ವಿಜಯಪುರ-ಬಾಗಲಕೋಟೆ ಪರಿಷತ್​ ಚುನಾವಣೆಯಲ್ಲಿ 'ಕೈ' ಅಭ್ಯರ್ಥಿ ಸುನೀಲ್​ ಗೌಡ ಬಿ. ಪಾಟೀಲ್​ಗೆ ಗೆಲುವು


Updated:September 11, 2018, 11:03 AM IST
ವಿಜಯಪುರ-ಬಾಗಲಕೋಟೆ ಪರಿಷತ್​ ಚುನಾವಣೆಯಲ್ಲಿ 'ಕೈ' ಅಭ್ಯರ್ಥಿ ಸುನೀಲ್​ ಗೌಡ ಬಿ. ಪಾಟೀಲ್​ಗೆ ಗೆಲುವು

Updated: September 11, 2018, 11:03 AM IST
ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ಸೆ.11): ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ನ ಒಂದು ಸ್ಥಾನಕ್ಕೆ ನಡೆದ​ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಜೆಡಿಎಸ್​ ಬೆಂಬಲಿತ ಕಾಂಗ್ರೆಸ್​ ಅಭ್ಯರ್ಥಿ ಸುನಿಲ್​ಗೌಡ ಬಿ. ಪಾಟೀಲ್​ 1975ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಸನಗೌಡ ರಾ. ಪಾಟೀಲ ಯತ್ನಾಳ ರಾಜೀನಾಮೆಯಿಂದ ತೆರವಾಗಿದ್ದ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇಂದು ಬೆಳಗ್ಗೆ ಇಲ್ಲಿನ ದರಬಾರ್​ ಹೈಸ್ಕೂಲಿನಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿತ್ತು. ಇದೀಗ ಈ ಚುನಾವವಣೆಯ ಫಿತಾಂಶ ಹೊರಬಿದ್ದಿದ್ದು, ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಬಿ. ಪಾಟೀಲ್ ಸುಮಾರು 1,975 ಕ್ಕೂ‌ ಹೆಚ್ಚು ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸಮೀಪದ ಪ್ರತಿಸ್ಪರ್ಧಿ
ಬಿಜೆಪಿ‌ ಅಭ್ಯರ್ಥಿ ಗೂಳಪ್ಪ ಶೆಟಗಾರ್​ಗೆ ಸೋಲಾಗಿದೆ.

ಮತ ಎಣಿಕೆ ಹಿನ್ನೆಲೆಯಲ್ಲಿ ದರಬಾರ್​ ಹೈಸ್ಕೂಲ್ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಿಜಯಪುರ ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೂಳಪ್ಪ ಶೆಟಗಾರ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಭ್ಯರ್ಥಿಯಾಗಿ ಮಾಜಿ ಸಚಿವ ಎಂ. ಬಿ. ಪಾಟೀಲ ತಮ್ಮ ಸುನಿಲಗೌಡ ಬಿ. ಪಾಟೀಲ ಸೇರಿ ಒಟ್ಟು 7 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಇಂದು ಮಧ್ಯಾಹ್ನದ ವೇಳೆಗೆ ಬೊರಬೀಳುವ ನೀರಿಕ್ಷೆಗಳಿವೆ. ಇನ್ನು ಈ ಚುನಾವಣೆಯಲ್ಲಿ ಶೇ. 99.07 ರಷ್ಟು ಮತದಾನ ದಾಖಲಾಗಿದ್ದು ಗಮನಾರ್ಹ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ