ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ; ಹೈಕಮಾಂಡ್​ ಭೇಟಿಯಾದ ಕಾಂಗ್ರೆಸ್ಸಿಗರು

ಸೋಮವಾರ(ನಿನ್ನೆ) ಎನ್​​ಸಿಪಿ ಅಜಿತ್ ಪವಾರ್ ಸೇರಿದಂತೆ ಕಾಂಗ್ರೆಸ್  ಮತ್ತು ಶಿವಸೇನೆಯ ಒಟ್ಟು 34 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಕೂಡ ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡರು. ಇನ್ನು ಕಾಂಗ್ರೆಸ್​​ನ ಅಶೋಕ್ ಚವಾಣ್, ದಿಲಿಪ್ ವಾಲ್ಸೆ-ಪಾಟೀಲ್, ಧನಂಜಯ್ ಮುಂಡೆ, ಸುನೀಲ್ ಚಾತ್ರಪಾಲ್ ಕೇದಾರ್ ಮತ್ತು ಕೆಸಿ ಪಾಡ್ವಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

news18-kannada
Updated:December 31, 2019, 5:08 PM IST
ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ; ಹೈಕಮಾಂಡ್​ ಭೇಟಿಯಾದ ಕಾಂಗ್ರೆಸ್ಸಿಗರು
ಸೋನಿಯಾ ಗಾಂಧಿ ಮತ್ತು ರಾಹುಲ್​​ ಗಾಂಧಿ
  • Share this:
ಮುಂಬೈ(ಡಿ.31): ಮುಖ್ಯಮಂತ್ರಿ ಉದ್ಧವ್​​ ಠಾಕ್ರೆ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೀಗ ಮಹಾರಾಷ್ಟ್ರ ಕಾಂಗ್ರೆಸ್​ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.​ ಇಂದು ಮಾಜಿ ಸಿಎಂ ಪ್ರಥ್ವಿರಾಜ್ ಚವಾಣ್ ಸೇರಿದಂತೆ ಹಲವರು ಕಾಂಗ್ರೆಸ್​ ಹೈಕಮಾಂಡ್​ ಸೋನಿಯಾ ಗಾಂಧಿ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹೌದು, ಸಚಿವ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್ಸಿನ ನಿಷ್ಠಾವಂತ ಹಿರಿಯ ಮುಖಂಡರನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಸಿಎಂ ಪ್ರಥ್ವಿರಾಜ್ ಚವಾಣ್ ಆರೋಪಿಸಿದ್ದಾರೆ. ಮಾಜಿ ಸಿಎಂ ಪ್ರಥ್ವಿರಾಜ್ ಚವಾಣ್ ನೇತೃತ್ವದ ತಂಡದಲ್ಲಿ ನಸೀಮ್ ಖಾನ್, ಪ್ರಣಿತಿ ಶಿಂಧೆ, ಸಂಗ್ರಾಮ್ ತೋಪ್ಡೆ, ಅಮಿನ್ ಪಟೇಲ್ ಮತ್ತು ರೋಹಿದಾಸ್ ಪಾಟೀಲ್ ಸೇರಿದಂತೆ ಹಲವು ಹಿರಿಯ ಮುಖಂಡರು ಇದ್ದರು ಎನ್ನಲಾಗಿದೆ. ಈ ತಂಡದೊಂದಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಉಪಸ್ಥಿತರಿದ್ದರು ಎನ್ನುತ್ತಿವೆ ಮೂಲಗಳು.

ಸೋಮವಾರ(ನಿನ್ನೆ) ಎನ್​​ಸಿಪಿ ಅಜಿತ್ ಪವಾರ್ ಸೇರಿದಂತೆ ಕಾಂಗ್ರೆಸ್  ಮತ್ತು ಶಿವಸೇನೆಯ ಒಟ್ಟು 34 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಕೂಡ ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡರು. ಇನ್ನು ಕಾಂಗ್ರೆಸ್​​ನ ಅಶೋಕ್ ಚವಾಣ್, ದಿಲಿಪ್ ವಾಲ್ಸೆ-ಪಾಟೀಲ್, ಧನಂಜಯ್ ಮುಂಡೆ, ಸುನೀಲ್ ಚಾತ್ರಪಾಲ್ ಕೇದಾರ್ ಮತ್ತು ಕೆಸಿ ಪಾಡ್ವಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಯಾರಿಗೆ ಯಾವ ಖಾತೆ ಎಂದು ಇನ್ನೂ ಹಂಚಿಕೆಯಾಗಿಲ್ಲ. ಈ ಮಧ್ಯೆಯೇ ತಮ್ಮನ್ನು ನಿರ್ಲಕ್ಷ್ಯಿಸಲಾಗಿದೆ ಎಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್​​ ಗಾಂಧಿಯವರಿಗೆ ದೂರು ನೀಡಿದ್ದಾರೆನ್ನಲಾಗಿದೆ. ಈ ವೇಳೆ ಕಾಂಗ್ರೆಸ್​ನ ಹಿರಿಯ ನಾಯಕಾರದ ಕೆ. ಸಿ ವೇಣುಗೋಪಾಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕೂಡ ಈ ಬಗ್ಗೆ ಹೈಕಮಾಂಡ್​ಗೆ ಮನವರಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಗೊತ್ತುವಳಿ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ನವೆಂಬರ್​​​ 28ನೇ ತಾರೀಕಿನಂದು ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಕಾಂಗ್ರೆಸ್​​-ಎನ್​​ಸಿಪಿ ಮೈತ್ರಿ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಸರ್ಕಾರ ರಚಿಸಿದೆ. ಅಂದು ಸಂಜೆ 8 ಗಂಟೆಗೆ ರಾಜ್ಯಪಾಲರ ಸಮ್ಮುಖದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಹೈಕಮಾಂಡ್​​ ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. ಈ ಮುನ್ನ ಅಜಿತ್​ ಪವಾರ್​ ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್​​ರನ್ನು ಭೇಟಿಯಾಗಿದ್ದಾರೆ. ಬಿಜೆಪಿಯೊಂದಿಗೆ ಕೈಜೋಡಿಸಿದ ಬಳಿಕವೂ ಎನ್​​ಸಿಪಿ ಅಜಿತ್​​ ಪವಾರ್​​ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅಂದೇ ಅಜಿತ್​​ ಪವಾರ್​​ಗೆ ಶಿವಸೇನೆ-ಎನ್​​ಸಿಪಿ-ಕಾಂಗ್ರೆಸ್​​ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಪೋಸ್ಟ್​​ ಪಕ್ಕಾ ಎಂದೇಳಲಾಗುತ್ತಿತ್ತು. ಈಗ ಹಾಗೆಯೇ ಅಜಿತ್​​ ಪವಾರ್​ಗೆ ಡಿಸಿಎಂ ಮಾಡಲಾಗಿದೆ.
First published:December 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ