕ್ಕೆ ನಾವು ಸಿದ್ದವಿದ್ದೇವೆ. ಹೋರಾಟ ಮಾಡುವುದಾದರೆ ನಡೆಯಿರಿ ನಾವು ದೆಹಲಿಗೆ ಬರುತ್ತೇವೆ ಎಂದರು.

  ಮುಂದುವರೆದ ಸಾರಿಗೆ ನೌಕರರ ಮುಷ್ಕರ; ರಾಜ್ಯಾದ್ಯಂತ ರಸ್ತೆಗಿಳಿಯದ ಬಸ್​​ಗಳು; ಚನ್ನಪಟ್ಟಣದ ಬಳಿ ಬಸ್​​ಗೆ ಕಲ್ಲು ತೂರಾಟ

  ಸಿದ್ದರಾಮಯ್ಯ ಜೊತೆಗೆ ನಾವು ನೀವು ಎಲ್ಲಾ ಹೋರಾಟ ಮಾಡೋಣ. ಆದರೆ ಕುರುಬ ಜನಾಂಗ ಒಡೆಯುವ ಕೆಲಸ ಮಾಡಬೇಡಿ. ಕುರುಬರ ನಾಯಕ ಯಾವತ್ತೂ ಇದ್ರೂ ಸಿದ್ದರಾಮಯ್ಯನವರೇ.  ಕುರುಬರ ಜನಾಂಗಕ್ಕೆ ಅವರ ಕೊಟ್ಟ ಕೊಡುಗೆ ಅಪಾರ.  ನಮ್ಮ ಜನಾಂಗದಲ್ಲಿ ಎಷ್ಟು ಜನರು ರಾಜಕೀಯವಾಗಿ ಇಂದು ಮೇಲೆ ಬಂದಿದ್ದಾರೆ. ಅದಕ್ಕೆಲ್ಲಾ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಹೇಳಿದರು.

  ಈಶ್ವರಪ್ಪನವರೇ ಹೇಳಿ ಎಷ್ಟು ಕುರುಬರಿಗೆ ಎಂಎಲ್ಎ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದೀರಾ? ನೀವು ಮಾಡುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಸಿದ್ದರಾಮಯ್ಯ ಜೊತೆಗೆ ಬರುತ್ತಾರೆ ಎಂದರು.
  Published by:Latha CG
  First published: