ಲೋಕಸಭೆ ಕಸರತ್ತು; ಜೆಡಿಎಸ್​​ ಜತೆಗಿನ ಸೀಟು ಹಂಚಿಕೆ ಬಗ್ಗೆ ಚರ್ಚೆ; ದೆಹಲಿಯಲ್ಲಿ ಕಾಂಗ್ರೆಸ್​​ ಮಹತ್ವದ ಸಭೆ!​

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು ಅವುಗಳಲ್ಲಿ 12 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್‌ ಇಚ್ಛಿಸಿದೆ. ಈ ಬೇಡಿಕೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಮುಂದೆ ಇಡಲು ಸಿದ್ದತೆ ನಡೆಸಿಕೊಂಡಿದೆ.

Ganesh Nachikethu | news18
Updated:February 9, 2019, 10:06 AM IST
ಲೋಕಸಭೆ ಕಸರತ್ತು; ಜೆಡಿಎಸ್​​ ಜತೆಗಿನ ಸೀಟು ಹಂಚಿಕೆ ಬಗ್ಗೆ ಚರ್ಚೆ; ದೆಹಲಿಯಲ್ಲಿ ಕಾಂಗ್ರೆಸ್​​ ಮಹತ್ವದ ಸಭೆ!​
ಸಿದ್ದರಾಮಯ್ಯ
Ganesh Nachikethu | news18
Updated: February 9, 2019, 10:06 AM IST
ಬೆಂಗಳೂರು(ಫೆ.09): ಲೋಕಸಭೆ ಗದ್ದುಗೆ ಹಿಡಿಯಲು ಕಾಂಗ್ರೆಸ್​​ ಭಾರೀ ಕಸರತ್ತು ನಡೆಸುತ್ತಿದೆ. ಹೀಗಾಗಿಯೇ ಕಾಂಗ್ರೆಸ್​​ ಹಿರಿಯ ನಾಯಕ ಅಹ್ಮದ್ ಪಟೇಲ್​​​ ನೇತೃತ್ವದಲ್ಲಿ ಇಂದು ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಕಾಂಗ್ರೆಸ್​​ ಹೈಕಮಾಂಡ್​​ ರಾಜ್ಯ ನಾಯಕರರನ್ನು ಸಭೆಗೆ ಹಾಜರಾಗುವಂತೆ ಸೂಚಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ತಂಡ ದೆಹಲಿಗೆ ತೆರಳಿದೆ. ಸಭೆಯಲ್ಲಿ ಮಾಜಿ ಸಿಎಂ ಜತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಕೆ.ಸಿ.‌ ವೇಣುಗೋಪಾಲ್ ಭಾಗಿಯಾಗಲಿದ್ದಾರೆ. ಇಲ್ಲಿ ಚುನಾವಣಾ ಕಾರ್ಯತಂತ್ರ, ಜೆಡಿಎಸ್​​​ ಜತೆಗೆ ಸೀಟು ಹಂಚಿಕೆ, ಪ್ರಚಾರ, ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಚರ್ಚಸಿಲಾಗುತ್ತದೆ. ಪ್ರಮುಖವಾಗಿ ಜೆಡಿಎಸ್ ಜೊತೆಗಿನ ಸೀಟು ಹೊಂದಾಣಿಕೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಮೈತ್ರಿಗೂ ಮುನ್ನವೇ ಕಾಂಗ್ರೆಸ್​​ ಮುಖಂಡರ ಅಭಿಪ್ರಾಯ ಸಂಗ್ರಹಣೆಗೆ ರಾಜ್ಯ ನಾಯಕರು ಮುಂದಾಗಿದ್ದರು. ಹಾಗೆಯೇ ಒಂದು ಸುತ್ತು ಜೆಡಿಎಸ್​​ ಜೊತೆಗಿನ ಸೀಟು ಹೊಂದಾಣಿಕೆ ಬಗ್ಗೆಯೂ ಮುಖಂಡರೊಂದಿಗೆ ಚರ್ಚಿಸಿದ್ದರು. ತಿಂಗಳ ಹಿಂದೆಯೇ ರಾಜ್ಯ ಕಾಂಗ್ರೆಸ್​ ನಾಯಕರು ಕ್ಷೇತ್ರವಾರು ಮುಖಂಡರ ಸಭೆ ನಡೆಸಿದ್ದರು. ಅಲ್ಲದೇ ಚುನಾವಣೆ ಸಮೀಸುತ್ತಿರುವ ಹೊತ್ತಲ್ಲಿಯೇ ನಡೆಸಿದ ಈ ಸಭೆ ಬಿಜೆಪಿಯನ್ನು ದಂಗುಬಡಿಸಿತ್ತು.

ಕರ್ನಾಟಕ ಕಾಂಗ್ರೆಸ್​​ ಪ್ರಾದೇಶಿಕ ಸಮಿತಿ ಅಧ್ಯಕ್ಷ ದಿನೇಶ್​​​ ಗುಂಡೂರಾವ್​​ ನೇತೃತ್ವದಲ್ಲಿ ರಾಜ್ಯಾದ್ಯಂತ ಕ್ಷೇತ್ರವಾರು ಮುಖಂಡರ ಸಭೆ ನಡೆದಿತ್ತು. ಜೆಡಿಎಸ್​​ ಜೊತೆಗಿನ ಸೀಟು ಹೊಂದಾಣಿಕೆಗೆ ಸಹಕರಿಸುವಂತೆ ಹಾಲಿ ಸಂಸದರೊಂದಿಗೆ ಚರ್ಚಿಸಿದ್ದರು. ಜೆಡಿಎಸ್​​ ಬೇಡಿಕೆಯಿಟ್ಟಿರುವ ಕ್ಷೇತ್ರಗಳ ಹಾಲಿ ಸಂಸದರ ಜೊತೆಗೆ ಮಹತ್ವದ ಮಾತುಕತೆ ನಡೆಯಲಿದ್ದು; ಕ್ಷೇತ್ರ ಬಿಡಲೇಬೇಕಾದ ಪರಿಸ್ಥಿತಿ ಉಂಟಾದಲ್ಲಿ ತಯಾರಾಗಿರಿ ಎಂದು ಸಂದೇಶ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಹಾಲಿ ಸಂಸದರಿಗೆ ಕಾದಿದೆಯಾ ಕಂಟಕ? ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು.

ಸೀಟು ಬಿಟ್ಟುಕೊಡಲು ಮಾನಸಿಕವಾಗಿ ತಯಾರಿಯಾಗಲೇಬೇಕೆಂದು ಹಾಲಿ ಸಂಸದರಿಗೆ ಕೆಪಿಸಿಸಿ ಅಧ್ಯಕ್ಷರ ಸೂಚನೆ ನೀಡಿದ್ದರು. ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಕುರಿತು ಸಂಸದರು, ಶಾಸಕರು, ಮುಖಂಡರೊಂದಿಗೆ ಸಭೆ ನಡೆಸಿದ್ದರು. ಅದಾದ ಬಳಿಕ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ: ಮೈತ್ರಿಪಾಳಯಕ್ಕೆ ಆಡಿಯೋ ಶಾಕ್..! ಪಕ್ಷ ನಿಷ್ಠೆಗಿಂತ ಸ್ವಾಮಿ ನಿಷ್ಠೆ ಮುಖ್ಯ ಎಂದ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ

ಇನ್ನೊಂದೆಡೆ ಕಾಂಗ್ರೆಸ್ ಗೆದ್ದಿರುವ ಕ್ಷೇತ್ರಗಳನ್ನ ಜೆಡಿಎಸ್ ಬಿಟ್ಟುಕೊಡದಿರಲು ಹಾಲಿ ಸಂಸದರು ನಿರ್ಧಾರ ಮಾಡಿದ್ದಾರೆ. ರಾಜ್ಯ ನಾಯಕರು ಇಂದಿನ ಸಭೆಯಲ್ಲಿ ಈ ವಿಚಾರ ಚರ್ಚೆ ಮಾಡಲಿದ್ದಾರೆ. ಇದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ಗೆ ದೊಡ್ಡ ಸವಾಲ್​​ ಆಗಿ ಪರಿಣಮಿಸಿದೆ. ಅಲ್ಲದೇ ರಾಜ್ಯ ನಾಯಕರೇ ಸಂಸದರ ಮಾತುಗಳಿಗೆ ಮನ್ನಣೆ ನೀಡದೇ ಕೈ ಚೆಲ್ಲಿದ್ರೆ, ರಾಹುಲ್ ಬಳಿಯೇ ಒಂದು ನಿಯೋಗ ಹೋಗಲು ಸಜ್ಜಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​-ಜೆಡಿಎಸ್​ ಜಂಟಿಯಾಗಿಯೇ ಸ್ಪರ್ಧಿಸವುದಾಗಿ ಈಗಾಗಲೇ ಘೋಷಿಸಲಾಗಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವ ಕಾರಣ ಈಗಿನಿಂದಲೇ ಸೀಟು ಹಂಚಿಕೆ ಚರ್ಚೆ ಮೇಲಕ್ಕೇಳುತ್ತಿದೆ. ಇತ್ತ ಜೆಡಿಎಸ್‌ ಪಕ್ಷವು ಲೋಕಸಭಾ ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದ್ದು, ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಬಳಿ ಮಾತನಾಡಲು ಮುಂದಾಗಿದೆ.
Loading...

ಇದನ್ನೂ ಓದಿ: Karnataka Budget 2019: ಎಚ್​​ಡಿಕೆ ಬಜೆಟ್​​ನಲ್ಲೂ ಮುಂದುವರಿದ ಅಹಿಂದ ಪ್ರೇಮ; ದಲಿತರಿಗೆ ಭರ್ಜರಿ ಕೊಡುಗೆ!

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು ಅವುಗಳಲ್ಲಿ 12 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್‌ ಇಚ್ಛಿಸಿದೆ. ಈ ಬೇಡಿಕೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಮುಂದೆ ಇಡಲು ಸಿದ್ದತೆ ನಡೆಸಿಕೊಂಡಿದೆ. ಹೀಗಾದಲ್ಲಿ ಕೇವಲ 14 ಸ್ಥಾನಗಳಷ್ಟೆ ಕಾಂಗ್ರೆಸ್‌ಗೆ ದೊರಕುತ್ತವೆ. ಅಲ್ಲದೇ ಹಳೆ ಮೈಸೂರು, ಕರಾವಳಿ ಹಾಗೂ ಉತ್ತರ ಕರ್ನಾಟಕ ಮೂರು ಭಾಗಗಳಲ್ಲಿ ಸೀಟುಗಳಿಗೆ ಬೇಡಿಕೆ ಇಡಲು ಸಜ್ಜಾಗಿದ್ದಾರೆ ಜೆಡಿಎಸ್ ವರಿಷ್ಠರು​​. ಮಂಡ್ಯ, ಹಾಸನ, ಮೈಸೂರು, ವಿಜಯಪುರ, ಶಿವಮೊಗ್ಗ, ಕೋಲಾರ, ಉಡುಪಿ ಜಿಲ್ಲೆಗಳಲ್ಲಿ ಸೀಟಿಗಾಗಿ ಜೆಡಿಎಸ್‌ ಬೇಡಿಕೆ ಇಡಲಿದೆ ಎನ್ನುತ್ತಿವೆ ಮೂಲಗಳು.

---------------
First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ