ಮೈಸೂರು (ಡಿ.12): ಕೆಎಸ್ಆರ್ಟಿಸಿ ಅಧಿಕಾರಿಗಳ (KSRTC Officers) ಮೇಲೆ ಶಾಸಕ ತನ್ವೀರ್ ಸೇಠ್ (MLA Tanveer Sait) ಬೆಂಬಲಿಗರು ಗೂಂಡಾಗಿರಿ ಮಾಡಿರುವ ಘಟನೆ ಮೈಸೂರಿನ (Mysuru) ಸಾತಗಳ್ಳಿ ಬಸ್ ಡಿಪೋ ಆವರಣದಲ್ಲಿ ನಡೆದಿದೆ. ಡಿಪೋಗೆ (Depot) ಬಂದ ಮಹಿಳೆಯೊಬ್ಬರು ಸ್ಥಳದಲ್ಲಿ ರಂಪಾಟ ಮಾಡಿದ್ದಾರೆ. ಶಾಸಕ ತನ್ವೀರ್ ಸೇಠ್ ಬೆಂಬಲಿಗರ ಪತ್ನಿ ಪೊಲೀಸರ (Police) ಎದುರಿನಲ್ಲೇ ಅಧಿಕಾರಿಗಳಿಗೆ ಮಚ್ಚು ತೋರಿಸಿ ಧಮ್ಕಿ ಹಾಕಿದ್ದಾರೆ.
KSRTC ಬಸ್ ಡಿಪೋಗೆ ನುಗ್ಗಿ ರಂಪಾಟ
ತನ್ವೀರ್ ಸೇಠ್ ಬೆಂಬಲಿಗ ಷಫಿ ಅಹಮದ್ ಹಾಗೂ ಅವರ ಪತ್ನಿ ಇಬ್ಬರು ಮೈಸೂರಿನ ಸಾತಗಳ್ಳಿ ಬಸ್ ಡಿಪೋದಲ್ಲಿ ರಂಪಾಟ ಮಾಡಿದ್ದಾರೆ. KSRTC ಬಸ್ ನಿಲ್ದಾಣದ ಕಟ್ಟಡವನ್ನು ಬಾಡಿಗೆಗೆ ಪಡೆದಿರುವ ಷಫಿ ಅಹಮದ್, 1 ಕೋಟಿ 80 ಲಕ್ಷ ರೂ. ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಗಂಡ ಹೆಂಡತಿ ಇಬ್ಬರು ಖಾಸಗಿ ಶಾಲೆ ನಡೆಸಲು KRSTC ಬಸ್ ನಿಲ್ದಾಣದ ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದರು.
ಬಾಡಿಗೆ ಕೇಳಿದ್ದಕ್ಕೆ ರೌದ್ರಾವತಾರ ತೋರಿದ ಮಹಿಳೆ
KRSTC ಬಸ್ ನಿಲ್ದಾಣದ ಕಟ್ಟಡವನ್ನು ಕಳೆದ 3- 4 ವರ್ಷಗಳ ಹಿಂದೆಯೇ ಬಾಡಿಗೆಗೆ ಪಡೆದಿದ್ದಾರೆ. ಇಂದು ಅಧಿಕಾರಿಗಳು ಬಾಡಿಗೆ ವಸೂಲಿ ಮಾಡಲು ಮುಂದಾದಾಗ ಮಹಿಳೆ ರೌದ್ರಾವತಾರ ತೋರಿದ್ದಾರೆ. ಪೇಪರ್ ಕವರ್ ನಲ್ಲಿ ಮಚ್ಚು ತಂದಿದ್ದ ಷಫಿ ಪತ್ನಿ. ಪೊಲೀಸರ ಎದುರೇ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ.
ಮಚ್ಚಿನಲ್ಲಿ ಕೊಚ್ಚಿ ಹಾಕಿ ಜೈಲಿಗೆ ಹೋಗಲು ರೆಡಿ
ನಾವು ಮುಸ್ಲಿಮರು ಎಂದು ಜೋರಾಗಿ ಕೂಗಿಕೊಳ್ಳುತ್ತಾ, ನಾವು ಮಚ್ಚಿನಲ್ಲಿ ಕೊಚ್ಚಿ ಹಾಕಿ ಜೈಲಿಗೆ ಹೋಗಲು ರೆಡಿ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮಚ್ಚನ್ನು ಕಸಿಯಲು ಬಿಡದೆ ಮಹಿಳೆ ರಂಪಾಟ ಮಾಡಿದ್ದಾರೆ. ಮಹಿಳೆಯ ರಂಪಾಟಕ್ಕೆ ಪೊಲೀಸರು ಹೈರಾಣಾದ್ರು.
ಶಾಸಕರ ಬೆಂಬಲಿಗರ ಬಹಿರಂಗ ಗೂಂಡಾಗಿರಿಗೆ ಉದಯಗಿರಿ, ಶಾಂತಿನಗರದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಮಹಿಳೆ ಅಟ್ಟಹಾಸವನ್ನು ಕಡಿಮೆ ಮಾಡಲು ಪೊಲೀಸರು ಪರದಾಡಿದ್ರು.
ಮತ್ತೆ ಪ್ರತಿಭಟನೆಗೆ KSRTC ನೌಕರರ ನಿರ್ಧಾರ
ಕರ್ನಾಟಕ ಸಾರಿಗೆ ನೌಕರರು (KSRTC And BMTC Employees Strike) ಮತ್ತೆ ಪ್ರತಿಭಟನೆ (Protest) ನಡೆಸಲು ತೀರ್ಮಾನಿಸಿದ್ದಾರೆ. ಚಳಿಗಾಲದ ಅಧಿವೇಶನ (Winter Session) ಸಂದರ್ಭದಲ್ಲಿ ಬೇಡಿಕೆ ಈಡೇರಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ಇಲಾಖೆಯ ಎಲ್ಲಾ ವಿಭಾಗದ ಸಿಬ್ಬಂದಿ ಪ್ರತಿಭಟನೆ ನಡೆಸುವ ಕುರಿತು ಚಿಂತನೆ ನಡೆಸಿದ್ದಾರೆ. ಪ್ರತಿಭಟನೆ ಒಂದು ಅಥವಾ ಎರಡು ದಿನಕ್ಕೆ ಸೀಮಿತವಾದ್ರೆ ಸಾರ್ವಜನಿಕರಿಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬಹುದು.
ಬಸ್ ಸಂಚಾರ ಸ್ಥಗಿತ ಸಾಧ್ಯತೆ
ಆದ್ರೆ ಕಳೆದ ಬಾರಿಯಂತೆ ವಾರಗಟ್ಟಲೇ ಬಸ್ ಸಂಚಾರ (Bus Bandh) ಸ್ಥಗಿತಗೊಂಡದ್ರೆ ಕೆಳ ಹಾಗೂ ಮಧ್ಯಮ ವರ್ಗ ಜನತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಕೊನೆ ಬಾರಿ ಪ್ರತಿಭಟನೆ ನಡೆಸಿದಾಗ ಸರ್ಕಾರ (Karnataka Government) ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿತ್ತು. ಬೇಡಿಕೆ ಈಡೇರದ ಹಿನ್ನೆಲೆ ಮತ್ತೆ ರಸ್ತೆಗೆ ಇಳಿಯಲು ಮುಂದಾಗಿದ್ದಾರೆ.
ಇದನ್ನೂ ಓದಿ: Zika Virus: ರಾಯಚೂರಿನಲ್ಲಿ 5 ವರ್ಷದ ಬಾಲಕಿಗೆ ಶಂಕಿತ ಝಿಕಾ ವೈರಸ್ ಪತ್ತೆ
ವಿವಿಧ ಬೇಡಿಕೆಗಳೊಂದಿಗೆ ರಾಜ್ಯವ್ಯಾಪಿ ಮುಷ್ಕರ ನಡೆಸಲು ಸಾರಿಗೆ ಸಿಬ್ಬಂದಿ ಮುಂದಾಗಿದ್ದು, ಈ ಸಂಬಂಧ ರೂಪುರೇಷ ಸಿದ್ಧಪಡಿಸಲಾಗುತ್ತಿರುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಆದ್ರೆ ಮುಷ್ಕರ ನಡೆಸುವ ದಿನಾಂಕ ಇನ್ನು ಅಂತಿಮಗೊಂಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ