ಹೈಕಮಾಂಡ್​​ಗೆ ಕ್ಯಾರೇ ಎನ್ನದ ಮಂಡ್ಯ ಕಾಂಗ್ರೆಸ್ಸಿಗರು; ಸುಮಲತಾ ಪರ ಭರ್ಜರಿ ಮತಬೇಟೆ!

ಒಟ್ಟಾರೆ ಇಲ್ಲಿನ ಚುನಾವಣಾ ಅಖಾಡ ಇದೀಗ ರಣಾಂಗಣವಾಗಿದೆ. ಚುನಾವಣೆ ಗೆಲ್ಲಲು ಅಭ್ಯರ್ಥಿಗಳು ತಂತ್ರ ಪ್ರತಿತಂತ್ರ‌ ಎಣೆಯುತ್ತಿದ್ದಾರೆ.‌ ಜಿಲ್ಲೆಯ‌ ಮತದಾರ ಪ್ರಭು‌ ಯಾರನ್ನು ಕೈ ಹಿಡಿಯುತ್ತಾನೆ ಅನ್ನೋದು ಮಾತ್ರ ಕುತೂಹಲವೇ.

Ganesh Nachikethu | news18
Updated:March 28, 2019, 9:10 PM IST
ಹೈಕಮಾಂಡ್​​ಗೆ ಕ್ಯಾರೇ ಎನ್ನದ ಮಂಡ್ಯ ಕಾಂಗ್ರೆಸ್ಸಿಗರು; ಸುಮಲತಾ ಪರ ಭರ್ಜರಿ ಮತಬೇಟೆ!
ಸುಮಲತಾ ಅಂಬರೀಷ್​ ಮತ್ತು ನಿಖಿಲ್ ಕುಮಾರಸ್ವಾಮಿ
  • News18
  • Last Updated: March 28, 2019, 9:10 PM IST
  • Share this:
ಬೆಂಗಳೂರು(ಮಾ.23): ಮಂಡ್ಯದ ಚುನಾವಣಾ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಕ್ಷೇತ್ರದಲ್ಲಿ ಸಿ.ಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬಿ ಪತ್ನಿ ಸುಮಲತಾ ಅಬ್ಬರದ ಪ್ರಚಾರ ಮಾಡುವ ಮೂಲಕ ಮತಬೇಟೆ ಆರಂಭಿಸಿದ್ದಾರೆ. ಕಾಂಗ್ರೆಸ್​​-ಜೆಡಿಎಸ್ ಪಕ್ಷದ ಮೈತ್ರಿ‌ ಅಭ್ಯರ್ಥಿಯಾಗಿ ಕಣದಲ್ಲಿರುವ ನಿಖಿಲ್ ಕಾರ್ಯಕರ್ತರ ಜತೆಗೆ ಪ್ರಚಾರ ಮಾಡುತ್ತಿದ್ದರೇ, ಪಕ್ಷೇತರ ಅಭ್ಯರ್ಥಿ ಸುಮಲತಾ ತನ್ನ ಪತಿ ಅಂಬರೀಶ್​​​​ ಅಭಿಮಾನಿಗಳು ಮತ್ತು ಕೈ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಸುಮಲತಾರಿಗೆ ವಿವಿಧ ಪಕ್ಷಗಳ ಮುಖಂಡರು ಬೆಂಬಲ ನೀಡುವ ಭರವಸೆ ನೀಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಜೆಡಿಎಸ್ ಪಾಳೆಯಲ್ಲಿ ದುಗುಡ ಹೆಚ್ಚಾಗಿದೆ.

ಕಾಂಗ್ರೆಸ್​​ ನಾಯಕರು ಸುಮಲತಾ ಬೆನ್ನಿಗೆ ನಿಂತಿದ್ಧಾರೆ ಎಂದು ಜೆಡಿಎಸ್​ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಅಲ್ಲದೇ ಎಚ್ಚೆತ್ತು ತಮ್ಮ ಸ್ವಂತ ಬಲದಿಂದಲೇ ಜೆಡಿಎಸ್​​ ಗೆಲ್ಲಲು ಅಬ್ಬರದ ಪ್ರಚಾರ ಕೈಗೊಂಡಿದ್ಧಾರೆ. ಜೆಡಿಎಸ್ ಕಾರ್ಯಕರ್ತರ ಜತೆಗೆ ನಿಖಿಲ್​ ನಿನ್ನೆ ಕೆ.ಆರ್ ಪೇಟೇ ಭಾಗದಲ್ಲಿ ಮತಭೇಟೆ ಮಾಡಿದ್ದಾರೆ. ಹಾಗೆಯೇ ಸುಮಲತಾ ಕೂಡ ಇದೇ ಭಾಗದಲ್ಲಿ ನಿನ್ನೆ ತಮ್ಮ ಬೆಂಬಲಿಗರೊಂದಿಗೆ ಮತಯಾಚಿಸಿದ್ದಾರೆ.

ಇನ್ನು ಪ್ರಚಾರದ ಬಳಿಕ ಈ ಬಾರಿ ತಮ್ಮನ್ನು ಬೆಂಬಲಿಸುವಂತೆ ರೈತ ಸಂಘಕ್ಕೆ ಮನವಿ ಮಾಡಿದ್ದಾರೆ. ರೈತ ಸಂಘದ ನಾಯಕರಾಗಿದ್ದ ದಿ.ಪುಟ್ಟಣ್ಣಯ್ಯ ಪತ್ನಿ ಸುನೀತಾ ಅವರನ್ನು ಕ್ಯಾತನಹಳ್ಳಿಯ ಮನೆಯಲ್ಲಿ ಭೇಟಿ ಮಾಡಿದ್ದಾರೆ. ಸುಮಲತಾ ಮನವಿಗೆ ಸ್ಪಂದಿಸಿದ ಸುನೀತಾ ಪುಟ್ಟಣ್ಣಯ್ಯ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮೊದಲ ಚುನಾವಣೆ ಎದುರಿಸುತ್ತಿರುವ ಸುಮಲತಾ ಅಧಿಕೃತ ಆಸ್ತಿ ಎಷ್ಟು?

ಅತ್ತ ಸುಮಲತಾ ಗುಂಪಿನಲ್ಲಿ ಗುರುತಸಿಕೊಳ್ಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪಕ್ಷದ ವರಿಷ್ಠರು ಚಾಟಿ ಬೀಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಕಾರಣ ನೀಡಿ ಕಾಂಗ್ರೆಸ್​​ ಕಾರ್ಯಕರ್ತರಾದ ಇಂಡವಾಳು ಸಚ್ಚಿದಾನಂದ, ಹನಕೆರೆ ಶಶಿ ಎಂಬಿಬ್ಬರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹನಕೆರೆ ಶಶಿ ಪಕ್ಷ ಏನೇ ಅದೇಶ ಮಾಡಿದ್ರು, ಅದಕ್ಕೆ ಬಗ್ಗಲ್ಲ ಎಂದು ಹೇಳಿದ್ದಾರೆ. ಜತೆಗೆ ಕಾಂಗ್ರೆಸ್​​ ಪಕ್ಷದ ಅಸ್ತಿತ್ವಕ್ಕಾಗಿ ಮತ್ತು ಸ್ವಾಭಿಮಾನಕ್ಕಾಗಿ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.

ಇತ್ತ ನಿಖಿಲ್​​​ ಪ್ರಚಾರದ ವೇಳೆ ಬೂಕನಕೆರೆಯಲ್ಲಿ ದರ್ಶನ್ ಅಭಿಮಾನಿಗಳು ಡಿ ಬಾಸ್ ಘೋಣೆ ಕೂಗಿ ಜೆಡಿಎಸ್​​ ಅಭ್ಯರ್ಥಿಗೆ ಮುಜುಗರಕ್ಕೀಡು ಮಾಡಿದ್ದಾರೆ. ಪೊಲೀಸರು ಘೋಷಣೆ ಕೂಗಿದವರ ವಿರುದ್ಧ ಲಾಠಿಪ್ರಹಾರ ಮಾಡಿದ್ದಾರೆ. ಸೋಮನಹಳ್ಳಿ ಬಳಿಯೂ ನಿಖಿಲ್ ಬೆಂಬಲಿಗರ ಕಾರಿಗೆ ಕಿಡಿಗೇಡಿಗಳಿ ಕಲ್ಲು ತೂರಿದ್ದಾರೆ. ಇದರ ಪರಿಣಾಮ ಕಾರು ಜಖಂಗೊಂಡಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ನಾಮಪತ್ರ ಸಲ್ಲಿಕೆ; ಬಹಿರಂಗ ಸಮಾವೇಶಕ್ಕೆ ಹತ್ತಾರು ಸಾವಿರ ಜನ ಆಗಮನ!ಒಟ್ಟಾರೆ ಇಲ್ಲಿನ ಚುನಾವಣಾ ಅಖಾಡ ಇದೀಗ ರಣಾಂಗಣವಾಗಿದೆ. ಚುನಾವಣೆ ಗೆಲ್ಲಲು ಅಭ್ಯರ್ಥಿಗಳು ತಂತ್ರ ಪ್ರತಿತಂತ್ರ‌ ಎಣೆಯುತ್ತಿದ್ದಾರೆ.‌ ಜಿಲ್ಲೆಯ‌ ಮತದಾರ ಪ್ರಭು‌ ಯಾರನ್ನು ಕೈ ಹಿಡಿಯುತ್ತಾನೆ ಅನ್ನೋದು ಮಾತ್ರ ಕುತೂಹಲವೇ.

(ವರದಿ: ರಾಘವೇಂದ್ರ ಗಂಜಾಮ್)
---------------
First published:March 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ