• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಸದನದಲ್ಲಿ ಭುಗಿಲೆದ್ದ ಗದ್ದಲ; ಬ್ಲೂ ಬಾಯ್ಸ್ ಎಂದು ಘೋಷಣೆ ಕೂಗಿದ ಕೈ ಸದಸ್ಯರು; ನಾಳೆಗೆ ಸದನ ಮುಂದೂಡಿಕೆ

ಸದನದಲ್ಲಿ ಭುಗಿಲೆದ್ದ ಗದ್ದಲ; ಬ್ಲೂ ಬಾಯ್ಸ್ ಎಂದು ಘೋಷಣೆ ಕೂಗಿದ ಕೈ ಸದಸ್ಯರು; ನಾಳೆಗೆ ಸದನ ಮುಂದೂಡಿಕೆ

ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರ ಪ್ರತಿಭಟನೆ.

ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರ ಪ್ರತಿಭಟನೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತಾಡಿ, ಈಗಾಗಲೇ ಈ ಪ್ರಕರಣದ ಬಗ್ಗೆ ಎಲ್ಲಾ ಉತ್ತರ ಕೊಡಲಾಗಿದೆ. ಇವರು ರಾಜಕಾರಣವನ್ನು ಮಾಡ್ತಿದ್ದಾರೆ. ಇವರ ಕಾಲದಲ್ಲಿ ಆಗಿರೋದೆಲ್ಲ ಗೊತ್ತಿದೆ. ಇವರೇನು ಸತ್ಯ ಹರಿಶ್ಚಂದ್ರರಲ್ಲ. ಕಾಂಗ್ರೆಸ್ ಸದಸ್ಯರ ವಿರುದ್ಧ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

 • Share this:

  ಬೆಂಗಳೂರು: ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭವಾಗಿದ್ದು, ಸಿಡಿ ವಿಷಯವಾಗಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಮುಂದುವರೆಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ವಿರುದ್ಧ ಜೆಡಿಎಸ್ ಕಿಡಿ ಕಾರಿದೆ. ಎರಡು ರಾಷ್ಟ್ರೀಯ ಪಕ್ಷಗಳ ರಾಜಕಾರಣದಿಂದ ಕಲಾಪ ಬಲಿಯಾಗ್ತಿದೆ. ನಾವು ರಾಜ್ಯದ ಜನರ ಸಮಸ್ಯೆ ಗಳ ಬಗ್ಗೆ ಚರ್ಚೆ ಮಾಡಬೇಕು. ಇದಕ್ಕೆ ಅವಕಾಶ ಮಾಡಿಕೊಡ್ತಿಲ್ಲ ಎಂದು ಜೆಡಿಎಸ್ ಸದಸ್ಯರು ಕೂಡ ಧರಣಿಗೆ ಮುಂದಾದರು. ಬಳಿಕ ಸಭಾತ್ಯಾಗ ಮಾಡಿದರು. 


  ಕಾಂಗ್ರೆಸ್ ಸದಸ್ಯರ ಧರಣಿ ಮುಂದುವರೆದಿದ್ದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ನಡುವೆ 2021ನೇ ಸಾಲಿನ ಕರ್ನಾಟಕ ಸೊಸೈಟಿಗಳ ನೋಂದಣಿ ತಿದ್ದುಪಡಿ ವಿಧೇಯಕ ಅಂಗೀಕಾರವಾಯಿತು. ಸದನದ ಗದ್ದಲದ ನಡುವೆಯೂ 2020-21ನೇ ಸಾಲಿನ ಪೂರಕ ಅಂದಾಜುಗಳ ಪಟ್ಟಿ ಹಾಗೂ 2021ನೇ ಸಾಲಿನ ಕರ್ನಾಟಕ ಜಲ ಸಾರಿಗೆ ಮಂಡಳಿ ವಿಧೇಯಕ ಅಂಗೀಕಾರ ಮಂಡನೆ ಮಾಡಲಾಯಿತು. ಬಿಜೆಪಿ ಸದಸ್ಯರು ಸಹ ಕೈ ಶಾಸಕರ ವಿರುದ್ದ ಆಕ್ರೋಶ ಹೊರಹಾಕಿದರು. ಸಭಾಧ್ಯಕ್ಷರೇ ಅವರನ್ನು ಹೊರಗೆ ಹಾಕ್ರಿ ಎಂದು ಕಿಡಿಕಾರಿದರು.


  ಸ್ಪೀಕರ್ ಕಾಗೇರಿ ಅವರು ಕಾಂಗ್ರೆಸ್ ಸದಸ್ಯರಿಗೆ ಎಷ್ಟೇ ಮನವಿ ಮಾಡಿದರು ಅವರು ತಮ್ಮ ಧರಣಿ ಹಿಂಪಡೆಯಲಿಲ್ಲ. ಈಗಲಾದರೂ ಬಂದು ಕುಳಿತುಕೊಳ್ಳಿ. ಪ್ರಶ್ನೋತ್ತರ ಕಲಾಪ ಇದೆ.  ಇದನ್ನು ನಡೆಸಲು ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್ ಸದಸ್ಯರಿಗೆ ಸ್ಪೀಕರ್ ಕಾಗೇರಿ ಸೂಚಿಸಿದರು. ಈ ವೇಳೆ ಕೈ ಸದಸ್ಯರು ಬಾಯಿ ಬಡಿದು ಕೂಗಿಕೊಂಡರು.


  ಸಿಡಿ ವಿಷಯವಾಗಿ ಈಗಾಗಲೇ ನೀವು ಸದನದಲ್ಲಿ ಏನನ್ನು ಹೇಳಬೇಕಿತ್ತೋ ಅದನ್ನು ಹೇಳಿದ್ದೀರಿ. ಇನ್ನು ನಿಮ್ಮ ಅಸಮಾಧಾನ ಇದ್ದರೆ ಅದನ್ನು ಸದನ ಹೊರಗೆ ಇಟ್ಟುಕೊಳ್ಳಿ. ಅದನ್ನು ಬಿಟ್ಟು ಹೀಗೆ ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸರ್ಕಾರದಲ್ಲಿ ಯಾವುದಾದರೂ ಭಿನ್ನಾಭಿಪ್ರಾಯ ಇದ್ರೆ ಸದನ ಹೊರಗೆ ಹೋಗಿ ಬಗೆಹರಿಸಿಕೊಳ್ಳಿ. ಅದು ಬಿಟ್ಟು ಇಲ್ಲಿ ಯಾಕೆ ಅದನ್ನು ತಂದು ಗಲಾಟೆ ಮಾಡ್ತಿದ್ಸೀರಾ ಎಂದು ಸ್ಪೀಕರ್ ಹೇಳಿದರು.


  ಇದನ್ನು ಓದಿ: Covid Vaccine: ಏಪ್ರಿಲ್​ 1ರಿಂದ 45ವರ್ಷ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ; ಸಚಿವ ಪ್ರಕಾಶ್​ ಜಾವಡೇಕರ್​


  ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತಾಡಿ, ಈಗಾಗಲೇ ಈ ಪ್ರಕರಣದ ಬಗ್ಗೆ ಎಲ್ಲಾ ಉತ್ತರ ಕೊಡಲಾಗಿದೆ. ಇವರು ರಾಜಕಾರಣವನ್ನು ಮಾಡ್ತಿದ್ದಾರೆ. ಇವರ ಕಾಲದಲ್ಲಿ ಆಗಿರೋದೆಲ್ಲ ಗೊತ್ತಿದೆ. ಇವರೇನು ಸತ್ಯ ಹರಿಶ್ಚಂದ್ರರಲ್ಲ. ಕಾಂಗ್ರೆಸ್ ಸದಸ್ಯರ ವಿರುದ್ಧ ಬೊಮ್ಮಾಯಿ ವಾಗ್ದಾಳಿ ನಡೆಸಿದರು.


  ಎಚ್.ವೈ. ಮೇಟಿ ಪ್ರಕರಣವನ್ನು ಇವರ ಕಾಲದಲ್ಲಿ ಸಿಐಡಿಗೆ ವಹಿಸಿ ತನಿಖೆ ಮಾಡಿಸಿದ್ದಾರೆ. ತನಿಖೆಯ ವರದಿಯನ್ನು ಸರ್ಕಾರಕ್ಕೆ ಕೊಡಬೇಕು ಅಂತಾ ಕೇಳಿದ್ರು. ಇವಾಗ ನಾವು ಮಾಡಿರೋ ಎಸ್ಐಟಿ ಮೇಲೆ ಅನುಮಾನ ಪಡ್ತೀರಲ್ಲಾ. ನಿಮಗೊಂದು ನ್ಯಾಯ, ನಮಗೊಂದು‌ ನ್ಯಾಯನಾ..? ಎಂದು ಪ್ರಶ್ನಿಸಿದ ಬೊಮ್ಮಾಯಿ ಅವರು ಮಾಜಿ ಸಚಿವ ಹೆಚ್ ವೈ ಮೇಟಿ ತನಿಖೆಯ ದಾಖಲೆ ಪ್ರದರ್ಶಿಸಿ ಕೈ ನಾಯಕರಿಗೆ ತಿರುಗೇಟು ಕೊಟ್ಟರು. ಈ ವೇಳೆ ಬಿಜೆಪಿಗರನ್ನು ಕಾಂಗ್ರೆಸ್​ ಶಾಸಕರು ಬ್ಲೂ ಬಾಯ್ಸ್, ಬ್ಲೂ ಬಾಯ್ದ್, ಬ್ಲೂ ಬಾಯ್ಸ್ ಎಂದು ಘೋಷಣೆ ಕೂಗಿದರು.

  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು