ದೇವೇಗೌಡರಿಗೆ ಕಾದಿದೆ ಕೈ ಶಾಕ್..! ಜೆಡಿಎಸ್​ಗೆ ಕಬ್ಬಿಣ ಕಡಲೆಯಂಥ ಕ್ಷೇತ್ರಗಳು ಸಿಗುತ್ತವಾ? ಸಿದ್ದು ಟೀಮ್ ಮಾಸ್ಟರ್ ಪ್ಲಾನ್

ಕಾಂಗ್ರೆಸ್ ಸಂಸದರಾಗಿರುವ 5 ಕ್ಷೇತ್ರ ಸೇರಿ ಒಟ್ಟು 10 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಪಕ್ಷಕ್ಕೆ ಎಂಟನ್ನು ಮಾತ್ರ ನೀಡಲು ಕಾಂಗ್ರೆಸ್ ನಿರ್ಧರಿಸಿದೆ.

Vijayasarthy SN | news18
Updated:January 11, 2019, 8:28 PM IST
ದೇವೇಗೌಡರಿಗೆ ಕಾದಿದೆ ಕೈ ಶಾಕ್..! ಜೆಡಿಎಸ್​ಗೆ ಕಬ್ಬಿಣ ಕಡಲೆಯಂಥ ಕ್ಷೇತ್ರಗಳು ಸಿಗುತ್ತವಾ? ಸಿದ್ದು ಟೀಮ್ ಮಾಸ್ಟರ್ ಪ್ಲಾನ್
ಸಿದ್ದರಾಮಯ್ಯ
Vijayasarthy SN | news18
Updated: January 11, 2019, 8:28 PM IST
- ಚಿದಾನಂದ ಪಟೇಲ್,

ಬೆಂಗಳೂರು(ಜ. 11): ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ಲೋಕಸಭಾ ಚುನಾವಣೆ ಸನಿಹದಲ್ಲೇ ಇರುವುದರಿಂದ ಈ ಹಗ್ಗ ಜಗ್ಗಾಟ ಇನ್ನಷ್ಟು ಜೋರಾಗುತ್ತಿದೆ. ಕೇಂದ್ರದಲ್ಲಿ ಅತಂತ್ರ ಲೋಕಸಭೆ ನಿರ್ಮಾಣವಾಗುವ ಸಾಧ್ಯತೆ ತೋರುತ್ತಿರುವುದರಿಂದ ಜೆಡಿಎಸ್​ನ ರಾಷ್ಟ್ರಮಟ್ಟದ ಲೆಕ್ಕಾಚಾರ ಶುರುವಾಗಿದೆ. ಅದರಂತೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಹೆಚ್ಚೆಚ್ಚು ಸೀಟು ಗೆಲ್ಲುವುದು ಅನಿವಾರ್ಯವಾಗಿದೆ. ಇದೇ ಲೆಕ್ಕಾಚಾರದಲ್ಲಿ ಜೆಡಿಎಸ್ ಪಕ್ಷವು ರಾಜ್ಯದ 28 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳ ಪಾಲು ಕೇಳುತ್ತಿದೆ. ಇದರಲ್ಲಿ ಕಾಂಗ್ರೆಸ್ ಪ್ರಬಲವಾಗಿರುವ ಹಾಗೂ ಐದು ಹಾಲಿ ಕಾಂಗ್ರೆಸ್ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳೂ ಒಳಗೊಂಡಿದೆ. ಇದು ಕಾಂಗ್ರೆಸ್ ಪಾಲಿಗೆ ಚಿಂತೆಯ ವಿಷಯವಾಗಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಹೊಸ ಮಾಸ್ಟರ್ ಪ್ಲಾನ್ ಮಾಡಿದ್ದು ಜೆಡಿಎಸ್​ಗೆ ಶಾಕ್ ಕೊಡಲು ಸಿದ್ಧವಾಗಿದ್ದಾರೆ. ಸಿದ್ದರಾಮಯ್ಯ ಅಂಡ್ ಟೀಮ್ ಮಾಡಿರುವ ಈ ಪ್ಲಾನ್​ನ ಎಕ್ಸ್​ಕ್ಲೂಸಿವ್ ಮಾಹಿತಿ ನ್ಯೂಸ್18 ಕನ್ನಡಕ್ಕೆ ಲಭಿಸಿದೆ. ಜೆಡಿಎಸ್ 10 ಕ್ಷೇತ್ರ ಕೇಳಿದ್ದರೂ ಕಾಂಗ್ರೆಸ್ ಎಂಟು ಮಾತ್ರ ನೀಡಲಿದೆ. ಕಾಂಗ್ರೆಸ್ ಸಂಸದರಿರುವ ಯಾವುದೇ ಕ್ಷೇತ್ರವನ್ನೂ ಜೆಡಿಎಸ್​ಗೆ ಬಿಟ್ಟುಕೊಡದಿರಲು ಕೈನಾಯಕರು ನಿರ್ಧರಿಸಿದ್ದಾರೆ. ಅದರಂತೆ ಕಾಂಗ್ರೆಸ್ ಗೆಲುವು ಕಷ್ಟವಿರುವ ಕ್ಷೇತ್ರಗಳನ್ನು ಮಾತ್ರ ಜೆಡಿಎಸ್​ಗೆ ಬಿಟ್ಟುಕೊಡಲಾಗುತ್ತದೆ.

ಜೆಡಿಎಸ್​ಗೆ ಕಾಂಗ್ರೆಸ್ ಕೊಡಲು ಸಿದ್ಧವಿರುವ 8 ಕ್ಷೇತ್ರಗಳು:

1) ಹಾಸನ
2) ಮಂಡ್ಯ
3) ಮೈಸೂರು
Loading...

4) ಶಿವಮೊಗ್ಗ
5) ಉಡುಪಿ-ಚಿಕ್ಕಮಗಳೂರು
6) ಬೆಂಗಳೂರು ಉತ್ತರ
7) ಉತ್ತರ ಕನ್ನಡ
8) ಬೀದರ್

ಈ ಎಂಟು ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿರುವ ಮಾಹಿತಿ ನಮಗೆ ಸಿಕ್ಕಿದೆ. ಈ ಮಾಸ್ಟರ್ ಪ್ಲಾನ್​ನ ರೂವಾರಿ ಸಿದ್ದರಾಮಯ್ಯ ಅವರೆಯೇ. ಇವರ ಜೊತೆಗೆ ಈ ಪ್ಲಾನ್​ನಲ್ಲಿ ಕೈಜೋಡಿಸಿರುವವರು ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಜಿ. ಪರಮೇಶ್ವರ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಎನ್ನಲಾಗಿದೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹಾಸನ ಮತ್ತು ಮಂಡ್ಯದಲ್ಲಿ ಮಾತ್ರ ಗೆದ್ದಿತ್ತು. ವಿವಿಧ ಕಾರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಈ ಮೇಲಿನ ಎಂಟು ಕ್ಷೇತ್ರಗಳಲ್ಲಿ ಗೆಲುವು ಈ ಬಾರಿ ಕಷ್ಟಸಾಧ್ಯವೆಂಬ ವಾತಾವರಣವಿದೆ.

ಕಾಂಗ್ರೆಸ್ ಪಕ್ಷದ ವರಿಷ್ಠರು ಈ 8 ಕ್ಷೇತ್ರಗಳ ಪ್ರಸ್ತಾವವನ್ನು ದೇವೇಗೌಡರ ಮುಂದಿಡುವ ಸಾಧ್ಯತೆ ಇದೆ. ಆದರೆ, ದೊಡ್ಡಗೌಡರು ಈ ಆಫರನ್ನು ಒಪ್ಪಿಕೊಳ್ಳುತ್ತಾರಾ ಎಂಬುದು ಗೊತ್ತಿಲ್ಲ. ಕೊಟ್ಟರೆ ತಮಗೆ 10 ಕ್ಷೇತ್ರ ಕೊಡಿ, ಇಲ್ಲವಾದರೆ ತಮ್ಮಿಚ್ಛೆಯ 8 ಕ್ಷೇತ್ರಗಳನ್ನೇ ಕೊಡಿ ಎಂದು ದೇವೇಗೌಡರು ದುಂಬಾಲು ಬೀಳಬಹುದು. ಈ ಆಟ ಪ್ರತ್ಯಾಟದಲ್ಲಿ ಅಂತಿಮವಾಗಿ ಯಾರು ಗೆಲ್ಲುತ್ತಾರೆ? ಲೋಕಸಭೆ ಚುನಾವಣೆಯೊಳಗೆಯೇ ಮೈತ್ರಿ ಮುರಿದುಬೀಳುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ.
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ