ಪರಮೇಶ್ವರ್ ನಾಯ್ಕ್ ಓರ್ವ ನಾಲಾಯಕ್ ಸಚಿವ; ತಮ್ಮದೇ ಪಕ್ಷದ ಸಚಿವರ ವಿರುದ್ಧ ಶಾಸಕ ಭೀಮಾ ನಾಯ್ಕ್ ವಾಗ್ದಾಳಿ

ರೈತರ ಶಾಪ ತಟ್ಟಿದರೆ ಅವರು ಸರ್ವನಾಶವಾಗಿ ಹೋಗುತ್ತಾರೆ. ಅವರ ವಿರುದ್ಧ 10 ಸಾವಿರಕ್ಕೂ ಹೆಚ್ಚು ರೈತರನ್ನು ಕರೆಸಿ ಧರಣಿ ಮಾಡಿಸುತ್ತೇನೆ ಎಂದು ತಮ್ಮದೇ ಪಕ್ಷದ ಸಚಿವ ಪರಮೇಶ್ವರ್​ ನಾಯ್ಕ್ ವಿರುದ್ಧ ಕೈ ಶಾಸಕ ಭೀಮಾ ನಾಯ್ಕ್ ಹರಿಹಾಯ್ದಿದ್ದಾರೆ.

news18
Updated:June 26, 2019, 8:08 AM IST
ಪರಮೇಶ್ವರ್ ನಾಯ್ಕ್ ಓರ್ವ ನಾಲಾಯಕ್ ಸಚಿವ; ತಮ್ಮದೇ ಪಕ್ಷದ ಸಚಿವರ ವಿರುದ್ಧ ಶಾಸಕ ಭೀಮಾ ನಾಯ್ಕ್ ವಾಗ್ದಾಳಿ
ಭೀಮಾ ನಾಯ್ಕ್​
  • News18
  • Last Updated: June 26, 2019, 8:08 AM IST
  • Share this:
ಬಳ್ಳಾರಿ (ಜೂ. 26): ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಬಗ್ಗೆ ಕಿಡಿಕಾರಿರುವ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್, ಕಮಿಷನ್ ಆಸೆಗೆ ಏನು ಬೇಕಾದರೂ ಮಾಡುವ ಪರಮೇಶ್ವರ್​ ನಾಯ್ಕ್ ಓರ್ವ ನಾಲಾಯಕ್ ಸಚಿವ ಎಂದು ಜರಿದಿದ್ದಾರೆ.

ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯ ಜಾಕ್ವೆಲ್ ನಿರ್ಮಾಣಕ್ಕೆ 150 ಕೋಟಿ ರೂ. ಕಮಿಷನ್​ ಕೊಡಬೇಕು ಅಂತ ಸಚಿವ ಪರಮೇಶ್ವರ್​ ನಾಯ್ಕ್ ಕೇಳಿದ್ದಾರೆ. ಕಮಿಷನ್ ಕೊಟ್ಟರೆ ಮಾತ್ರ ಜಾಕ್ವೆಲ್ ನಿರ್ಮಾಣ ಎಂದು ಹೇಳುತ್ತಿದ್ದಾರೆ. ರೈತರ ಶಾಪ ತಟ್ಟಿದರೆ ಅವರು ಸರ್ವನಾಶವಾಗಿ ಹೋಗುತ್ತಾರೆ. ಅವರ ವಿರುದ್ಧ 10 ಸಾವಿರಕ್ಕೂ ಹೆಚ್ಚು ರೈತರನ್ನು ಕರೆಸಿ ಧರಣಿ ಮಾಡಿಸುತ್ತೇನೆ ಎಂದು ತಮ್ಮದೇ ಪಕ್ಷದ ಸಚಿವರ ವಿರುದ್ಧ ಕೈ ಶಾಸಕ ಭೀಮಾ ನಾಯ್ಕ್ ಹರಿಹಾಯ್ದಿದ್ದಾರೆ.

ಗ್ರಾಮವಾಸ್ತವ್ಯಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ವಿಚಾರ; ಬಿಜೆಪಿ ನಾಯಕರಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ ಎಚ್​ಡಿಕೆ

ಹಗರಿಬೊಮ್ಮನಹಳ್ಳಿಯಲ್ಲಿ ಸಾರ್ವಜನಿಕರ ಮುಂದೆ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ವಿರುದ್ದ ಆಕ್ರೋಶ ಹೊರಹಾಕಿರುವ ಭೀಮಾ ನಾಯ್ಕ್, ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಕಲ್ಪಿಸುವುದು ಸೂರ್ಯ-ಚಂದ್ರರಷ್ಟೇ ಸತ್ಯ. ಜಲಾಶಯಕ್ಕೆ ಶಾಶ್ವತ ನೀರು ಕಲ್ಪಿಸಲು ಒಟ್ಟು 19 ಕಿ.ಮೀನಷ್ಟು ಕಾಮಗಾರಿ ಮುಂದುವರಿದಿದೆ. ಈಗಾಗಲೇ ಅಗತ್ಯ ಪ್ರಮಾಣದ ಬೃಹತ್‌ ಪೈಪ್‌ಗಳು ಪೂರೈಕೆಯಾಗಿದೆ. ಒಟ್ಟು 17 ಕಿ.ಮೀ.ನಷ್ಟು ಪೈಪ್‌ ಜೋಡಿಸುವ ಕಾರ್ಯ ಪೂರ್ಣಗೊಂಡಿದೆ. ಆದರೆ, ಹೂವಿನಹಡಗಲಿಯ ರಾಜವಾಳ ಬಳಿ ಇಂಟೇಕ್‌ ಚಾನೆಲ್‌ ನಿರ್ಮಿಸಲು ಸಚಿವರು ಅಡ್ಡಪಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವರದಿ: ಶರಣು ಹಂಪಿ

 

First published: June 26, 2019, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading