ನಾಲ್ವರು​ ಎಂಎಲ್​ಎಗಳನ್ನು ಅನರ್ಹಗೊಳಿಸುವಂತೆ ಸ್ಪೀಕರ್​ಗೆ ದೂರು ಸಲ್ಲಿಸಿದ ಸಿದ್ದರಾಮಯ್ಯ; ರೆಬೆಲ್ ಶಾಸಕರಿಗೆ ಆಪತ್ತು ಖಚಿತ ?

ಶಾಸಕರಾದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಳ್ಳಿ, ಉಮೇಶ್​ ಜಾಧವ್​ ಹಾಗೂ ನಾಗೇಂದ್ರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದೂರು ನೀಡಲಾಗಿದೆ.

HR Ramesh | news18
Updated:February 11, 2019, 6:48 PM IST
ನಾಲ್ವರು​ ಎಂಎಲ್​ಎಗಳನ್ನು ಅನರ್ಹಗೊಳಿಸುವಂತೆ ಸ್ಪೀಕರ್​ಗೆ ದೂರು ಸಲ್ಲಿಸಿದ ಸಿದ್ದರಾಮಯ್ಯ; ರೆಬೆಲ್ ಶಾಸಕರಿಗೆ ಆಪತ್ತು ಖಚಿತ ?
ಸ್ಪೀಕರ್​ ರಮೇಶ್​ ಕುಮಾರ್ ಅವರಿಗೆ ದೂರು ಸಲ್ಲಿಸುತ್ತಿರುವ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಪರಮೇಶ್ವರ್
HR Ramesh | news18
Updated: February 11, 2019, 6:48 PM IST
ಬೆಂಗಳೂರು: ಪಕ್ಷದ ವಿಪ್​ ಉಲ್ಲಂಘಿಸಿದ ಆರೋಪದಡಿ ಕಾಂಗ್ರೆಸ್​ನ ನಾಲ್ವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಕೈ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದರು.

ವಿಧಾನಸೌಧದಲ್ಲಿ ಸ್ಪೀಕರ್​ ಅವರನ್ನು ಭೇಟಿಯಾದ ಸಿದ್ದರಾಮಯ್ಯ, ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗುವಂತೆ ನೀಡಿದ್ದ ವಿಪ್​ ಉಲ್ಲಂಘನೆ, ನೋಟಿಸ್​ಗೆ ಸಮರ್ಪಕ ಉತ್ತರ ನೀಡದೆ ಇರುವುದು ಹಾಗೂ ಬಜೆಟ್​ ಅಧಿವೇಶನಕ್ಕೂ ಗೈರಾದ ಹಿನ್ನೆಲೆಯಲ್ಲಿ ಶಾಸಕರನ್ನು ಅನರ್ಹಗೊಳಿಸುವಂತೆ ದೂರು ನೀಡಿದರು. ಸಿದ್ದರಾಮಯ್ಯ ಅವರಿಗೆ  ಸಚಿವ ಕೃಷ್ಣಬೈರೇಗೌಡ,, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಸಾಥ್ ನೀಡಿದರು.

ಇದನ್ನು ಓದಿ: 50 ಕೋಟಿ ಲಂಚ ಆರೋಪ: ಸ್ಪೀಕರ್​​ ಕಣ್ಣೀರು ಮತ್ತು ಶಾಸಕರ ಪ್ರತಿಕ್ರಿಯೆ!

ಅತೃಪ್ತ ಶಾಸಕರ ಅನರ್ಹಗೊಳಿಸುವ ಸಂಬಂಧ ಸಿದ್ದರಾಮಯ್ಯ ಅವರು ವಕೀಲ ಶಶಿಕಿರಣ ಮತ್ತು ತಂಡದಿಂದ ಕಾನೂನು ಸಲಹೆ ಪಡೆದು, ಬಳಿಕ ಸ್ಪೀಕರ್​ಗೆ ದೂರು ನೀಡಿದ್ದಾರೆ. ಒಟ್ಟು 82 ಪುಟಗಳ ದೂರು ಪ್ರತಿಯನ್ನು ಸ್ಪೀಕರ್​ಗೆ ಸಲ್ಲಿಸಲಾಗಿದೆ.

ಪತ್ರಿಕಾ ವರದಿಗಳು, ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆ, ಸಿಎಲ್​ಪಿ ಸಂಬಂಧ ನೀಡಿದ ನೊಟೀಸ್ ಪ್ರತಿಗಳ ಸಮೇತ 82 ಪುಟಗಳ ದೂರು ಪ್ರತಿಯನ್ನು ಸ್ಪೀಕರ್​ಗೆ ಸಲ್ಲಿಸಲಾಗಿದೆ.

ಶಾಸಕರಾದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಳ್ಳಿ, ಉಮೇಶ್​ ಜಾಧವ್​ ಹಾಗೂ ನಾಗೇಂದ್ರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದೂರು ನೀಡಲಾಗಿದೆ.
Loading...
ಅನರ್ಹತೆ ಗ್ಯಾರಂಟಿ?

ಪಕ್ಷದ ವಿಪ್, ಆದೇಶ, ಸೂಚನೆಗಳನ್ನ ಉಲ್ಲಂಘಿಸಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರನ್ನು ಅನರ್ಹ ಮಾಡಿ ಎಂದು ಸಿದ್ದರಾಮಯ್ಯ ದೂರು ನೀಡಿದ್ದಾರೆ. ದೂರಿನನ್ವಯ ಈ ಶಾಸಕರಿಗೆ ಸಂಕಷ್ಟು ಗ್ಯಾರಂಟಿ. ಏಕೆಂದರೆ, ಬಿಜೆಪಿ ಸರ್ಕಾರದಲ್ಲಿ ಶಾಸಕರನ್ನು ಅನರ್ಹಗೊಳಿಸಿದ್ದಕ್ಕೂ ಈ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಒಂದು ವೇಳೆ ಶಾಸರನ್ನು ಸ್ಪೀಕರ್​ ಅನರ್ಹಗೊಳಿಸಿದರೂ ಈ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದರೂ ಕಷ್ಟ ಎಂದು ವಕೀಲರು ಹೇಳುತ್ತಿದ್ದಾರೆ.

ಸ್ಪೀಕರ್ ದೂರನ್ನು ಸ್ವೀಕರಿಸಿಯಾಗಿದೆ. ಬಳಿಕ ಕಾನೂನು ತಜ್ಞರ ಮೂಲಕ ಸ್ಪೀಕರ್ ದೂರನ್ನು ಪರಿಶೀಲನೆ ಮಾಡಲಿದ್ದಾರೆ. ಆನಂತರ ಬಳಿಕ ರೆಬೆಲ್ ಶಾಸಕರಿಗೆ ನೋಟಿಸ್ ನೀಡಲಿದ್ದಾರೆ. ನೋಟಿಸ್​ಗೆ ಉತ್ತರ ನೀಡಲು ಸ್ಪೀಕರ್ ಕಾಲಾವಕಾಶ ನೀಡುವ ಸಾಧ್ಯತೆ ಇದೆ. ಬಳಿಕವೇ‌ ಶಾಸಕರನ್ನು ಅನರ್ಹ ಮಾಡಬೇಕೋ ಅಥವಾ ಬೇಡ್ವೋ ಅನ್ನೋ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

 
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626