Mekedatu Padayatra: ಇಂದಿನಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಕಾವೇರಿ ನದಿಗೆ ಡಿಕೆಶಿ ಪೂಜೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಕನಕಪುರ ಸಂಗಮದ ಕಾವೇರಿ ನದಿಯಲ್ಲಿ (Cauvery River) ಪುಣ್ಯ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಸಂಗಮದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಅದರ ಪಕ್ಕದಲ್ಲಿಯೇ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಲಾಗುತ್ತದೆ.

ಮೇಕೆದಾಟು ಪಾದಯಾತ್ರೆ

ಮೇಕೆದಾಟು ಪಾದಯಾತ್ರೆ

  • Share this:
Congress Mekedatu Padayatra: ಇಂದಿನಿಂದ ಕಾಂಗ್ರೆಸ್ ಆಯೋಜಿತ ಮೇಕೆದಾಟು ಪಾದಯಾತ್ರೆ ಆರಂಭಗೊಳ್ಳಲಿದೆ. ಕನಕಪುರ ಸಂಗಮದಲ್ಲಿ (Sangama, Kanakapura) ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಲಿದೆ. ಈಗಾಗಲೇ ಸ್ಥಳಕ್ಕೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಕನಕಪುರ ಸಂಗಮದ ಕಾವೇರಿ ನದಿಯಲ್ಲಿ (Cauvery River) ಪುಣ್ಯ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಸಂಗಮದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಅದರ ಪಕ್ಕದಲ್ಲಿಯೇ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಲಾಗುತ್ತದೆ, ಪೂಜೆ ಸಲ್ಲಿಸಿದ ಬಳಿಕ ದೀಪ ಬೆಳಗುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ.

ನಿನ್ನೆ ರಾತ್ರಿಯೇ ಕನಕಪುರ ತಲುಪಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಂಗಮ ತಲುಪಿದ್ದಾರೆ. ಕನಕಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ನಾವು ಕಾನೂನು ಭಂಗ ಮಾಡಲ್ಲ. ಕೊವೀಡ್ ನಿಯಮದ ಪ್ರಕಾರವೇ ನಾವು ಪಾದಯಾತ್ರೆ ಮಾಡಲಾಗುತ್ತದೆ. ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಬರ್ತಿರೋದು ನಮ್ಮ ಪಾದಯಾತ್ರೆಗೆ ಭದ್ರತೆ ಒದಗಿಸಲು. ನಾವು ಎರಡು ತಿಂಗಳ ಹಿಂದೆಯೇ ಪಾದಯಾತ್ರೆ ಮಾಡೋದಾಗಿ ಹೇಳಿದ್ದೀವಿ. ಈಗ ವೀಕೆಂಡ್ ಕರ್ಫ್ಯೂ ತಂದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ:  ಅಯ್ಯೋ ಯಾಕ್ ಹೋಗಿ ಸಾಯ್ತಿರಾ, ಚಂಡಿ ಹಠ ಬಿಡಿ.. ಸಿದ್ದರಾಮಯ್ಯ-ಡಿಕೆಶಿಗೆ BJP Leaders ವ್ಯಂಗ್ಯ

ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ರಾಜ್ಯದ ಹಿತದೃಷ್ಟಿಯಿಂದ ಈ ಯೋಜನೆ ಮಾಡುತ್ತಿದ್ದೇವೆ, ಹೊರತು, ರಾಜಕಾರಣಕ್ಕೆ ಅಲ್ಲ. ಬಿಜೆಪಿಯವರ ಆರೋಪ ಶುದ್ಧ ಸುಳ್ಳು. ಕೊವೀಡ್ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಕೊವೀಡ್ ಗೆ ಇಡೀ ರಾಜ್ಯದಲ್ಲಿ ನಿರ್ಬಂಧ ಹಾಕಬೇಕಿತ್ತು.ಯಾಕೆ ೧೪೪ ಸಕ್ಸನ್ ರಾಮನಗರದಲ್ಲಿ ಹಾಕಿದ್ಸಾರೆ..? ಈ ರೀತಿಯ ತಂತ್ರದ ಮೂಲಕ ಪಾದಯಾತ್ರೆ ತಡೆಯಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

BJPಯಿಂದ ಪಾದಯಾತ್ರೆ ತಡೆಯುವ ಹುನ್ನಾರ

ನಾವು ಸರ್ಕಾರ ನಡೆಸಿದವರು ಕಾನೂನುಗಳ ಬಗ್ಗೆ ನಮಗೂ ಗೊತ್ತಿದೆ. ಕೋವಿಡ್ ಮಾರ್ಗಸೂಚಿ ಯಂತೆ ಪಾದಯಾತ್ರೆ ಮಾಡ್ತೀವಿ, ನಿಮಗೇನು ತೊಂದರೆ? ಇವರು ಯೋಜನೆಯಲ್ಲಿ ಮಾಡಿರುವ ಅನ್ಯಾಯ ಜನರಿಗೆ ತಿಳಿಸಬೇಕಾ ಬೇಡ್ವಾ..? ಅದಕ್ಕಾಗಿ ನಾವು ಈ ಪಾದಯಾತ್ರೆ ಮಾಡ್ತಿದ್ದೇವೆ. ಬಿಜೆಪಿಯವರು ಷಡ್ಯಂತ್ರ ಮಾಡಿದ್ರೆ, ಜನರು ಹಾಗೂ ನಾವು ಅವರಿಗೆ ಉತ್ತರ ಕೊಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ,

ಇಂದು ರಾತ್ರಿ ದೊಡ್ಡಾಲಹಳ್ಳಿಯಲ್ಲಿ ವಾಸ್ತವ್ಯ

ಇಂದು ಪ್ರಾರಂಭವಾಗುವ ಪಾದಯಾತ್ರೆ 6.5 ಕಿ. ಮೀ. ದೂರ ಸಾಗಿ ಹೆಗ್ಗನೂರು ಬಳಿ ಮಧ್ಯಾಹ್ನದ ಭೋಜನ ಮುಗಿಸಿ ಮತ್ತೆ 8.5 ಕಿ. ಮೀ. ಸಾಗಿ ಡಿ.ಕೆ.ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮ ತಲುಪಲಿದೆ. ಸಭೆಯ ಬಳಿಕ ಅಲ್ಲೇ ಎಲ್ಲರೂ ವಾಸ್ತವ್ಯ ಹೂಡಲಿದ್ದಾರೆ. ಜನವರಿ  19 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಮುಕ್ತಾಯವಾಗಲಿದೆ.

ಇದನ್ನೂ ಓದಿ:  ಕನಕಪುರದಲ್ಲಿ Congress ನಾಯಕರ ಸಭೆ: ಮೇಕೆದಾಟು ಪಾದಯಾತ್ರೆಗಾಗಿ 100 ವೈದ್ಯರು, 1 ಲಕ್ಷ ಮಾಸ್ಕ್

ಸಂಗಮ ಸ್ಥಳಕ್ಕೆ ನಟರಾದ ಸಾಧು ಕೋಕಿಲ, ದುನಿಯಾ ವಿಜಯ್ ಆಗಮಿಸಿದ್ದಾರೆ. ನಟ ಶಿವರಾಜ್ ಕುಮಾರ್ ಸಹ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪಾದಯಾತ್ರೆಗೆ ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗದಲ್ಲಿ ಮೇಕೆದಾಟು ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಅಪ್ಪಾ ಸಾಯಬೇಡ್ರಿ ಅಂತೀವಿ, ಇಲ್ಲ ನಾವು ಸಾಯೋರೇ ಅಂತಾ ಚಂಡಿ ಹಠ ಹಿಡಿದ್ರೆ ಏನು ಮಾಡೋಣ. ಇಬ್ಬರೇ ಯಾಕ್ ಹೋಗಿ ಸಾಯ್ತಿರಿ..? . ನೀವು ಇಬ್ಬರೇ ಪಾದಯಾತ್ರೆ ಹೋಗ್ತೀವಿ ಅಂತೀರಾ? ಸಿದ್ದರಾಮಯ್ಯ, ಡಿಕೆಶಿ ಅವರಿಗಾಗಿ ಪ್ರಾರ್ಥನೆ ಮಾಡ್ತೀನಿ. ನೀವು ಇಬ್ಬರೇ ಹೋಗ್ತೀವಿ ಅಂದ್ರೆ ನಿಮ್ಮ‌ ಕಾರ್ಯಕರ್ತರು ಬಿಡುವುದಿಲ್ಲ. ಸುಮ್ಮ ಸುಮ್ಮನೆ ನೀವು ಏಕೆ ಸಾಯ್ತೀರಾ, ಅವರನ್ನು ಏಕೆ ಸಾಯಿಸುತ್ತೀರಾ? ನಾವು, ನೀವು ಒಟ್ಟಿಗೆ ಸಂತೋಷವಾಗಿ ಜೀವನ ಮಾಡೋಣ ಅಂತಾ ಪ್ರಾರ್ಥನೆ ಮಾಡ್ತಿನಿ ಎಂದು ತಿರುಗೇಟು ನೀಡಿದರು.
Published by:Mahmadrafik K
First published: