ನಾವ್ಯಾರಾದ್ರೂ ಬಿದ್ದು ಹೋದ್ರೆ ಹೊತ್ಕೊಂಡು ಬರೋಕೆ ನೀವ್ಯಾರಾದ್ರೂ ಇರ್ತೀರಾ? DK Shivakumar ಪ್ರಶ್ನೆ

ನಿಷೇದಾಜ್ಞೆ ಹಾಕಿದ್ರೆ  ನಾನು ಮತ್ತು ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ. ನಾವ್ಯಾರಾದ್ರೂ ಬಿದ್ದು ಹೋದ್ರೆ ಹೊತ್ತುಕೊಂಡು ಬರೋಕೆ ನೀವ್ಯಾರಾದ್ರೂ ಇರ್ತೀರಾ ಎಂದು ಪ್ರಶ್ನೆ ಮಾಡಿದರು.

ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್

  • Share this:
ಮೇಕೆದಾಟು ಪಾದಯಾತ್ರೆ (Mekedatu padayatra) ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಪ್ರತಿಕ್ರಿಯಿಸಿದ್ದಾರೆ. ಪಾದಯಾತ್ರೆ ಕುರಿತು ಸಿಎಂ‌ ಬಸವರಾಜ್ ಬೊಮ್ಮಾಯಿ (CM Basavaaj Bommai)  ಮತ್ತು ಶಾಸಕರಿಗೂ ಪತ್ರ ಬರೆದಿದ್ದೇನೆ. ರಾಜ್ಯದ ವಿರೋಧ ಕೆಲಸ‌ ಮಾಡಲು ಪಾದಯಾತ್ರೆ ಮಾಡುತ್ತಿಲ್ಲ. ನಾವು ಪಾದಯಾತ್ರೆ ‌ಮಾಡುತ್ತೇವೆ ಅಂತ ರಾಮನಗರ  (Ramanagara) ಡಿಸಿಯಿಂದ ನಿರ್ಬಂಧ ಹಾಕಿಸುತ್ತಿದ್ದಾರೆ. ರಾಮನಗರದಲ್ಲಿ ನಮ್ಮವರ ಮೇಲೆ ಕೇಸ್ ಹಾಕಿಸಿದ್ದಾರೆ. ಜೈಲಿಗೆ ಹೋಗಿದ ತಕ್ಷಣ ನಮ್ಮ ಪ್ರಾಣ ಹೋಗಲ್ಲ. ನಮ್ಮ ಪಾದಯಾತ್ರೆಗೆ ಅರ್ಚಕರು ಬೆಂಬಲ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲೋದಿಲ್ಲ ಎಂದು ಡಿ.ಕೆ.ಶಿವಕುಮಾರ್ ಪುನರುಚ್ಚಿಸಿದರು.

ದೇವಸ್ಥಾನಗಳನ್ನ ಸ್ವತಂತ್ರ ಮಾಡಿ ಅವರ ಕಾರ್ಯಕರ್ತರ ಕೈಗೆ ಕೊಡಲು‌ ಬಿಜೆಪಿ ಸರ್ಕಾರ ಹೋಗ್ತಿದೆ. ಸುಮಾರು 10 ಲಕ್ಷ ಕೋಟಿ ಆಸ್ತಿ ಇದರಲ್ಲಿದೆ. ಇದನ್ನ ಬಿಜೆಪಿ ಕಾರ್ಯಕರ್ತರ ಕೈಗೆ ಕೊಡ್ತಿದ್ದಾರೆ. ನಾವು ಕಾನೂನು ಹೊರತುಪಡಿಸಿ ಏನೂ ಮಾಡಲ್ಲ ಎಂದರು. ಅರ್ಚಕರ ವಿಚಾರಕ್ಕೆ ಹೋದ್ರೆ ಸರ್ಕಾರ ಸುಟ್ಟು ಹೋಗುತ್ತದೆ. ಹಾಗಾಗಿ ಆದೇಶ ಹಿಂಪಡೆಯಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.

ಕೋವಿಡ್ ನಿಯಮಾವಳಿ ಪ್ರಕಾರ ಪಾದಯಾತ್ರೆ

ಕೋವಿಡ್ ನಿಯಮಾವಳಿ ಪ್ರಕಾರವೇ ಪಾದಯಾತ್ರೆ ನಡೆಯುತ್ತದೆ. ನಡೆಯೋದಕ್ಕೆ ಯಾಕೆ ತಡೆ ಹಾಕ್ತಾರೆ. ನಿಷೇದಾಜ್ಞೆ ಹಾಕಿದ್ರೆ  ನಾನು ಮತ್ತು ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ. ನಾವ್ಯಾರಾದ್ರೂ ಬಿದ್ದು ಹೋದ್ರೆ ಹೊತ್ತುಕೊಂಡು ಬರೋಕೆ ನೀವ್ಯಾರಾದ್ರೂ ಇರ್ತೀರಾ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  ಕಾಯಿಲೆ ಬಿದ್ದು ಆಸ್ಪತ್ರೆಯಲ್ಲಿದ್ದಾಗ ಮುಸ್ಲಿಮರ, ದಲಿತರ ರಕ್ತ ಹಾಕಬೇಡಿ ಎನ್ನುತ್ತೇವಾ.. Siddaramaiah ಪ್ರಶ್ನೆ

ನಾಳೆ ಮಧ್ಯಾಹ್ನ 3 ಗಂಟೆಗೆ ಪಕ್ಷದ ಎಲ್ಲಾ ಶಾಸಕರು ಮೇಕೆದಾಟು ತಲುಪಲಿದ್ದೇವೆ . ಇಬ್ಬರೇ ಪಾದಯಾತ್ರೆ ಮಾಡುವುದಾಗಿ  ಸಿದ್ಜರಾಮಯ್ಯನವರು ಹೇಳಿದ್ದಾರೆ.  ಇಂದು ಪಕ್ಷದ ಮಾಜಿ ಆರೋಗ್ಯ ಸಚಿವರ ಸಭೆ ಕರೆಯಲಾಗಿದೆ. ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸ್ತೇವೆ  ಎಂದರು.

ಅಶೋಕಣ್ಣರ ಬಗ್ಗೆ ಮಾತನಾಡಲು ಶಕ್ತಿ ಇಲ್ಲ 

ಮೇಕೆದಾಟು DPR  ಮಾಡಲು ಕುಮಾರಸ್ವಾಮಿ ಸರ್ಕಾರ ಬೇಕಿತ್ತಾ ಎಂಬ ಕಾರಜೋಳ ಪ್ರಶ್ನೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು. ಕಾರಜೋಳ, ಕುಮಾರಸ್ವಾಮಿ, ಅಶೋಕಣ್ಣರ ಬಗ್ಗೆ ಮಾತನಾಡಲು ಶಕ್ತಿ ಇಲ್ಲ  ನಾವು ಏನೂ ಮಾಡಿಲ್ಲ,  ಎಲ್ಲ ಅವರೇ ಮಾಡಿದ್ದು. ಅಶೋಕಣ್ಣ ಮೇಕೆ ಮಾಂಸ ತಿನ್ಞಲು ಹೋಗ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ

ಮೇಕೆದಾಟು ಪಾದಯಾತ್ರೆ ರಾಜಕೀಯ ಅಜಂಡಾ ಎಂಬ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಕೂಡಿಹಳ್ಳಿ ಚಂದ್ರಶೇಖರ್ ಯಾರು ಅವರು, ರೈತ ಮುಖಂಡರಾ ಎಂದು ಪ್ರಶ್ನಿಸಿದರು. ರಾಜಕೀಯ ಅಜೆಂಡಾ ಅಲ್ಲ, ನಮ್ಮದು ರಾಜಕೀಯ ಪಕ್ಷ. ರಾಜಕೀಯಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ.

ಇದನ್ನೂ ಓದಿ:  ಮೇಕೆದಾಟು ಬಳಿ ಹೋಟೆಲ್​​ಗಳಿಗೆ ನಿರ್ಬಂಧ ಹಾಕಿದ್ದಾರೆ, ನಾವು ನದಿ ಪಕ್ಕ ಮಲಗ್ತೀವಿ: DK Shivakumar

ನಮ್ಮ ಸರ್ಕಾರದ ಅವಧಿಯಲ್ಲಿ ಡಿಪಿಆರ್ ತಯಾರಿಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದು 2.5 ವರ್ಷ ಆಯ್ತು, ಮಲಗಿದ್ದೀರಲ್ವಾ. ಮೇಕೆದಾಟು ಯೋಜನೆ ಕಾರ್ಯಗತ ಮಾಡಲು ಯಾವುದೇ ಕಾನೂನು ಅಡೆತಡೆ ಇಲ್ಲ. ತಮಿಳುನಾಡಿನ ಕ್ಯಾತೆಗಾಗಿ ನೀವು ಮಾಡುತ್ತಿಲ್ಲ. ಅಣ್ಣಾಮಲೈ ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ, ಅವರಿಗೆ ಕುಮ್ಮಕ್ಕು ನೀಡುತ್ತಿದ್ದಿರಿ. ತಮಿಳುನಾಡಿನಲ್ಲಿ ನಿಮ್ಮ ಪಕ್ಷ ವಿಸ್ತರಣೆಗೆ ಮೇಕೆದಾಟು ಯೋಜನೆ ಮಾಡುತ್ತಿಲ್ಲ ಎಂದು ಬಿಜೆಪಿಗರನ್ನು ದೂರಿದರು.ಕಟೀಲ್ಗೆ ಬುದ್ಧಿ ಬಂದಿಲ್ಲ

ಹಿಂದೂ ದೇವಸ್ಥಾನಗಳ ಕುರಿತು ಕಟೀಲ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಡ ಪಕ್ಷ ಕಾಂಗ್ರೆಸ್. ವಾಜಪೇಯಿ ಪ್ರಧಾನಿ ಆದ ಬಳಿಕ ಮತ್ತೆ ಅಧಿಕಾರಕ್ಕೆ ಬಂದವರು ನಾವು. ನಳೀನ್ ಕುಮಾರ್ ಅವರ ಬುದ್ದಿ ರಾಜಕೀಯವಾಗಿ ಬೆಳೆದಿಲ್ಲ. ದೇವಸ್ಥಾನಗಳು ಮುಜರಾಯಿ ಇಲಾಖೆಯಲ್ಲಿ ಇವೆ. ಇವುಗಳನ್ನ RSS ಕೈಗೆ ಕೊಡಬೇಡಿ ಎಂದು ಹೇಳುತ್ತೇವೆ. RSSನವರಿಗೆ ದೇವಸ್ಥಾನ ಕೊಡಬೇಡಿ ಎಂದರೆ ಹಿಂದೂಗಳ ವಿರೋಧಿನಾ. RSS ಮುಂದೆ ಕೈ ಮುಗಿದು ನಿಲ್ಲಬೇಕಾ, ಇದಕ್ಕೆ ಬೇಡ ಎಂದಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು
Published by:Mahmadrafik K
First published: