• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Baburao Chinchansoor: ಬಿಜೆಪಿಗೆ ಆಘಾತ, ಚಿಂಚನಸೂರ್ ಕಾಂಗ್ರೆಸ್‌ ಸೇರ್ಪಡೆಯ ಹಿಂದಿನ ಮಾಸ್ಟರ್‌ಪ್ಲ್ಯಾನ್‌ ಯಾರು ಗೊತ್ತಾ?!

Baburao Chinchansoor: ಬಿಜೆಪಿಗೆ ಆಘಾತ, ಚಿಂಚನಸೂರ್ ಕಾಂಗ್ರೆಸ್‌ ಸೇರ್ಪಡೆಯ ಹಿಂದಿನ ಮಾಸ್ಟರ್‌ಪ್ಲ್ಯಾನ್‌ ಯಾರು ಗೊತ್ತಾ?!

ಬಾಬುರಾವ್ ಚಿಂಚನಸೂರ್‌

ಬಾಬುರಾವ್ ಚಿಂಚನಸೂರ್‌

ಈ ಬಾರಿ ಬಾಬುರಾವ್ ಚಿಂಚನಸೂರ್ ಮೂಲಕವೇ ಪ್ರಿಯಾಂಕ ಖರ್ಗೆಯನ್ನು ಸೋಲಿಸಲು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದರು. ಇದಕ್ಕಾಗಿ ಈಗಾಗಲೇ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ರಣತಂತ್ರ ನಡೆದಿತ್ತು. ಆದರೆ ಅತ್ತ ಕಾಂಗ್ರೆಸ್‌, ಚಿಂಚನಸೂರ್ ಅವರನ್ನೇ ಕೈ ಪಾಳಯಕ್ಕೆ ಸೆಳೆದಿರುವುದು ಬಿಜೆಪಿ ನಾಯಕರಿಗೆ ನೀರಿಳಿಯದ ಗಂಟಲಲ್ಲಿ ಕಬ್ಬು ತುರುಕಿದ ಅನುಭವದಂತಾಗಿದೆ.

ಮುಂದೆ ಓದಿ ...
 • Share this:

ಕಲಬುರಗಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಾಂತರ ಪರ್ವ ಸರ್ವೇ ಸಾಮಾನ್ಯ ಸಂಗತಿ. ಹಲವು ಲೆಕ್ಕಾಚಾರಗಳನ್ನು ಇಟ್ಟುಕೊಂಡು ಅನೇಕ ರಾಜಕೀಯ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಾರೆ. ಕರ್ನಾಟಕದಲ್ಲೂ ಈ ಪ್ರಕ್ರಿಯೆ ದೊಡ್ಡಮಟ್ಟದಲ್ಲಿ ನಡೆಯುತ್ತಿದ್ದು, ಬಿಜೆಪಿ (BJP), ಕಾಂಗ್ರೆಸ್ (Congress), ಜೆಡಿಎಸ್ ಪಕ್ಷ (JDS) ಸೇರಿದಂತೆ ಒಂದರಿಂದ ಒಂದಕ್ಕೆ ರಾಜಕಾರಣಿಗಳು ಜಿಗಿಯುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಆಘಾತ ಉಂಟಾಗಿದೆ.


ಹೌದು.. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಣಾಯಕವಾಗಿರುವ ಕೋಳಿ ಸಮುದಾಯದ ಪ್ರಬಲ ಮುಖಂಡ, ಹಿರಿಯ ರಾಜಕಾರಣಿ ಬಾಬುರಾವ್ ಚಿಂಚನಸೂರ್‌ (Baburao Chinchansoor) ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೆ (Congress) ಮುಂದಾಗಿದ್ದಾರೆ. ಇಂದು (ಮಂಗಳವಾರ) ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಬಹುದೊಡ್ಡ ಆಘಾತ ಉಂಟಾಗಿದೆ.


ಇದನ್ನೂ ಓದಿ: Prashant Kishor: ವಿಪಕ್ಷಗಳ ಒಗ್ಗಟ್ಟಿನ ಮಂತ್ರದ ಮಧ್ಯೆ ಬಿಜೆಪಿ ಸೋಲಿಸುವ ಫಾರ್ಮುಲಾ ಕೊಟ್ಟ ಚುನಾವಣಾ ತಂತ್ರಗಾರ!


ನಿರ್ಣಾಯಕ ಕೋಳಿ ಸಮುದಾಯದ ಉನ್ನತ ನಾಯಕ!


ಅಂದ ಹಾಗೆ ಚುನಾವಣೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಳಿ ಸಮುದಾಯ ನಿರ್ಣಾಯಕ ಎನಿಸಿದೆ. ಇದೇ ಕೋಳಿ ಸಮುದಾಯದಿಂದ ಬಂದ ನಾಯಕ ಬಾಬುರಾವ್ ಚಿಂಚನಸೂರ್ ಆಗಿದ್ದು, ಇವರಿಗೆ ಅಪಾರ ಸಂಖ್ಯೆಯಲ್ಲಿ ಸಮುದಾಯದ ಬೆಂಬಲಿಗರು ಇದ್ದಾರೆ. ಬಾಬುರಾವ್ ಚಿಂಚನಸೂರ್ ಬಿಜೆಪಿಯಲ್ಲಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಈ ಸಮುದಾಯದ ಜನರು ಇಲ್ಲಿಯವರೆಗೆ ಬಿಜೆಪಿಗೆ ಬೆಂಬಲಿಸುತ್ತಿದ್ದರು. ಇದೀಗ ಅಂತಹ ಪ್ರಬಲ ನಾಯಕ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿರೋದ್ರಿಂದ ಕಾಂಗ್ರೆಸ್‌ ಬಲ ಸಿಕ್ಕಂತಾಗಿದ್ದು, ಇತ್ತ ಬಿಜೆಪಿಗೆ ಬಹುದೊಡ್ಡ ಆಘಾತ ಉಂಟಾಗಿದ್ದು ಮಾತ್ರವಲ್ಲದೇ ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ.


ಮಲ್ಲಿಕಾರ್ಜುನ ಖರ್ಗೆಯನ್ನೇ ಸೋಲಿಸಿದ್ದ ಚಿಂಚನಸೂರ್‌!


ಕಳೆದ ಲೋಕಸಭಾ ಚುನಾವಣೆಯಲ್ಲಿ ಈಗಿನ ಎಐಸಿಸಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲುಂಡಿದ್ದರು. ಇವರ ಸೋಲಿಗೆ ಕಲ್ಯಾಣ ಕರ್ನಾಟಕದ ಪ್ರಬಲ ಸಮುದಾಯ ಎನಿಸಿಕೊಂಡಿರುವ ಕೋಳಿ ಸಮಾಜದ ಜನರ ಬೆಂಬಲ ಸಿಗದೇ ಇದ್ದದ್ದು ಕೂಡ ಪ್ರಮುಖ ಕಾರಣ. ಬಾಬುರಾವ್ ಚಿಂಚನಸೂರ್ ಬಿಜೆಪಿಯಲ್ಲಿದ್ದರಿಂದ ಖರ್ಗೆ ಸೋಲಿಗೆ ಚಿಂಚನಸೂರ್ ರಣತಂತ್ರ ರೂಪಿಸಿ ಕೋಳಿ ಸಮಾಜದ ಮತಗಳು ಬಿಜೆಪಿ ಬಿಟ್ಟು ಹೋಗದಂತೆ ಮಾಡಿದ್ದರು.


ಆಪರೇಷನ್ ಹಸ್ತ ಮಾಡಿದ ಪ್ರಿಯಾಂಕ್ ಖರ್ಗೆ


ರಾಜ್ಯ ಕಾಂಗ್ರೆಸ್‌ನ ಪ್ರಬಲ ನಾಯಕ, ಎಐಸಿಸಿ ಅಧ್ಯಕ್ಷರ ಪುತ್ರ ಪ್ರಿಯಾಂಕ್ ಖರ್ಗೆ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಂದೆಯ ಸೋಲು, ಅದಕ್ಕೆ ಕಾರಣಗಳನ್ನು ಹುಡುಕಿದ್ದು ಮಾತ್ರವಲ್ಲದೇ, ಸೋಲಿಗೆ ಕಾರಣವಾದ ಬಾಬುರಾವ್ ಚಿಂಚನಸೂರ್ ಅವರನ್ನೇ ಪಕ್ಷಕ್ಕೆ ಸೆಳೆಯಲು ಕಳೆದ ಕೆಲ ಸಮಯದಿಂದ ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು. ಬಾಬುರಾವ್ ಚಿಂಚನಸೂರ್ ಬಂದ್ರೆ ಅವರು ಮಾತ್ರವಲ್ಲದೇ ಅವರು ಪ್ರತಿನಿಧಿಸುವ ಸಮುದಾಯ ಕೂಡ ಅವರಿದ್ದ ಪಕ್ಷಕ್ಕೆ ರಾಜಕೀಯ ಬೆಂಬಲವನ್ನು ನೀಡುತ್ತೆ ಎಂಬುದನ್ನು ಮನಗಂಡಿದ್ದ ಪ್ರಿಯಾಂಕ್, ಇದೀಗ ಚಿಂಚನಸೂರ್‌ಗೆ ಆಪರೇಷನ್ ಮಾಡಿಸಿ ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ತಂದೆ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮೂಲಕ ಆಪರೇಷನ್ ಪ್ಲಾನ್ ಮಾಡಿದ್ದ ಪ್ರಿಯಾಂಕ್ ಖರ್ಗೆ, ಮುಂಬರುವ ಚುನಾವಣೆಯಲ್ಲಿ ಹಿನ್ನಡೆ ಆಗಬಾರದು ಎನ್ನುವ ಮುಂದಾಲೋಚನೆಯಿಂದ ಚಿಂಚನಸೂರ್ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸಕ್ಸಸ್ ಆಗಿದ್ದಾರೆ.


ಇದನ್ನೂ ಓದಿ: Mallikarjun Kharge: ಹಿಂದೆ ನೀವು ಭಾರತಕ್ಕೆ ಅಪಮಾನ ಮಾಡಿದ್ದು ನೆನಪಿಲ್ಲವೇ? ನರೇಂದ್ರ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು


ಕಲ್ಯಾಣ ಕರ್ನಾಟಕದಲ್ಲಿ ಮೂಳೆ ಮುರಿದುಕೊಂಡ ಬಿಜೆಪಿ!


ಅಂದಹಾಗೆ ಮೇಲೆ ಹೇಳಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾಬುರಾವ್ ಚಿಂಚನಸೂರ್ ಅವರು ಬಿಜೆಪಿ ಪಕ್ಷದ ಪ್ರಬಲ ನಾಯಕ. ಇದೀಗ ಅವರನ್ನು ಕಳೆದುಕೊಂಡಿರುವ ಬಿಜೆಪಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆನ್ನ ಮೂಳೆ ಮುರಿದ ಅನುಭವ ಆಗಿದ್ದು, ಕಾಂಗ್ರೆಸ್‌ನ ಮಹಾನ್ ನಾಯಕನನ್ನೇ ಸೋಲಿಸಲು ಕಾರಣರಾದ ಪ್ರಬಲ ಮುಖಂಡನೇ ಪಕ್ಷಕ್ಕೆ ಗುಡ್ ಬೈ ಹೇಳಿರೋದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಾರಿ ಬಾಬುರಾವ್ ಚಿಂಚನಸೂರ್ ಮೂಲಕವೇ ಪ್ರಿಯಾಂಕ ಖರ್ಗೆಯನ್ನು ಸೋಲಿಸಲು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದರು. ಇದಕ್ಕಾಗಿ ಈಗಾಗಲೇ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ರಣತಂತ್ರ ನಡೆದಿತ್ತು.


top videos  ಆದರೆ ಚಿಂಚನಸೂರ್ ಪಕ್ಷ ತೊರೆದಿರುವುದು ಬಿಜೆಪಿಗೆ ನೀರಿಳಿಯದ ಗಂಟಲಲ್ಲಿ ಕಬ್ಬು ತುರುಕಿದ ಅನುಭವದಂತಾಗಿದೆ.

  First published: