ಜೆಡಿಎಸ್​ ವ್ಯವಹಾರದಲ್ಲಿ ನಾವು ಮೂಗು ತೂರಿಸಿದರೆ ಸರಿ ಇರುತ್ತಾ?; ಹೊರಟ್ಟಿಗೆ ತಿರುಗೇಟು ನೀಡಿದ ಸಚಿವ ದೇಶಪಾಂಡೆ

ಮುಂದಿನ ಚುನಾವಣೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಆಗಬೇಕು‌. ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಆಕಾಂಕ್ಷೆ- ಆರ್​.ವಿ.ದೇಶಪಾಂಡೆ

Latha CG | news18
Updated:May 8, 2019, 10:51 AM IST
ಜೆಡಿಎಸ್​ ವ್ಯವಹಾರದಲ್ಲಿ ನಾವು ಮೂಗು ತೂರಿಸಿದರೆ ಸರಿ ಇರುತ್ತಾ?; ಹೊರಟ್ಟಿಗೆ ತಿರುಗೇಟು ನೀಡಿದ ಸಚಿವ ದೇಶಪಾಂಡೆ
ಸಚಿವ ಆರ್​.ವಿ. ದೇಶಪಾಂಡೆ
  • News18
  • Last Updated: May 8, 2019, 10:51 AM IST
  • Share this:
ಹುಬ್ಬಳ್ಳಿ,(ಮೇ 08): ಬಸವರಾಜ್ ಹೊರಟ್ಟಿಯವರು ಇನ್ನೊಂದು ಪಕ್ಷದ ವ್ಯವಹಾರದಲ್ಲಿ ಕೈ ಹಾಕಬಾರದು‌. ಯಾರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವುದು ಆಯಾ ಪಕ್ಷಕ್ಕೆ ಬಿಟ್ಟಿದ್ದು. ಜೆಡಿಎಸ್ ವ್ಯವಹಾರದಲ್ಲಿ ನಾವು ಮೂಗು ತೂರಿಸಿದರೆ ಸರಿ ಇರುತ್ತಾ? ಎಂದು ಸಚಿವ ಆರ್​.ವಿ.ದೇಶಪಾಂಡೆ ಬಸವರಾಜ್ ಹೊರಟ್ಟಿಗೆ ತಿರುಗೇಟು ನೀಡಿದ್ದಾರೆ.

ರಮೇಶ್​ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಕಾಂಗ್ರೆಸ್​ ತಪ್ಪು ಮಾಡಿದೆ ಎಂದು ಜೆಡಿಎಸ್​ ನಾಯಕ ಬಸವರಾಜ್​ ಹೊರಟ್ಟಿಯವರು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ದೇಶಪಾಂಡೆ, ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ. ಇನ್ನೊಂದು ಪಕ್ಷದ ವ್ಯವಹಾರದಲ್ಲಿ ಮೂಗು ತೂರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಂಪುಟದಿಂದ ರಮೇಶ್​ ಜಾರಕಿಹೊಳಿ ಕೈ ಬಿಟ್ಟಿದ್ದು ತಪ್ಪು; ಕಾಂಗ್ರೆಸ್​ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಜೆಡಿಎಸ್​ ನಾಯಕ ಹೊರಟ್ಟಿ

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,  ಸಿದ್ದರಾಮಯ್ಯನವರು ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ನೋಡಿದರೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಬೇಕಿತ್ತು. ಈ ಅವಧಿಗೆ ಜೆಡಿಎಸ್ ಮುಖ್ಯಮಂತ್ರಿ ಇರಬೇಕು ಎಂದು ಒಪ್ಪಂದವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ಚುನಾವಣೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಆಗಬೇಕು‌. ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಆಕಾಂಕ್ಷೆ ಎಂದರು.

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಎಲ್ಲ ಅರ್ಹತೆ ಹೊಂದಿದ್ದಾರೆ. ಸಿದ್ದರಾಮಯ್ಯ ಮತ್ತು ನಾನು ಅಣ್ಣತಮ್ಮಂದಿರ ಹಾಗೆ ಇದ್ದೇವೆ‌‌.  ಇನ್ನೊಮ್ಮೆ ಸಿಎಂ ಆಗಬೇಕೆಂದು ಅವರು ನನ್ನ ಬಳಿ ಇವತ್ತಿನವರೆಗೆ ಪ್ರಸ್ತಾಪ ಮಾಡಿಲ್ಲ‌. ನನಗೂ ಸಿಎಂ ಆಗಬೇಕು ಎನ್ನುವ ಆಕಾಂಕ್ಷೆಯಿದೆ‌. ಹಾಗಂತ ವಿವಾದ ಮಾಡುವುದು ಸರಿಯಲ್ಲ, ಕುಳಿತು ಚರ್ಚೆ ಮಾಡಬೇಕಾಗುತ್ತದೆ. ಯಡಿಯೂರಪ್ಪ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಪಾಪ ಚುನಾವಣೆ ಆದಾಗಿಂದ ಕನಸು ಕಾಣುತ್ತಲೇ ಇದ್ದಾರೆ ಎಂದು ವ್ಯಂಗ್ಯ ಮಾಡಿದರು.

ಆದರೆ ಮೈತ್ರಿ ಸರ್ಕಾರ ಭದ್ರವಾಗಿದೆ. ಜಾತಿ ಮೇಲೆ ಬಿಜೆಪಿಯವರು ಓಟು ಕೇಳಿದರೆ, ಅದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ. ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
First published: May 8, 2019, 10:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading