ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ ಕಾಂಗ್ರೆಸ್; ವೇಣುಗೋಪಾಲ್ ನೇತೃತ್ವದಲ್ಲಿ 2 ದಿನ ಸಭೆ

news18
Updated:September 1, 2018, 10:58 AM IST
ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ ಕಾಂಗ್ರೆಸ್; ವೇಣುಗೋಪಾಲ್ ನೇತೃತ್ವದಲ್ಲಿ 2 ದಿನ ಸಭೆ
ಸಾಂದರ್ಭಿಕ ಚಿತ್ರ
news18
Updated: September 1, 2018, 10:58 AM IST
ಶ್ರೀನಿವಾಸ್​ ಹಳಕಟ್ಟಿ , ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.1): ಲೋಕಸಭಾ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಸಿರುವ  ಕಾಂಗ್ರೆಸ್​ ಅದಕ್ಕಾಗಿ ಈಗಿನಿಂದಲೇ ರಣತಂತ್ರ ರೂಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯವೈಖರಿ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್​ ನಾಯಕರು ಇಂದು ಸಭೆ ನಡೆಸುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ನೇತೃತ್ವದಲ್ಲಿ ಇಂದು ಮತ್ತು ನಾಳೆ ಪಕ್ಷದ ಕಾರ್ಯವೈಖರಿ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಜೆಂಡಾ ಕುರಿತು ಚರ್ಚಿಸಲು ಎಲ್ಲಾ ಜಿಲ್ಲೆಯ ಕಾಂಗ್ರೆಸ್​ ಮುಖಂಡರೊಂದಿಗೆ ಸಭೆ ನಡೆಯಲಿದೆ.

ಇಂದು ಬೀದರ್, ಬೆಳಗಾವಿ, ಚಿಕ್ಕೋಡಿ, ಕಲಬುರ್ಗಿ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಗ್ರಾಮೀಣ ಕ್ಷೇತ್ರಗಳ ಮುಖಂಡರ ಸಭೆ ನಡೆಸಲಿರುವ ನಾಯಕರು ಪಕ್ಷ ಸಂಘಟನೆ, ಅಭ್ಯರ್ಥಿ ಆಯ್ಕೆ, ಇತರೆ ಪಕ್ಷಗಳ ಸ್ಥಿತಿ ಗತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಬಗ್ಗೆ, ಪ್ರಚಾರ ಕಾರ್ಯ, ಕ್ಷೇತ್ರದಲ್ಲಿ ಮುಖಂಡರು ಕಾರ್ಯವೈಖರಿ ಸೇರಿದಂತೆ ಅಗತ್ಯ ವಿಚಾರ ಮಾಹಿತಿ ಪಡೆಯಲಿದ್ದು, ನಾಯಕರುಗಳ ನಡುವಿನ ಅಸಮಾಧಾನ, ಒಳಜಗಳ ಉಪಶಮನಕ್ಕೂ ಮುಂದಾಗಲಿದ್ದಾರೆ.

ಇಂದು ನಡೆಯುವ ಸಭೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹಾಗೂ ರಮೇಶ್​ ಜಾರಕಿಹೊಳಿ ನಡುವಿನ ಗುದ್ದಾಟ ಕೂಡ ಚರ್ಚೆಯಾಗುವ ಸಂಭವವಿದೆ. ಪಿಎಲ್​ಡಿ ಬ್ಯಾಂಕ್​ ಚುನಾವಣೆ ಸಂಬಂಧ ಇಬ್ಬರು ನಾಯಕರು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ತಮ್ಮ ಪಕ್ಷದ ನಾಯಕರ ಮೇಲೆ ಹರಿಹಾಯ್ದಿದ್ದರು, ಇದು ಕಾಂಗ್ರೆಸ್​ ಮುಂಖಡರಿಗೆ ತಲೆ ನೋವಾಗಿತ್ತು. ಅಲ್ಲದೇ ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್​ ಜಾರಕಿಹೊಳಿ ವಿರುದ್ಧ ನಾಯಕರಿಗೆ ದೂರು ನೀಡಿದ್ದರು.  ಈ ಕುರಿತು ಇಂದಿನ ಸಭೆಯಲ್ಲಿ ಮಾತುಕತೆ ನಡೆಯಲಿದ್ದು, ಇವರ ಜಗಳಕ್ಕೆ  ಬ್ರೇಕ್​ ಹಾಕಲು  ಮುಖಂಡರು ತೀರ್ಮಾನಿಸಿದ್ದಾರೆ.
Loading...

ಇನ್ನು ನಾಳೆ ಧಾರವಾಡ, ಹಾವೇರಿ, ಚಾಮರಾಜನಗರ, ಚಿತ್ರದುರ್ಗ, ಉ.ಕ., ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಸಭೆ ನಡೆಯಲಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...