ಬಿಜೆಪಿ ಔತಣಕೂಟದಲ್ಲಿ ಕಾಣಿಸಿಕೊಂಡ ಕೈ ನಾಯಕ; ಮತ್ತೆ ಶುರುವಾಗುತ್ತಾ ಆಪರೇಷನ್​ ಕಮಲ?

ನಿನ್ನೆ ರಾತ್ರಿ ಬಿಜೆಪಿ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್​ ಸಚಿವ ರಮೇಶ್​ ಜಾರಕಿಹೊಳಿಯ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ. ನಿನ್ನೆ ಸುವರ್ಣ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಗೈರಾಗಿರುವ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಔತಣಕೂಟಕ್ಕೆ ಹಾಜರಾಗಿರೋದು ಚರ್ಚೆಗೆ ಕಾರಣವಾಗಿದೆ.

Sushma Chakre | news18
Updated:December 20, 2018, 9:13 AM IST
ಬಿಜೆಪಿ ಔತಣಕೂಟದಲ್ಲಿ ಕಾಣಿಸಿಕೊಂಡ ಕೈ ನಾಯಕ; ಮತ್ತೆ ಶುರುವಾಗುತ್ತಾ ಆಪರೇಷನ್​ ಕಮಲ?
ಬಿಜೆಪಿ-ಕಾಂಗ್ರೆಸ್​ ಲೋಗೋ
  • News18
  • Last Updated: December 20, 2018, 9:13 AM IST
  • Share this:
ರಮೇಶ್​ ಹಿರೇಜಂಬೂರು

ಬೆಳಗಾವಿ (ಡಿ. 20): ಕಾಂಗ್ರೆಸ್​ ಪಾಳಯದಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚುತ್ತಿದ್ದಂತೆ ಮೈತ್ರಿ ಸರ್ಕಾರದ ನಾಯಕರಿಗೆ ತಲೆಬಿಸಿ ಹೆಚ್ಚಾಗತೊಡಗಿದೆ. ನಿನ್ನೆ ನಡೆದ ಬಿಜೆಪಿ ನಾಯಕರ ಔತಣಕೂಟಕ್ಕೆ ಸಚಿವ ರಮೇಶ ಜಾರಕಿಹೊಳಿ ಹಾಜರಾಗಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಹೀಗಾಗಿ, ರಾಜ್ಯದಲ್ಲಿ ಮತ್ತೆ ಆಪರೇಷನ್​ ಕಮಲ ಶುರುವಾಗಲಿದೆಯಾ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಬೆಳಗಾವಿ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್​ ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್​ ನಾಯಕ ರಮೇಶ್​ ಜಾರಕಿಹೊಳಿ ಮೈತ್ರಿ ಸರ್ಕಾರದ ನಾಯಕರ ವಿರುದ್ಧ ಸಾಕಷ್ಟು ಬಾರಿ ಬಹಿರಂಗವಾಗಿಯೇ ಮಾತನಾಡಿದ್ದರು. ಸಿದ್ದರಾಮಯ್ಯನವರ ಬಣ ಎಂದೇ ಗುರುತಿಸಿಕೊಂಡಿದ್ದ ಜಾರಕಿಹೊಳಿ ಸಹೋದರರ ಮನವೊಲಿಸುವುದು ಸಿಎಂ ಕುಮಾರಸ್ವಾಮಿಯವರಿಗೂ ಸವಾಲಿನ ಕೆಲಸವಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಪ್ರಭಾವಶಾಲಿ ನಾಯಕರಾಗಿ ಗುರುತಿಸಿಕೊಂಡಿರುವ ಸಚಿವ ರಮೇಶ್​ ಜಾರಕಿಹೊಳಿ ಮತ್ತು ಶಾಸಕ ಸತೀಶ್​ ಜಾರಕಿಹೊಳಿ ಮೈತ್ರಿ ಸರ್ಕಾರದ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದರು.

ಇದನ್ನೂ ಓದಿ: ಕೈ ಮುಖಂಡರಿಗೆ ಸವಾಲಾದ ಅತೃಪ್ತರ ಬಂಡಾಯ; ಸಂಪುಟ ವಿಸ್ತರಣೆ ಜೊತೆಗೆ ಆಗಲಿದೆಯೇ ಮೇಜರ್​ ಸರ್ಜರಿ?

ಸುಮಾರು 15ಕ್ಕೂ ಹೆಚ್ಚು ವರ್ಷಗಳಿಂದ ಬೆಳಗಾವಿ ಭಾಗದಲ್ಲಿ ಪ್ರಾಬಲ್ಯ ಸಾಧಿಸಿರುವ ಜಾರಕಿಹೊಳಿ ಸಹೋದರರು ಅತೃಪ್ತ ಬಣದಲ್ಲಿ ಸೇರಿಕೊಂಡಿರುವುದು ಕಾಂಗ್ರೆಸ್​-ಜೆಡಿಎಸ್​ ನಾಯಕರಿಗೆ ನುಂಗಲಾರದ ತುತ್ತಾಗಿರುವುದು ಸುಳ್ಳಲ್ಲ. ಅಲ್ಲದೆ, ಹದಿನೈದು ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ 'ಈ ಬಾರಿಯ ಬೆಳಗಾವಿ ಅಧಿವೇಶನ ಪೂರ್ತಿ ಮುಗಿಯುವುದಿಲ್ಲ. ಶಾಸಕರ ಒಂದು ತಂಡ ಅಧಿವೇಶನದಲ್ಲಿ ಭಾಗಿಯಾಗುವುದಿಲ್ಲ. ಈಗಾಗಲೇ ಬೆಳಗಾವಿ ಮತ್ತು ಚಿಕ್ಕಬಳ್ಳಾಪುರದ ತೋಳಗಳು ನಮ್ಮ ಗುಹೆಯೊಳಗೆ ಸೇರಿಕೊಂಡಿವೆ. ಅವು ಹೊರಬರುವುದಷ್ಟೇ ಬಾಕಿಯಿದೆ. ಮುಂದೇನಾಗುತ್ತದೆ ಎಂಬುದನ್ನು ನೋಡಲು ಅಧಿವೇಶನದವರೆಗೆ ಕಾದುನೋಡಿ' ಎಂದು ಹೇಳುವ ಮೂಲಕ ಕಾಂಗ್ರೆಸ್​ ನಾಯಕರು ಬಿಜೆಪಿ ಜೊತೆ ಕೈಸೇರಿಸಿರುವ ಸುಳಿವು ಕೊಟ್ಟಿದ್ದರು.

ನಿಜವಾಯ್ತಾ ಡಿವಿಎಸ್​ ಭವಿಷ್ಯ?:

ಇದೀಗ, ಅದಕ್ಕೆ ಪುಷ್ಠಿ ನೀಡುವಂತೆ ಬೆಳಗಾವಿ ಶಾಸಕ ಹಾಗೂ ಸಚಿವ ರಮೇಶ್​ ಜಾರಕಿಹೊಳಿ ಬಿಜೆಪಿ ನಾಯಕರ ಔತಣಕೂಟದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ್ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟದಲ್ಲಿ ಬಿ.ಎಸ್. ಯಡಿಯೂರಪ್ಪ, ಕೆ.ಎಸ್..ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್, ಉಮೇಶ್ ಕತ್ತಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಈ ವೇಳೆ ರಮೇಶ್​ ಜಾರಕಿಹೊಳಿ ಯಡಿಯೂರಪ್ಪ ಜೊತೆಗೆ ಒಂದೇ ಟೇಬಲ್ ನಲ್ಲಿ ಕುಳಿತು ಮಾತುಕತೆ ನಡೆಸಿದ್ದಾರೆ.ಇದನ್ನೂ ಓದಿ: 'ಎಲ್ಲದಕ್ಕೂ ಕಾಲ ಕೂಡಿಬಂದಿದೆ, ಬೆಳಗಾವಿ ಅಧಿವೇಶನದ ನಂತರ ಸರ್ಕಾರ ಬಿದ್ದೇ ಬೀಳುತ್ತೆ'; ಸದಾನಂದ ಗೌಡ ವಿಶ್ವಾಸ

ಡಿಕೆಶಿ ಔತಣಕೂಟಕ್ಕೆ ಗೈರಾಗಿದ್ದ ಜಾರಕಿಹೊಳಿ:

ಇತ್ತೀಚೆಗಷ್ಟೇ ಸಚಿವ ಡಿ.ಕೆ. ಶಿವಕುಮಾರ್ ಕೂಡ ಔತಣಕೂಟ ಏರ್ಪಡಿಸಿದ್ದರು. ಆ ಔತಣಕೂಟಕ್ಕೆ ಸಚಿವ ರಮೇಶ್ ಜಾರಕಿಹೊಳಿ ಗೈರಾಗಿದ್ದರು. ಆದರೆ, ನಿನ್ನೆ ರಾತ್ರಿ ಬಿ.ಎಸ್​. ಯಡಿಯೂರಪ್ಪ, ಶಾಸಕ ಉಮೇಶ್ ಕತ್ತಿ, ಸಚಿವ ರಮೇಶ್ ಜಾರಕಿಹೊಳಿ ಒಂದೇ ಟೇಬಲ್ ನಲ್ಲಿ ಸುಮಾರು 15 ನಿಮಿಷಗಳ‌ ಕಾಲ ಕುಳಿತು ಮಾತುಕತೆ ಮಾಡಿರುವ ಸುದ್ದಿ ಹೊರಬಿದ್ದಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಇದು ಮೈತ್ರಿ ಸರ್ಕಾರದ ನಿದ್ದೆಗೆಡಿಸಿದೆ. ನಿನ್ನೆ ಸುವರ್ಣ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಗೈರಾಗಿರುವ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಔತಣ ಕೂಟಕ್ಕೆ ಹಾಜರಾಗಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: '6 ತಿಂಗಳಿನಿಂದ ಭೂಕಂಪ ಆಗ್ತಾನೇ ಇದೆ'; ಜಾವಡೇಕರ್ ಧಮಾಕಾ ಹೇಳಿಕೆಗೆ ಎಚ್ಡಿಕೆ ಸೇರಿ ಮೈತ್ರಿ ನಾಯಕರ ತಿರುಗೇಟು

ಇದರಿಂದಾಗಿ, ಮತ್ತೆ ಆಪರೇಷನ್​ ಕಮಲ ಶುರುವಾಗಲಿದೆಯಾ? ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಸಚಿವ ರಮೇಶ್​ ಜಾರಕಿಹೊಳಿಯವರನ್ನು ಮುಂದಿಟ್ಟುಕೊಂಡು ಆಟವಾಡಲು ಬಿಜೆಪಿ ನಿರ್ಧರಿಸಿದೆಯಾ? ಎಂಬ ಬಗ್ಗೆಯೂ ಚರ್ಚೆಗಳು ಶುರುವಾಗಿವೆ. ಡಿ. 22ರಂದು ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿರುವ ಕಾಂಗ್ರೆಸ್​ ನಾಯಕರು ಆ ಮಾತಿನಂತೆ ನಡೆದುಕೊಳ್ಳದಿದ್ದರೆ ಪಕ್ಷ ತೊರೆಯಲು ಕೈ ಶಾಸಕರು ಸಿದ್ಧರಾಗಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಕಾಂಗ್ರೆಸ್​ನ 20 ಶಾಸಕರು ಇಂದಿಗೂ ಬಿಜೆಪಿ ಜೊತೆಗೆ ಸಂಪರ್ಕದಲ್ಲಿದ್ದಾರೆ, ಕಾಂಗ್ರೆಸ್​ ಕೈ ಕೊಟ್ಟರೆ ಬಿಜೆಪಿ ಸೇರಲು ರೆಬೆಲ್​ ಶಾಸಕರು ಸಿದ್ಧವಾಗಿದ್ದಾರೆ ಎಂಬ ಸುದ್ದಿಯೂ ಹರಡಿದೆ.

  
First published:December 20, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading